ಜೆಮ್ಶೆಡ್ ಪುರ: ಪ್ರತಿಷ್ಠಿತ ಟಾಟಾ ಕಂಪನಿ ಪ್ರಾಂಗಣದಲ್ಲಿನ ಮುಗಿಲೆತ್ತರದ ಚಿಮಣಿಯನ್ನು ಕೆಲವೇ ಸೆಕೆಂಡ್‌ಗಳಲ್ಲಿ ನೆಲಕ್ಕುರುಳಿಸಲಾಗಿದೆ.
ಜೆಮ್ಶೆಡ್ ಪುರ ಬಳಿಯ ಟಾಟಾ ಸ್ಟೀಲ್ ಪ್ಲ್ಯಾಂಟ್‌ನಲ್ಲಿ ಸುಮಾರು 27 ವರ್ಷ ಹಳೆಯ ಚಿಮಣಿಯನ್ನು ಬದಲಾಯಿಸುವ ಯೋಜನೆ ಹಾಕಿಕೊಳ್ಳಲಾಗಿತ್ತು. ಸುಮಾರು 110 ಮೀಟರ್ ಎತ್ತರದ ಈ ಚಿಮಣಿಯನ್ನು ಒಳಸ್ಫೋಟದ ವಿಧಾನದ ಮೂಲಕ ಕೆಡವಲು ತಂತ್ರಗಾರಿಕೆ ಅನುಸರಿಸಲಾಗಿತ್ತು.
ತಜ್ಞರ ಮಾರ್ಗದರ್ಶನದಲ್ಲಿ ಭಾನುವಾರ ಮಧ್ಯಾಹ್ನ ಕಾರ್ಯಾಚರಣೆ ನಡೆಸಿದ ತಂಡ ಈ ಬಾನೆತ್ತರದ ಚಿಮಣಿಯನ್ನು ಕೇವಲ 11 ಸೆಕೆಂಡ್‌ಗಳಲ್ಲಿ ಕೆಡವಿ ಹಾಕಿದೆ. ಈ ಯಶಸ್ವೀ ಕಾರ್ಯಾಚರಣೆಯ ವೀಡಿಯೋವನ್ನು ಟಾಟಾ ಕಂಪನಿ ಹಂಚಿಕೊಂಡಿದ್ದು ಈ ಕಾರ್ಯಾಚರಣೆಯಲ್ಲಿನ ತಜ್ಞರ ತಂತ್ರಗಾರಿಕೆಯನ್ನು ಕೊಂಡಾಡಿದೆ.
Watch the video of the 110-metre-tall chimney demolition at the #TataSteel Jamshedpur Works – a feat of #engineering excellence! pic.twitter.com/yZhoahBvHJ
— Tata Steel (@TataSteelLtd) November 27, 2022























































