ಇಂದೋರ್: ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆಯಲ್ಲಿ ಕಾಲ್ತುಳಿತ ಸಂಭವಿಸಿ ಹಲವರು ಗಾಯಗೊಂಡ ಘಟನೆ ಮಧ್ಯಪ್ರದೇಶದ ಇಂಧೋರ್ ಬಳಿ ನಡೆದಿದೆ.
Madhya Pradesh | Congress General Secretary KC Venugopal got his hands & knees injured after he fell down during Bharat Jodo Yatra in Indore pic.twitter.com/2qHja8uxZ4
— ANI (@ANI) November 27, 2022
ವಾರಾಂತ್ಯದ ದಿನ ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆಯಲ್ಲಿ ಭಾರೀ ಜನಸಾಗರವೇ ಜಮಾಯಿಸಿತ್ತು. ಈ ನಡುವೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಲು ಯುವಜನ ಸಮೂಹ ಮುಂದಾಗಿದೆ. ಆ ವೇಳೆ ನೂಕುನುಗ್ಗಲು ಉಂಟಾಗಿದೆ. ಈ ನೂಕು ನುಗ್ಗಲು ನಡುವೆ ಕಾಲ್ತುಳಿತದ ಘಟನೆಯೂ ನಡೆದಿದೆ ಎನ್ಬಲಾಗಿದೆ.
LIVE: Shri @RahulGandhi along with Padyatris resume #BharatJodoYatra from Bada Ganpati Chowraha, Indore, Madhya Pradesh. https://t.co/Ac8eKcxycB
— Congress (@INCIndia) November 28, 2022
ಈ ಅಹಿತಕರ ಘಟನೆಯಲ್ಲಿ ಕೆಲವರು ಗಾಯಗೊಂಡಿದ್ದು, ಅವರಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಕೆ.ಸಿ.ವೇಣುಗೋಪಾಲ್ ಕೂಡಾ ಸೇರಿದ್ದಾರೆ. ಗಾಯಗೊಂಡಿರುವ ವೇಣುಗೋಪಾಲ್ ಅವರಿಗೆ ಭಾರತ್ ಜೋಡೋ ಯಾತ್ರೆಯ ಚಿಕಿತ್ಸಾ ಶಿಬಿರದಲ್ಲಿ ಚಿಕಿತ್ಸೆ ಕೊಡಿಸಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.























































