ಲಂಡನ್: ಒಂದೊಮ್ಮೆ ಜಗತ್ತನ್ನೇ ಆಳಿದ ಬ್ರಿಟಿಷ್ ಪಾಳಯದ್ದೀಗ ಆಡಳಿತಗಾರರ ಸ್ಥಾನಕ್ಕೆ ಸೂಕ್ತ ವ್ಯಕ್ತಿಯೇ ಇಲ್ಲ ಎಂಬಂತಿದೆ. ಶತಮಾನದ ಹಿಂದೆ ಭಾರತವನ್ನಾಳಿದ ಬ್ರಿಟನ್ನ್ನು ಇದೀಗ ಭಾರತೀಯನೊಬ್ಬ ಆಳುವ ಸ್ಥಿತಿ ಎದುರಾಗಿದೆ.
ಕೆಲವು ದಿನಗಳ ಅನಿರೀಕ್ಷಿತ ರಾಜಕೀಯ ತಿರುವು ಅಲ್ಲಿ ಭಾರತೀಯ ಸಂಜಾತ ರಿಷಿ ಸುನಕ್ ಅವರು ಪ್ರಧಾನಿ ಪಟ್ಟ ಏರುವ ಅವಕಾಶ ಕಲ್ಪಿಸಿದೆ.
ರಿಷಿ ಸುನಕ್ ಅವರು ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಅಳಿಯ.
ರಿಷಿ ಸುನಕ್ ಅವರು ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಅಳಿಯ. ನಾರಾಯಣ ಮೂರ್ತಿ- ಸುಧಾಮೂರ್ತಿ ಪುತ್ರಿ ಅಕ್ಷತಾ ಅವರ ಪತಿ ರಿಷಿ ಸುನಾಕ್ ಅವರು ಚುನಾವಣಾ ಸಂದರ್ಭದಲ್ಲೇ ಗೆದ್ದು ಬ್ರಿಟನ್ ಪ್ರಧಾನಿಯಾಗುತ್ತಾರೆ ಎಂಬ ವಿಶ್ವಾಸ ಇತ್ತು. ಆದರೆ ಇದೀಗ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಅವರು ಬ್ರಿಟನ್ನ ಪ್ರಧಾನಿ ಗದ್ದುಗೆ ಏರುತ್ತಿದ್ದಾರೆ.

ಬ್ರಿಟನ್ ಪ್ರಧಾನಿಯಾಗುತ್ತಿರುವ ಕರುನಾಡಿನ ಅಳಿಯನಿಗೆ ಅಭಿನಂದನೆಗಳ ಮಹಾಮಳೆಯಾಗುತ್ತಿದೆ. ಗಣ್ಯಾತಿಗಣ್ಯರು ರಿಷಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಇನ್ಫೋಸಿಸ್ ಫೌಂಡೇಷನ್ ಮುಖ್ಯಸ್ಥೆ ಸುಧಾಮೂರ್ತಿ ಅವರೂ ತಮ್ಮ ಅಳಿಯನನ್ನು ಅಭಿನಂದಿಸಿದ್ದಾರೆ. ಅವರು ಮಾಡಿರುವ ಟ್ವೀಟ್ ಗಮನನಸೆಳೆದಿದೆ.
Congratulations rishi pic.twitter.com/pBpFYipjt9
— Sudha_murthy (@sudhamurtyfans) October 24, 2022

















































