ಮಂಗಳೂರು: ಕರಾವಳಿ ದಸರಾದ ಕೇಂದ್ರ ಸ್ಥಾನ ಮಂಗಳೂರಿನ ಕುದ್ರೋಳಿ ದೇಗುಲದಲ್ಲಿನ ವಿಶಿಷ್ಟ ‘ತಿರಂಗ’ ನಾಡಿನ ಗಮನಸೆಳೆದಿದೆ. ಸುಮಾರು 900 ಕೆ.ಜಿ ದವಸ ಧಾನ್ಯದಿಂದ ರಾಷ್ಟ್ರಧ್ವಜ ವಿನ್ಯಾಸೊಳಿಸಿದ ಪ್ರಯತ್ನ ಎಲ್ಲರ ಕುತೂಹಲದ ಕೇಂದ್ರಬಿಂದುವಾಗಿದೆ.
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ನಾವೆಲ್ಲರೂ ಒಂದೇ ಎನ್ನುವ ಭಾವೈಕ್ಯತೆ ಸಾರುವ ಹಿನ್ನೆಲೆಯಲ್ಲಿ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ ಮತ್ತು ‘ಗುರುಬೆಳದಿಂಗಳು ಫೌಂಡೇಶನ್’ ವತಿಯಿಂದ ಸುಮಾರು 900 ಕೆ.ಜಿ ದವಸ ಧಾನ್ಯಗಳಿಂದ ದೇಗುಲ ಅಂಗಣದಲ್ಲಿ ಬೃಹತ್ ತಿರಂಗಾವನ್ನು ವಿಶಿಷ್ಟವಾಗಿ ವಿನ್ಯಾಸಗೊಳಿಸಲಾಗಿದೆ.
ಸ್ವಾತಂತ್ರ್ಯ ದಿನಾಚರಣೆಯ ಮುನ್ನಾದಿನ ಬೆಳಗ್ಗೆ 10.30ರಿಂದ ವೀಕ್ಷಣೆಗೆ ಲಭ್ಯವಿದೆ. ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಸಹಿತ ಗಣ್ಯರ ಉಪಸ್ಥಿತಿಯಲ್ಲಿ ಈ ವಿಶಿಷ್ಟ ತಿರಂಗವನ್ನು ಅನಾವರಣಗೊಳಿಸಲಾಯಿತು. ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಆರ್. ಪದ್ಮರಾಜ್ ಮಾರ್ಗದರ್ಶನದಲ್ಲಿ ಈ ಅನನ್ಯ ತಿರಂಗ ರಚನೆಯ ಪ್ರಯತ್ನ ನಡೆದಿದೆ.
▶ 18 ಗಂಟೆಗಳ ನಿರಂತರ ಶ್ರಮ..
- ‘ಗುರುಬೆಳದಿಂಗಳು’ ಆಶ್ರಯದಲ್ಲಿ
ಕಲಾವಿದ, ಛಾಯಾಗ್ರಾಹಕ ಪುನೀಕ್ ಶೆಟ್ಟಿ ನೇತ್ರತ್ವದಲ್ಲಿ 30 ಗುರುಬೆಳದಿಂಗಳು ಸದಸ್ಯರು ಹಾಗೂ ಕ್ಷೇತ್ರದ ಸಿಬ್ಬಂದಿ ವರ್ಗದ ಸಹಕಾರದಿಂದ
18 ಗಂಟೆಗಳ ನಿರಂತರ ಕಾರ್ಯ ..- ಬಳಸಲಾದ ವಸ್ತುಗಳು: 900 ಕೆಜಿ ಧಾನ್ಯ, 100 ಕೆಜಿ ತರಕಾರಿ, 38 ಅಡಿ ವೃತ್ತ,, 54 ಕಳಶ, 108 ಬಾಲೆಎಲೆ, 500 ವಿಳ್ಯದೆಲೆ, 100 ಕೆಜಿ ಅಕ್ಕಿ..
- ಸ್ಫೂರ್ತಿಯಾದ ತಂಡ : ‘ಗುರುಬೆಳದಿಂಗಳು’ ಅಧ್ಯಕ್ಷ ಆರ್.ಪದ್ಮರಾಜ್, ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಅಭಿವೃದ್ಧಿ ಸಮಿತಿ ಅಧ್ಯಕ್ಷ ದೇವೇಂದ್ರ ಪೂಜಾರಿ, ಗೋಕರ್ಣನಾಥ ಕ್ಷೇತ್ರದ ಉಪಾಧ್ಯಕ್ಷ ಉರ್ಮೀಳಾ ರಮೇಶ್, MCC ಬ್ಯಾಂಕ್ ಅಧ್ಯಕ್ಷ ಅನಿಲ್ ಮೊಂತೇರೋ, ಕಾರ್ಪೊರೇಟರ್ ಅನಿಲ್, ನಮ್ಮ ಕುಡ್ಲ ಚಾನಲ್ ನಿರ್ದೇಶಕ ಲೀಲಾಕ್ಷ ಕರ್ಕೇರಾ, ಕ್ಷೇತ್ರದ ಆಡಳಿತ ಸಮಿತಿ ಸದಸ್ಯೆ ಗೌರವಿ ಪಿ.ಕೆ,, ‘ಗುರುಬೆಳದಿಂಗಳು’ ಸದಸ್ಯರಾದ ಗಜೇಂದ್ರ ಪೂಜಾರಿ, ಅನುಸೂಯ ಸಚಿನ್, ಪ್ರವೀಣ್ ಅಂಚನ್, ಪ್ರಮೋದ್ ಕೋಟ್ಯಾನ್, ಉಪಾಧ್ಯಕ್ಷ ಡಾ.ಬಿ.ಜಿ.ಸುವರ್ಣ, ಚಿತ್ತರಂಜನ್ ಕಂಕಾನಡಿ ಗರೋಡಿ, ಶೈಲೇಂದ್ರ ವೈ ಸುವರ್ಣ, ರವಿ ಪೂಜಾರಿ ಚಿಲಿಂಬಿ, ರಾಜೇಶ್ ಸುವರ್ಣ, ಪ್ರವೀಣ್ ಅಂಚನ್, ಜಯರಾಮ ಕಾರಂದೂರು,ಕೃತಿನ್ ಧೀರಜ್ ಅಮೀನ್, ರಾಜೇಂದ್ರ ಚಿಲಿಂಬಿ, ನವೀನ್ ಸುವರ್ಣ, ಜಯಾನಂದ ಪೂಜಾರಿ, ಮ್ಯಾನೇಜರ್ ವಿನೀತ್…




























































