ಈ ಹಿಂದೆ ಜಿಂದಾಲ್ ಹಗರಣ, ಬಿಟ್ ಕಾಯಿನ್ ಅಕ್ರಮ, ಬಿಬಿಎಂಪಿಯಲ್ಲಿನ ಕರ್ಮಕಾಂಡಗಳ ವಿರುದ್ದ ಸಾರ್ವಜನಿಕ ಹಿತಾಸಕ್ತಿ ಧಾವೆ ಹೂಡಿ ಬಿಎಸ್‌ವೈ ಸಹಿತ ಹಲವರ ರಾಜೀನಾಮೆಗೆ ಕಾರಣವಾಗಿರುವ ಸಾಮಾಜಿಕ ಹೋರಾಟಗಾರ ಕೆ.ಎ.ಪಾಲ್, ಇದೀಗ BPL ಕಾರ್ಡ್ ವಿಚಾರದಲ್ಲಿ ಕಡುಬಡವರ ಪರವಾಗಿ ಹೋರಾಟಕ್ಕಿಳಿದಿರುವುದು ಬಿಜೆಪಿ ಸರ್ಕಾರಕ್ಕೆ ಮತ್ತೊಂದು ಸವಾಲಾಗಿದೆ.
ಬೆಂಗಳೂರು: ಎಲೆಕ್ಷನ್ ಪರ್ವಕಾಲದಲ್ಲಿ ಪ್ರಧಾನಿಗೇ ಬೊಮ್ಮಾಯಿ ಸರ್ಕಾರ ಶಾಖ್ ಕೊಟ್ಟಿದೆ. ಕರಾವಳಿಯಲ್ಲಿನ ಅನಿರೀಕ್ಷಿತ ಬೆಳವಣಿಗೆ ಬಿಜೆಪಿ ಸರ್ಕಾರವನ್ನು ಇಕ್ಕಟ್ಟಿನಲ್ಲಿ ಸಿಲುಕಿದ್ದರೆ ಇನ್ನೊಂದೆಡೆ ಬಿಪಿಎಲ್ ಕಾರ್ಡ್ ಅವಾಂತರ ‘ಗರೀಬಿ ಹಟಾವೋ’ ಎಂಬ ಮೋದಿ ನಡೆಗೆ ಅಡ್ಡಿಯಾಗಿದೆಯೇ ಎಂಬ ಚರ್ಚೆ ಆರಂಭವಾಗಿದೆ.
ರಾಜ್ಯದಲ್ಲಿನ ಹಲವಾರು ಹಗರಣಗಳ ಆರೋಪಗಳು ಮೋದಿ ಸೇನೆಗೆ ಮುಜುಗರದ ಸನ್ನಿವೇಶ ಸೃಷ್ಟಿಸಿದ್ದರೆ, ಇದೀಗ ಬಿಪಿಎಲ್ ಕಾರ್ಡ್‌ದಾರರಿಗೆ ಸರ್ಕಾರ ಕೊಡುತ್ತಿರುವ ಪ್ರಹಾರ ಕಮಲ ಪಾಳಯಕ್ಕೇ ಸವಾಲೆಂಬಂತಿದೆ. ಈ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಲುಪಿರುವ ದೂರೊಂದು ಬಿಜೆಪಿ ಹೈಕಮಾಂಡ್ ಪಾಳಯದಲ್ಲಿ ಸಂಚಲನ ಸೃಷ್ಟಿಸಿದೆ.
ದೇಶದ ಹಲವೆಡೆ ಅಕ್ರಮ ಪಡಿತರ ಚೀಟಿ ವಿರುದ್ದ ಕಾರ್ಯಾಚರಣೆ ಸಾಗಿದೆ. ಇತ್ತ ಕರ್ನಾಟಕ ಸರ್ಕಾರವೂ ಅಕ್ರಮ ಬಿಪಿಎಲ್ ಕಾಡ್‌ಗಳ ಪತ್ತೆಗಾಗಿ ಅರ್ಥಪೂರ್ಣ ಕಾರ್ಯಾಚರಣೆ ಕೈಗೊಂಡಿದೆ. ಆದರೆ ಈ ವಿಚಾರದಲ್ಲಿ ಅಧಿಕಾರಿಗಳು ಸಾಗಿರುವ ಮಾರ್ಗ ಅವಾಂತರಕ್ಕೆ ಕಾರಣವಾಗಿದ್ದು, ಈ ಬಗ್ಗೆ ಕಡು ಬಡವರು ಹಿಡಿಶಾಪ ಹಾಕುತ್ತಿದ್ದಾರೆ. ಈ ವಿಚಾರದಲ್ಲಿ ಕಡುಬಡವರ ಪರವಾಗಿ ನಿಂತಿರುವ ‘ಸಿಟಿಜನ್ ರೈಟ್ಸ್ ಫೌಂಡೇಷನ್’ ಅಧ್ಯಕ್ಷ ಕೆ.ಎ.ಪಾಲ್ ಅವರು ಪ್ರಧಾನಿಗೆ ಪತ್ರ ಬರೆದು ಬೊಮ್ಮಾಯಿ ಸರ್ಕಾರದ ಲೋಪಗಳ ಬಗ್ಗೆ ಗಮನಸೆಳೆದಿದೆ.
ಕಡುಬಡವರಿಗಾಗಿ ಮೀಸಲಿರುವ ಬಿಪಿಎಲ್ ಪಡಿತರ ವ್ಯವಸ್ಥೆಯನ್ನು ಅನೇಕರು ಅಪಬಳಕೆ ಮಾಡುತ್ತಿದ್ದಾರೆಂಬ ಆರೋಪ ಇಂದು ನಿನ್ನೆಯದಲ್ಲ. ಬಿಪಿಎಲ್ ಕಾರ್ಡ್ ಹೊಂದಿದವರು ಷರತ್ತು ಉಲ್ಲಂಘಿಸಿದರೆ ಕಾರ್ಡ್ ರದ್ದು ಪಡಿಸಬೇಕಾದದ್ದು ಅಧಿಕಾರಿಗಳ ಕರ್ತವ್ಯವೂ ಹೌದು. ಅದರಂತೆಯೇ ರಾಜ್ಯ ಸರ್ಕಾರ ಕ್ರಮ ಕೈಗೊಂಡಿದ್ದು, ನಾಲ್ಕು ಚಕ್ರಗಳ ವಾಹನ ಹೊಂದಿದವರೂ ಸೇರಿದಂತೆ ಕೆಲವು ಸಂಗತಿಗಳನ್ನು ಮುಂದಿಟ್ಟು ಅಕ್ರಮದ ಆರೋಪದಲ್ಲಿ ಸಾವಿರಾರು ಮಂದಿಗೆ ನೋಟಿಸ್ ನೀಡಿದೆ.
BPL ರೇಷನ್ ಕಾರ್ಡ್ ಹೊಂದಿದವರ ಪಟ್ಟಿಯನ್ನು ಸಿದ್ದಪಡಿಸಿರುವ ಸರ್ಕಾರ ಈವರೆಗೆ 12,548 ಕುಟುಂಬಗಳಿಗೆ ನೋಟಿಸ್ ನೀಡಿದೆ ಎಂಬುದು ಮಾಧ್ಯಮಗಳ ವರದಿ. ಈ ನೋಟಿಸ್‌ಗಳಲ್ಲಿ ಕಾರ್ಡ್ ರದ್ದುಪಡಿಸುವ ಎಚ್ಚರಿಕೆಯಷ್ಟೇ ಅಲ್ಲ, ದಂಡ ಕಟ್ಟಬೇಕೆಂದೂ ಹಾಗೂ ಕ್ರಮಿನಲ್ ಪ್ರಕರಣ ಎದುರಿಸಬೇಕೆಂದೂ ಬೆದರಿಸಲಾಗಿದೆ.
50,000ಕ್ಕೂ ಹೆಚ್ಚು ಬಡವರ ಮೇಲೆ ಕೇಸ್ ಹಾಕುತ್ತಾ ಸರ್ಕಾರ?
ಒಂದೊಂದು ಕುಟುಂಬದಲ್ಲಿ 4-5 ಮಂದಿ ಇರುವುದು ಸಾಮಾನ್ಯ, ಆಹಾರ ಇಲಾಖೆಯ ಈ ನೋಟಿಸ್ ಪ್ರಕಾರ ಅಕ್ರಮವಾಗಿ ಬಿಪಿಎಲ್ ಕಾರ್ಡ್ ಹೊಂದಿವೆ ಎನ್ನಲಾದ ಪ್ರತೀ ಕುಟುಂಬದಲ್ಲಿ ಮೂರ್ನಾಲ್ಕು ಮಂದಿ ಇರುವುದು ಸಹಜ. ಹೀಗಿರುವಾಗ ಸರ್ಕಾರ ಈಗಾಗಲೇ ನೋಟಿಸ್ ನೀಡಿರುವ 12,548 ಕುಟುಂಬಗಳಲ್ಲಿ 50 ಸಾವಿರಕ್ಕೂ ಹೆಚ್ಚು ಮಂದಿ ಕಡುಬಡವರೇ ಆಗಿದ್ದು, ಇವರೆಲ್ಲರ ಮೇಲೂ ಕ್ರಮಿನಲ್ ಕೇಸ್ ಹಾಕಬೇಕಾಗುತ್ತದೆ, ಈ ಕೇಸ್ ಹಾಕುವ ಪ್ರಕ್ರಿಯೆ ಆರಂಭವಾಗಿದೆ ಎನ್ನಲಾಗಿದ್ದು, ಇಷ್ಟೊಂದು ಪ್ರಮಾಣದಲ್ಲಿ ಕೇಸ್ ಹಾಕುತ್ತಿರುವುದು ದೇಶದಲ್ಲೇ ಇದೇ ಮೊದಲು.
ತುತ್ತು ಅನ್ನಕ್ಕಾಗಿ ಈ ಬಡಪಾಯಿಗಳು ಬಿಪಿಎಲ್ ಕಾರ್ಡ್‌ಗಳನ್ನು ಹೊಂದಿದ್ದಾರೆ. ಇಂಥವರ ಮೇಲೆ ಚುನಾವಣಾ ಪರ್ವಕಾಲದಲ್ಲಿ ಈ ರೀತಿ ಕೇಸ್ ಹಾಕುವ ಪ್ರಕ್ರಿಯೆ ಆರಂಭಿಸಿರುವ ಬೊಮ್ಮಾಯಿ ಸರ್ಕಾರದ ಕ್ರಮವು ಬಿಜೆಪಿ ಪಕ್ಷಕ್ಕೆ ಉರುಳಾಗುತ್ತಾ ಎಂಬ ಆತಂಕ ಬಿಜೆಪಿ ನಾಯಕರನ್ನು ಕಾಡಿದೆ.
ಬಸವರಾಜ್ ಬೊಮ್ಮಾಯಿ ಸರ್ಕಾರದ ಕ್ರಮವನ್ನು ಆಕ್ಷೇಪಿಸಿ ‘ಸಿಟಿಜನ್ ರೈಟ್ಸ್ ಫೌಂಡೇಷನ್’ ಅಧ್ಯಕ್ಷ ಕೆ.ಎ.ಪಾಲ್ ಅವರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದು, ಬಿಪಿಎಲ್ ಕಾರ್ಡ್‌ಗಳು ಅಕ್ರಮವೆಂದು ದೃಢಪಟ್ಟರೆ ಅವುಗಳನ್ನು ರದ್ದುಪಡಿಸಲಿ ಅದನ್ನು ಬಿಟ್ಟು ಕ್ರಮಿನಲ್ ಧಾವೆಯ ಪ್ರಕ್ರಿಯೆ ಬೇಡ ಎಂದು ಮನವಿ ಮಾಡಿದ್ದಾರೆ.
40% ಕಮೀಷನ್ ಆರೋಪ, ಬಿಟ್ ಕಾಯಿನ್ ಅಕ್ರಮ, ನೇಮಕಾತಿ ಕರ್ಮಕಾಂಡಗಳ ಸಹಿತ ಹಲವಾರು ಭ್ರಷ್ಟಾಚಾರ ಪ್ರಕರಣಗಳಲ್ಲಿ ಬೊಮ್ಮಾಯಿ ಸರ್ಕಾರದ ನಿರ್ಲಕ್ಷ್ಯದಿಂದಾಗಿ ಭ್ರಷ್ಟರು ರಕ್ಷಣೆ ಪಡೆಯುತ್ತಿದ್ದು ಈ ಸರ್ಕಾರವು ಶ್ರೀಮಂತರ ಪರವಾಗಿದೆ ಎಂಬಂತಿದೆ. ಹೀಗಿರುವಾಗ ತುತ್ತು ಅನ್ನ ಪಡೆಯಲು ಕಾರ್ಡ್ ಹೊಂದಿದವರ ಮೇಲೆ ಕ್ರಿಮಿನಲ್ ಕೇಸ್ ಹಾಕುವ ಪ್ರಕ್ರಿಯೆ ಸರಿಯಲ್ಲ ಎಂದು ಕೆ.ಎ.ಪಾಲ್ ಅವರು ಮೋದಿಯವರಿಗೆ ಈ ಪತ್ರ ಮೂಲಕ ಮನವರಿಕೆ ಮಾಡಿದ್ದಾರೆ.
ಈ ಹಿಂದೆ ಜಿಂದಾಲ್ ಹಗರಣ, ಬಿಟ್ ಕಾಯಿನ್ ಅಕ್ರಮ, ಬಿಬಿಎಂಪಿಯಲ್ಲಿನ ಕರ್ಮಕಾಂಡಗಳ ವಿರುದ್ದ ಸಾರ್ವಜನಿಕ ಹಿತಾಸಕ್ತಿ ಧಾವೆ ಹೂಡಿ ಬಿಎಸ್‌ವೈ ಸಹಿತ ಹಲವರ ರಾಜೀನಾಮೆಗೆ ಕಾರಣವಾಗಿರುವ ಸಾಮಾಜಿಕ ಹೋರಾಟಗಾರ ಕೆ.ಎ.ಪಾಲ್ ಅವರು ಇದೀಗ BPL ಕಾರ್ಡ್ ವಿಚಾರದಲ್ಲಿ ಕಡುಬಡವರ ಪರವಾಗಿ ಹೋರಾಟಕ್ಕಿಳಿದಿರುವುದು ಬಿಜೆಪಿ ಸರ್ಕಾರಕ್ಕೆ ಮತ್ತೊಂದು ಸವಾಲಾಗಿದೆ.
ಸಿಟಿಜನ್ ರೈಟ್ಸ್ ಅಧ್ಯಕ್ಷರ ಪತ್ರ ಹೀಗಿದೆ:
Dated: 30.07.2022
To,
The Hon’ble Prime Minister,
Government of India
South Block, New Delhi.
SUBJECT: KARNATAKA KA GARIB KO BACHO.
Respected Sir,
“THE KARNATAKA GOVERNMENT HAS ISSUED 12,548 NOTICES CLAIMING CRIMINAL ACTION AGAINST THE BPL CARD HOLDERS WHO HOLD RATION CARDS MAKING ALLEGATIONS THAT THEY HAVE FOUR WHELLERS, AND ALSO THE GOVERNMENT IS TRYING TO FIX THE FAMILY OF FOUR TO FIVE MEMBERS OF ONE BPL CARD HOLDERS, IF SO THEN THERE WILL BE *MORE THAN 50,000 POOR PEOPLE WHO WILL BE FIXED IN CRIMINAL CASES WHICH WILL BE THE DARK HISTORY IN OUR COUNTRY”
The Karnataka Government under the Food and Civil Supply Ministry of the state had issued RATION CARDS to the below poverty line people across Karnataka and the poor and down trodden people are getting benefit from this ration card scheme and the people started believing in your goodselfs slogan GARIBI HATAO’. The people of Karnataka were happy for the schemes that filled the stomach of the poor and needy.
Recently the State Government of Karnataka without looking into the welfare of the poor people issued notices threatening the people who have obtained ration cards that they will file criminal cases and impose fine from the day they obtained the ration card, this movement of the state Government of Karnataka has shocked lakhs of people together and the peoples belief in your slogan GARIBI HATAO has turned into GARIB KO MARO scheme and the entire credit should go to the state Government of Karnataka under the leadership of SRI. BASAVARAJ BOMMAI (THE HON’BLE CHIEF MINISTER OF KARNATAKA) and other eminent ministers of BJP PARTY whose agenda has become ‘SHOOT AND LOOT THE PEOPLE’ these agendas are against the vision of your GOODSELFS.
It is come to our knowledge through media that the Government has issued 12,584 notices to these BPL card holders threatening that the Government will take criminal action against all these card holders. The Government has also plans to include their family members where most of them are illiterate and these notices will be a shock and burden to them and these card holders have no financial stability.
The Government of Karnataka with a Malafide intention to include the entire family members of the card holder, if such action is taken against the entire family of a card holder then the entire family will be burdened with legal cases which can also hamper the future possibilities of coming up in their lives and if we calculate with a minimum number of members in one family to which the Government has issued notices then the number may exceed above 50,000 people against whom the Government has already issued notices stating that these people have four wheeler vehicles.
We would also like to get it to your goodselfs notice that this state Government of Karnataka had got into various scams like BITCOINS, PSI SCAMS, 40% COMMISSION SCAMS, AND VARIOUS SCAMS IN BBMP, AND SCAMS AT RAJIV GANDHI MEDICAL UNIVERSITY AND MULTI CRORES SCAMS DONE BY VARIOUS MINISTERS, CD SCAMS, MULTI CRORE IRRIGATION SCAMS, which has shocked the voters of Karnataka who voted looking into your goodselfs ability of good administration, good Governance, and your vision of CORRUPTION MUKT BHARAT and your goodselfs inspirational slogan NA KHAUNGA NA KHANE DUNGA, but the state Government of Karnataka which is Governed under the able leadership, it seems that the inspirational quotes of your goodselfs has now changed into ‘HUM LOOTENGE AUR KHAYENGE, GHARIB KO BHAGAYENGE’. Is what we think by seeing and hearing about the scams in the Government and the biased treatment towards the poor and needy?
We would like to request your goodself to look into the seriousness of this matter and help the poor whose only savior for survival is the ration card and also stop the proceedings against the poor and needy as the Government has stopped the proceedings in the above mentioned scams and it is alleged that the Government is protecting the people who are involved in these scams. We had also written the letter to the Hon’ble Chief Minister of Karnataka about this concerns but the Hon’ble Chief Minster who chose to ignore the same with intension known best to him.
We would like to request your goodself to direct the state Government of Karnataka to create awareness before taking any action and also withdraw the notices issued against these card holders, as it might be the worst scenario in the history of India that the state Government is taking legal action against almost 50,000 people for no fault of theirs. We believe and trust in your goodself for the concern for the poor and needy and corruption free society that you will immediately take action against the Government of Karnataka decision and protect the interest of the BPL CARD HOLDERS.
Thanking You, Yours faithfully
K.A.PAUL, CHAIRMAN,
CITIZEN RIGHTS FOUNDATION