ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಹಿಂದೂ ಕಾರ್ಯಕರ್ತ ಪ್ರವೀಣ್ ನೆಟ್ಟರ್ ಕೊಲೆ ಪ್ರಕರಣ ಇದೀಗ ರಾಜ್ಯ ಸರ್ಕಾರಕ್ಕೂ ಸವಾಲಬಂತಾಗಿದೆ. ಕೆಲವು ಸಮಯದ ಹಿಂದಷ್ಟೇ ಶಿವಮೊಗ್ಗದಲ್ಲಿ ಹಿಂದೂ ಕಾರ್ಯಕರ್ತ ಹರ್ಷನನ್ನು ಮತಾಂಧರ ಗುಂಪು ಬರ್ಬರವಾಗಿ ಕೊಲೆ ಮಾಡಿತ್ತು. ಇದೀಗ ಪುತ್ತೂರಿನಲ್ಲಿ ಮತ್ತೊಬ್ಬ ಕೇಸರಿ ಕಾರ್ಯಕರ್ತನ ಕಗ್ಗೊಲೆಯಾಗಿದೆ. ಈ ಕೃತ್ಯಗಳ ಹಿಂದೆ ಪಿಎಫ್‌ಐ ಸಿದ್ಧಾಂತವುಳ್ಳವರ ಕೈವಾಡ ಇರಬಹುದೇ ಎಂಬ ಅನುಮಾನ ಸರ್ಕಾರವನ್ನೂ ಕಾಡಿದೆ.
ಮಧ್ಯರಾತ್ರಿ ಸುದ್ದಿಗೋಷ್ಠಿ ಕರೆದ ಸಿಎಂ ಬಸವರಾಜ ಬೊಮ್ಮಾಯಿ ಅವರೂ ಈ ಕೃತ್ಯದ ಹಿಂದೆ ಮತಾಂಧರ ಕೈವಾಡವಿರುವ ಶಂಕೆ ವ್ಯಕ್ತಪಡಿಸಿದರು.
ಕೇವಲ ಕರಾವಳಿ ಮಾತ್ರವಲ್ಲದೆ, ಬೇರೆ ಬೇರೆ ಕಡೆ ಕೂಡ ನಡೆದಿದೆ. ಹಿಂದೆ, ನಾನು ಗೃಹ ಸಚಿವರಾಗಿದ್ದಾಗಲೂ ಈ ರೀತಿಯ ಸಂಚುಗಳು ನಡೆದಿತ್ತು ಎಂದು ನೆನಪಿಸಿಕೊಂಡರು. ಈ ಕೃತ್ಯದ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದವರು ತಿಳಿಸಿದರು.
ಪಿಎಫ್ಐ ಬ್ಯಾನ್ ಮಾಡಬೇಕೆಂಬ ಬಿಜೆಪಿ ನಾಯಕರ ಒತ್ತಾಯ ಕುರಿತಂತೆ ಪ್ರತಿಕ್ರಿಯಿಸಿದ ಸಿಎಂ ಬಸವರಾಜ್ ಬೊಮ್ಮಾಯಿ, ಇದು ಅಂತರಾಜ್ಯ ವಿಚಾರ. ಛತ್ತೀಸ್‌ಘಢದಲ್ಲಿ PFI ಬ್ಯಾನ್ ಆಗಿರುವಂತೆ ಇತರ ರಾಜ್ಯಗಳ ಅಭಿಪ್ರಾಯ ಪಡೆದು ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.




















































