ಕಬ್ಬು ಬೆಳೆಗಾರ ರೈತರಿಂದ ಮುಖ್ಯಮಂತ್ರಿ ಮನೆ ಮುಂದೆ ಆಹೋರಾತ್ರಿ ಧರಣಿ 2ನೇ ದಿನ.. ಸುಗರ್ ಮಾಫಿಯಾ ವಿರುದ್ಧ ಪೂರಕೆ ಹಿಡಿದು ಆಕ್ರೋಶ..
ಕಬ್ಬಿನ ಎಫ್ ಆರ್ ಪಿ ಹೆಚ್ಚುವರಿ ದರ ನಿಗದಿ ವಿಚಾರದಲ್ಲಿ ರಾಜ್ಯ ಸರ್ಕಾರದ ವಿಳಂಬ ನೀತಿ ಖಂಡಿಸಿ ಕಬ್ಬು ಬೆಳೆಗಾರ ರೈತರು ಮುಖ್ಯಮಂತ್ರಿ ಮನೆ ಮುಂದೆ ನಡೆಸುತ್ತಿರುವ ನಿರಂತರ ಆಹೋರಾತ್ರಿ ಧರಣಿಯ 2ನೇ ದಿನವಾದ ಇಂದು ಪೂರಕೆ ಚಳುವಳಿ ಮೂಲಕ ಮುಂದುವರಿಯಿತು.
ಕಬ್ಬು ಬೆಳೆಗಾರರ ನಿರಂತರ ಆಹೂ ರಾತ್ರಿ ಧರಣಿ 2ನೆ ದಿನವೂ ಸರ್ಕಾರಕ್ಕೆ ಮುಜುಗರ ತರುವಂತಿತ್ತು. ಕಬ್ಬಿಗೆ ಹೆಚ್ಚುವರಿ ದರ ನಿಗದಿ ಬಗ್ಗೆ ತಜ್ಞರ ಸಮಿತಿ ರಚಿಸಿ ಐದು ದಿನದಲ್ಲಿ ವರದಿ ಪಡೆದು 20ರ ಒಳಗಾಗಿ ತಿರ್ಮಾನ ಕೈಗೂಳುವ ಸರ್ಕಾರದ ಭರವಸೆ ಹುಸಿಯಾದ ಕಾರಣ ಬೆಳೆಗಾರರ ಈ ರೀತಿ ಆಕ್ರೋಶ ಸ್ಫೋಟಗೊಂಡಿದೆ. ಸಕ್ಕರೆ ಸಚಿವರು ನುಡಿದಂತೆ ನಡೆದಿಲ್ಲ ಎಂದು ಅರೋಪಿಸಿ, ರೈತರು ನ್ಯಾಯ ಸಿಗುವವರೆಗೆ ಚಳುವಳಿ ಆರಂಭಿಸಿದ್ದಾರೆ.
ಇವು ರೈತರ ಆಕ್ರೋಶದ ನುಡಿಗಳು:
-
ಕಬ್ಬು ಉತ್ಪಾದನೆ ವೆಚ್ಚ ಶೇಕಡ 20ರಷ್ಟು ಏರಿಕೆಯಾಗಿದೆ. ಆದರೆ ಕೇಂದ್ರ ಸರ್ಕಾರ ಎಫ್ಆರ್ಪಿ ದರ ನಿಗದಿ ಮಾಡುವಾಗ ರೈತರ ಕಣ್ಣಿಗೆ ಮಣ್ಣೆರಚಿದೆ.
-
ಸಕ್ಕರೆ ಕಾರ್ಖಾನೆಗಳು ಕಬ್ಬಿನ ಕಟಾವು ಸಾಗಾಣಿಕೆ ವೆಚ್ಚದಲ್ಲಿ ರೈತರನ್ನು ಸುಲಿಗೆ ಮಾಡುತ್ತಿದೆ. ಲಗಾಣಿ ಹೆಚ್ಚು ಪಡೆಯುತ್ತಿವೆ.
-
ಕಬ್ಬು ಕಟಾವು 16 ತಿಂಗಳಾಗುತ್ತಿದೆ ಸಾಗಾಣಿಕೆ ವೆಚ್ಚ ಎಲ್ಲ ದೂರಕ್ಕೂ ಒಂದೆ ದರ ನಿಗದಿ ಮಾಡಿ ರೈತರನ್ನ ವಂಚಿಸಲಾಗುತ್ತಿದೆ.
-
ರೈತರಿಗೆ ನೂರಾರು ಕೋಟಿ ರೂಪಾಯಿ ಮೋಸವಾಗುತ್ತಿದೆ.
-
ಕಬ್ಬು ಪೂರೈಕೆ ಮಾಡಿದ ರೈತನಿಗೆ14 ದಿನದಲ್ಲಿ ಹಣ ಪಾವತಿಸಬೇಕೆಂಬ ನಿಯಮವಿರೂ ಅದು ಪಾಲನೆಯಾಗುತ್ತಿಲ್ಲ.
-
ಯಾವ ಜಿಲ್ಲಾಧಿಕಾರಿಗಳು ಕಾರ್ಖಾನೆಗಳ ಮೇಲೆ ಕ್ರಮ ಕೈಗೊಳ್ಳುತ್ತಿಲ್ಲ.
-
ಈ ಬಗ್ಗೆ ರೈತರು ದೂರು ನೀಡಿದರೆ ದೂರುಗಳು ಕಸದ ಬುಟ್ಟಿ ಸೇರುತಿದೆ.
-
ಬೆಳಗಾವಿ ಜಿಲ್ಲೆಯಲ್ಲಿ 189 ರೈತರು ಕಬ್ಬಿನ ಹಣ ಬಂದಿಲ್ಲ ಎಂದು ದೂರು ನೀಡಿ ಈ ಬಗ್ಗೆ ತನಿಖೆ ನಡೆದು ದೃಢಪಟ್ಟರೂ ಯಾವುದೇ ಕ್ರಮ ಜಾರಿಯಾಗಿಲ್ಲ.
ಧರಣಿಯ ನಡುವೆ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದ ಕಬ್ಬು ಬೆಳೆಗಾರರು, ಕಬ್ಬು ಕಟಾವು16-18 ತಿಂಗಳು ವಿಳಂಬವಾಗುತ್ತಿದೆ ಈ ರೀತಿ ವಿಳಂಬವಾಗಿ ಕಟಾವು ಮಾಡಿದ ಕಬ್ಬಿಗೆ ವಿಳಂಬದ ಅವಧಿಗೆ ಶೇಕಡ 15 ಬಡ್ಡಿ ಸೇರಿಸಿ ಹೆಚ್ಚುವರಿ ಹಣ ಕಾರ್ಖಾನೆಗಳು ನೀಡುವಂತಾಗಬೇಕು ಎಂದು ಆಗ್ರಹಿಸಿದ ಕಬ್ಬು ಬೆಳೆಗಾರರು, ಸರ್ಕಾರ ಪದೇ ಪದೇ ಕಾರ್ಖಾನೆ ಮಾಲೀಕರ ಸಭೆ ಕರೆದು ತ್ಯಾಪೆ ಹಾಕುವುದು ಏಕೆ, ಕಾನುನಾತ್ಮಕ ಅಧಿಕಾರಿ ಇಲ್ಲವೇ ಹಾಗಾದರೆ ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಹೇಗೆ ಹೆಚ್ಚುವರಿ ಬೆಲೆ ನಿಗದಿ ಮಾಡಿದ್ದಾರೆ, ಸರ್ಕಾರ ತನ್ನ ಜವಾಬ್ದಾರಿಯಿಂದ ಜಾರಿಕೊಳ್ಳಬಾರದು, ಯಾವುದೇ ಕಾರಣಕ್ಕೂ ಚಳುವಳಿ ಕೈ ಬಿಡುವುದಿಲ್ಲ, ಹುಸಿ ಬರವಸೆಗಳು ಬೇಡ ಎಂದರು.
ಬ್ಯಾಂಕುಗಳು ರೈತರಿಗೆ ಸಾಲ ನೀಡುವಾಗ ಸಿಬಿಲ್ ಸ್ಕೋರ್ ಪರಿಗಣಿಸುತ್ತಿವೆ. ಈ ರೀತಿ ಸಾಲ ನೀಡುವ ಪದ್ಧತಿ ಕೈಬಿಡಬೇಕು ಎಂದು 5 ತಿಂಗಳ ಹಿಂದೆ ರಿಸರ್ವ್ ಬ್ಯಾಂಕ್ ಮುಂದೆ ಚಳುವಳಿ ನಡೆಸಿದಾಗ ಮುಖ್ಯಸ್ಥರು ಬ್ಯಾಂಕುಗಳ ಮುಖ್ಯಸ್ಥರ ಸಭೆ ಕರೆಯುವ ಭರವಸೆ ನೀಡಿದ್ದರು. ಸಭೆ ಕರೆದು ಸಮಸ್ಯೆ ಬಗೆಹರಿಸದ ಇದ್ದ ಕಾರಣ ಮೈಸೂರು ಜಿಲ್ಲೆಯಲ್ಲಿ ರೈತನೂಬ್ಬ ಸಿಬಿಲ್ ಸ್ಕೋರ್ ಇಲ್ಲದ ಕಾರಣ ಕರ್ನಾಟಕ ಗ್ರಾಮೀಣ ಬ್ಯಾಂಕ್ ನಲ್ಲಿ ಸಾಲ ಸಿಗುತ್ತಿಲ್ಲ ಎಂದು ವಿಷ ಸೇವಿಸಿ ಇಂದು ಸಾವನಪ್ಪಿದ್ದಾನೆ ಈ ರೀತಿ ಸರ್ಕಾರಗಳ ನಿರ್ಲಕ್ಷ್ಯವೆ ಕಾರಣವಾಗಿದೆ ಎಂದು ರೈತರು ಆಕ್ರೋಶ ಹೊರಹಾಕಿದರು.
ಇಂದಿನ ಚಳುವಳಿಯಲ್ಲಿ, ಉತ್ತರ ಕನ್ನಡ ಜಿಲ್ಲಾಧ್ಯಕ್ಷ ಕುಮಾರ್ ಬುಬಾಟಿ, ಧಾರವಾಡ ಜಿಲ್ಲಾಧ್ಯಕ್ಷ ನಿಜಗುಣ ಕೆಲಗೇರಿ ,ರಾಜ್ಯ ಉಪಾಧ್ಯಕ್ಷರಾದ ಸುರೇಶ್ ಮ ಪಾಟೀಲ್, ಉಳುವಪ್ಪ ಬಳಗೇರಿ, ನಿಂಗನಗೌಡರು, ಬೆಳಗಾವಿ ಜಿಲ್ಲಾಧ್ಯಕ್ಷ ಗುರುಸಿದ್ದಪ ಕೂಟಗಿ ,ಎಸ್ ಡಿ ಸಿದ್ನಾಳ, ಬಾಗಲಕೋಟೆ ಜಿಲ್ಲಾ ಉಪಾಧ್ಯಕ್ಷ ಕಲ್ಲಪ್ಪ ಬಿರಾದಾರ, ಹೋರಾಟಗಾರರಾದ ಜಿ ವಿ ಲಕ್ಷ್ಮಿದೇವಿ, ಮಂಜುಳಾ ಪಾಟೀಲ್, ಪಿ ಸೂಮಶೇಖರ್, ಮೈಸೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಬರಡನಪುರ ನಾಗರಾಜ್, ಕಿರಗಸೂರ್ ಶಂಕರ,ಹಾಡ್ಯರವಿ ಹಾಗೂ ನೂರಾರು ರೈತರು ಭಾಗವಹಿಸಿದ್ದರು.
ಇದೇ ವೇಳೆ, ಬಗರ್ ಹುಕುಂ ಸಾಗುವಳಿ ಹತ್ತಾರು ವರ್ಷಗಳಿಂದ ಕೃಷಿ ಮಾಡುತ್ತಿರುವ ರೈತರಿಗೆ ಸಾಗುವಳಿ ಪತ್ರ,ಅರಣ್ಯ ಭೂಮಿಯನ್ನು ವ್ಯವಸಾಯ ಮಾಡುತ್ತಿರುವ ರೈತರಿಗೆ ಸಾಗುವಳಿ ಪಟ್ಟಾವನ್ನು ನೀಡದ ಇರುವ ಕಾರಣ ರಿಯಲ್ ಎಸ್ಟೇಟ್ ದಂಧೆ ನಡೆಸುವವರು, ನಗರಗಳಲ್ಲಿ ವಾಸಿಸುತ್ತಿರುವ ಕೆಲವರು ಗಣಕೀಕರಣವಾಗುವಾಗ, ವಾಮಮಾರ್ಗದ ಮೂಲಕ ದಾಖಲೆಗಳನ್ನು ಸೃಷ್ಟಿಸಿ ರೈತರನ್ನು ವಕ್ಕಲೆಬ್ಬಿಸುತಿದ್ದರೆ , ಸರ್ಕಾರ ತನಿಖೆ ನಡೆಸಿ ಹತ್ತಾರು ವರ್ಷಗಳಿಂದ ವ್ಯವಸಾಯ ಮಾಡುತ್ತಿರುವ ರೈತರಿಗೆ ನ್ಯಾಯನೀಡಬೇಕು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ. ರಾಜ್ಯ ಸರ್ಕಾರ ನಿರ್ಧಾರ ಕೈಗೊಳ್ಳುವವರೆಗೆ ಹೋರಾಟ ನಿಲ್ಲದು ಎಂದವರು ಹೇಳಿದ್ದಾರೆ.



















































