ಬೆಂಗಳೂರು: ಮಹತ್ವಾಕಾಂಕ್ಷೆಯ ‘ಕೋಟಿ ಕಂಠ ಗಾಯನ’ ಕಾರ್ಯಕ್ರಮದಲ್ಲಿ ಭಾಗವಹಿಸಲು ಈಗಾಗಲೇ ಬರೋಬ್ಬರಿ ಒಂದು ಕೋಟಿಗೂ ಹೆಚ್ಚು ಜನ ಹೆಸರು ನೋಂದಾಯಿಸಿಕೊಂಡಿದ್ದಾರೆ. ನಿರೀಕ್ಷೆಗೂ ಮೀರಿ ಜನರು ಭಾಗವಹಿಸಲಿದ್ದಾರೆ.
ಸುಮಾರು ಒಂದು ಕೋಟಿ ಜನರು ಭಾಗವಹಿಸುವ ನಿರೀಕ್ಷೆ ಇತ್ತು. ಇದೀಗ ನಿರೀಕ್ಷೆ ಮೀರಿ ಯಶಸ್ಸಿನ ಮುನ್ಸೂಚನೆ ವ್ಯಕ್ತವಾಗಿದೆ.
ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವ ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್ ಕುಮಾರ್, ‘ಕನ್ನಡಿಗರ ಹೆಮ್ಮೆ”ಕೋಟಿ ಕಂಠ ಗಾಯನ”ಕ್ಕೆ ನಿರೀಕ್ಷೆಗೂ ಮೀರಿದ ಜನಸ್ಪಂದನೆ ದೊರೆತಿದ್ದು, 29 ರಾಜ್ಯಗಳ ಹಾಗೂ 45 ರಾಷ್ಟ್ರಗಳ ಬರೋಬ್ಬರಿ 1 ಕೋಟಿ 10 ಲಕ್ಷ ಕನ್ನಡ ಪ್ರೇಮಿಗಳು ಈಗಾಗಲೇ ನೋಂದಣಿ ಮಾಡಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಈ ಕಾರ್ಯಕ್ರಮ ನಿಮಿತ್ತ ಈಗಾಗಲೇ 50ಕ್ಕೂ ಹೆಚ್ಚು ಸಭೆಗಳನ್ನು ನಡೆಸಲಾಗಿದ್ದು,ಎಲ್ಲಾ ಸಂಘಟನೆಗಳು ಸಂಪೂರ್ಣ ಬೆಂಬಲ ನೀಡಿವೆ ಎಂದು ಅವರು ತಿಳಿಸಿದ್ದಾರೆ.
ಕನ್ನಡಿಗರ ಹೆಮ್ಮೆ"ಕೋಟಿ ಕಂಠ ಗಾಯನ"ಕ್ಕೆ ನಿರೀಕ್ಷೆಗೂ ಮೀರಿದ ಜನಸ್ಪಂದನೆ ದೊರೆತಿದ್ದು,29 ರಾಜ್ಯಗಳ ಹಾಗೂ 45 ರಾಷ್ಟ್ರಗಳ ಬರೋಬ್ಬರಿ 1 ಕೋಟಿ 10 ಲಕ್ಷ ಕನ್ನಡ ಪ್ರೇಮಿಗಳು ಈಗಾಗಲೇ ನೋಂದಣಿ ಮಾಡಿಕೊಂಡಿದ್ದಾರೆ.ಈ ಕಾರ್ಯಕ್ರಮ ನಿಮಿತ್ತ ಈಗಾಗಲೇ 50ಕ್ಕೂ ಹೆಚ್ಚು ಸಭೆಗಳನ್ನು ನಡೆಸಲಾಗಿದ್ದು,ಎಲ್ಲಾ ಸಂಘಟನೆಗಳು ಸಂಪೂರ್ಣ ಬೆಂಬಲ ನೀಡಿವೆ.1/2 pic.twitter.com/2pEUT4eyMA
— Sunil Kumar Karkala (Modi Ka Parivar) (@karkalasunil) October 26, 2022







































































