ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬಳಿ ಸ್ಥಾಪನೆಯಾಗಿರುವ ನಾಡಪ್ರಭು ಕೆಂಪೇಗೌಡ ಪ್ರತಿಮೆ ಎಲ್ಲರ ಕುತೂಹಲದ ಕೇಂದ್ರಬಿಂದುವಾಗಿದೆ. ‘ಪ್ರಗತಿಯ ಸಂಕೇತ’ವಾಗಿ ಸ್ಥಾಪಿಸಲಾಗಿರುವ ಈ ಕಂಚಿನ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ನ.11ರಂದು ಅನಾವರಣ ಮಾಡಿದ್ದರು.
ದೇಶವ್ಯಾಪಿ ಜನರ ಗಮನ ಕೇಂದ್ರೀಕರಿಸಿದ್ದ ಪ್ರಧಾನಿ ಕಾರ್ಯಕ್ರಮ ಬಳಿಕ ಇದೀಗ ಬೆಂಗಳೂರು ಸುತ್ತಮುತ್ತಲ ಜನರು ಈ ಅಂಬರ ಚುಂಬನದ ಕೆಂಪೇಗೌಡರ ಮೂರ್ತಿ ವೀಕ್ಷಿಸಲು ಭಾರೀ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ..
ರಾಜಧಾನಿ ಬೆಂಗಳೂರು ಪಾಲಿಗೆ ಇದು ಅಪರೂಪದ ಪ್ರತಿಮೆ. ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಪರಿಕಲ್ಪನೆಯ ಈ ನಗರವು ಪ್ರಸ್ತುತ ಉದ್ಯಾನ ನಗರಿ, ಸಿಲಿಕಾನ್ ಸಿಟಿ, ಐಟಿ-ಬಿಟಿ ಹಬ್ ಇತ್ಯಾದಿ ಹೆಸರುಗಳಿಂದಾಗಿ ಜಾಗತಿಕ ಗಮನಸೆಳೆಯುತ್ತಿದೆ. ಈ ಕಾರಣದಿಂದಲೇ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು ‘ಪ್ರಗತಿಯ ಪ್ರತಿಮೆ’ಯನ್ಬು ಸ್ಥಾಪಿಸಲು ಕ್ರಮವಹಿಸಿದರು. ಬೆಂಗಳೂರಿಗೆ ಭೇಟಿ ನೀಡುವ ಜಗತ್ತಿನ ಮಂದಿಯ ಚಿತ್ತ ಸೆಳೆಯಬಲ್ಲ ಈ ಕಂಚಿನ ಮೂರ್ತಿಯನ್ಬು ನೋಡಿ ಕಣ್ತುಂಬಿಕೊಳ್ಳಲು ಉದ್ಯಾನ ನಗರಿಯ ಜನರೂ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ಧಾಣ ಬಳಿಗೆ ದೌಡಾಯಿಸುತ್ತಿದ್ದಾರೆ.
ಈ ಬೃಹತ್ ಪ್ರತಿಮೆ ಕಂಡು ಪುಳಕಿತರಾಗುತ್ತಿರುವ ಜನಸಮೂಹ, ಪ್ರತಿಮಯಬಳಿ ಸೆಲ್ಫೀ ತೆಗೆದು ಸಂಭ್ರಮಿಸುತ್ತಿರುವ ಕ್ಷಣಗಳು ಗಮನಸೆಳೆದಿದೆ. ಈ ಸನ್ನಿವೇಶದ ಚಿತ್ರಗಳನ್ನು ಸಚಿವ ಅಶ್ವತ್ಥನಾರಾಯಣ ಅವರು ಟ್ವೀಟ್ ಮಾಡಿ ಹಂಚಿಕೊಂಡಿದ್ದಾರೆ. ಈ ಫೊಟೋ ವೀಡಿಯೋಗಳಿಗೆ ಸಾರ್ವಜನಿಕ ವಲಯದಲ್ಲಿ ಸಕತ್ ಮೆಚ್ಚುಗೆ ವ್ಯಕ್ತವಾಗಿದೆ.
ವೀಕೆಂಡ್ ಸಮಯದಲ್ಲಿ ನಾಡಪ್ರಭು ಕೆಂಪೇಗೌಡರ ಭವ್ಯ ಪ್ರತಿಮೆಯನ್ನು ಕಣ್ತುಂಬಿಕೊಳ್ಳಲು ಮಳೆಯನ್ನೂ ಲೆಕ್ಕಿಸದೆ ಬಂದ ನಮ್ಮ ನಾಡಿನ ಜನತೆ!#StatueOfProsperity – Namma Bengaluru's New Landmark, Our Pride. pic.twitter.com/NTWw4T4gaT
— Dr. C.N. Ashwath Narayan (ಮೋದಿ ಅವರ ಪರಿವಾರ) (@drashwathcn) November 12, 2022