ಮುಂಬಯಿ: ಮಹಾರಾಷ್ಟ್ರದಲ್ಲಿರುವ ಬಿಜೆಪಿ ಬೆಂಬಲಿತ ಸರ್ಕಾರ ಇದೀಗ ಬೆಳಗಾವಿ ಗಡಿತಂಟೆ ವಿಚಾರದಲ್ಲಿ ಕರ್ನಾಟಕವನ್ನು ಕೆರಳಿಸುವ ಪ್ರಯತ್ನಕ್ಕಿಳಿದಿದೆ. ಈವರೆಗೂ ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಬೆಳಗಾವಿ ಗಡಿ ವಿಚಾರದಲ್ಲಿ ಕರ್ನಾಟಕವನ್ನು ಕೆಣಕಿದ್ದರು. ‘ಕರ್ನಾಟಕದಲ್ಲಿರುವ ಮರಾಠಿ ಭಾಷಿಕ ಭಾಗವನ್ನು ತಮ್ಮ ರಾಜ್ಯಕ್ಕೆ ಸೇರಿಸಲಾಗುವುದು ಎಂದಿದ್ದರು.
ಇದೀಗ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಕೂಡಾ ಅಲ್ಲಿನ ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಮಾದರಿಯಲ್ಲೇ ಹೇಳಿಕೆ ನೀಡಿದ್ದಾರೆ. ಮಹಾರಾಷ್ಟ್ರದ ಒಂದಿಂಚೂ ಭೂಮಿಯನ್ನೂ ಯಾರಿಗೂ ಬಿಟ್ಟುಕೊಡುವುದಿಲ್ಲ ಎಂದಿರುವ ಸಿಎಂ ಶಿಂಧೆ, ಗಡಿ ಭಾಗದಲ್ಲಿರುವ 40 ಗ್ರಾಮಗಳ ಸಮಸ್ಯೆಯನ್ನು ಬಗೆಹರಿಸುವುದು ನಮ್ಮ ಸರ್ಕಾರದ ಜವಾಬ್ಧಾರಿಯಾಗಿದೆ’ ಎಂದು ಹೇಳಿದ್ದಾರೆ.
Pune, Maharashtra | Maratha Mahasangh protest against Kartana CM Bommai over his statement on Karnataka Maharashtra border dispute, paint over Karnataka buses (24.11) pic.twitter.com/ogfZqJ08gg
— ANI (@ANI) November 25, 2022
ಈ ನಡುವೆ, ಗಡಿ ವಿವಾದ ಸಂಬಂಧ ಕರ್ನಾಟಕ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಹೇಳಿಕೆ ಖಂಡಿಸಿ ಪುಣೆ ಬಳಿ ಕೆಲವು ಪುಂಡರ ಗುಂಪು ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬಸ್ಸುಗಳ ಮೇಲೆ ಪ್ರಚೋದನಕಾರಿ ಬರಹಗಳನ್ನು ಬರೆದು ಪುಂಡಾಟ ಪ್ರದರ್ಶಿಸಿದೆ.





































































