ಬೆಂಗಳೂರು: ರಾಜ್ಯದ ಆಡಳಿತಾರೂಢ ಬಿಜೆಪಿ ಹಾಗೂ ಆರೆಸ್ಸೆಸ್ ಬಗ್ಗೆ ಕಿಡಿ ಕಾರುತ್ತಿರುವ ಪ್ರತಿಪಕ್ಷದ ನಾಯಕರನ್ನು ತರಾಟೆಗೆ ತೆಗೆದುಕೊಂಡಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕಾಂಗ್ರೆಸ್ ನಾಯಕರು ಸಿಎಂ ಹುದ್ದೆಯ ಭ್ರಮೆಯಲ್ಲಿದ್ದಾರೆ. ಈ ರೀತಿಯ ಸಿಎಂ ಭ್ರಮೆಯಿಂದ ತಮ್ಮ ಪಕ್ಷದಲ್ಲಿ ಅನೇಕರ ನಿದ್ದೆ ಹಾಳು ಮಾಡಿರುವ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರಿಂದ ಆ ಪಕ್ಷದ ಕಾರ್ಯಕರ್ತರು ಭ್ರಮನಿರಸನಗೊಂಡಿದ್ದಾರೆ ಎಂದು ವಿಶ್ಲೇಷಿಸಿದ್ದಾರೆ.
ಸರಣಿ ಟ್ವೀಟ್ ಮಾಡಿ ತಮ್ಮದೇ ದಾಟಿಯಲ್ಲಿ ಟೀಕಾಸ್ತ್ರ ಪ್ರಯೋಗಿಸಿರುವ ನಳಿನ್ ಕುಮಾರ್, ದುರ್ಬಲ ಹೈಕಮಾಂಡ್ ಆಂತರಿಕ ಕಚ್ಚಾಟ ಸರಿ ಮಾಡಲಾಗದೇ ಕೈ ಚೆಲ್ಲಿದ್ದು, ಇವರ ಕೈಗೆ ಅಧಿಕಾರ ಕೊಟ್ಟರೆ ಕಚ್ಚಾಟವೇ ಗ್ಯಾರಂಟಿ ಎಂದು ರಾಜ್ಯದ ಜನರಿಗೆ ಗೊತ್ತಾಗಿದೆ ಎಂದಿದ್ದಾರೆ.
ಸಿಎಂ ಭ್ರಮೆಯಿಂದ ತಮ್ಮ ಪಕ್ಷದಲ್ಲಿ ಅನೇಕರ ನಿದ್ದೆ ಹಾಳು ಮಾಡಿರುವ @siddaramaiah ಹಾಗೂ @DKShivakumar ಅವರಿಂದ ಪಕ್ಷದ ಕಾರ್ಯಕರ್ತರು
ಭ್ರಮನಿರಸನಗೊಂಡಿದ್ದಾರೆ.ದುರ್ಬಲ ಹೈಕಮಾಂಡ್ ಆಂತರಿಕ ಕಚ್ಚಾಟ ಸರಿ ಮಾಡಲಾಗದೇ ಕೈ ಚೆಲ್ಲಿದ್ದು, ಇವರ ಕೈಗೆ ಅಧಿಕಾರ ಕೊಟ್ಟರೆ ಕಚ್ಚಾಟವೇ ಗ್ಯಾರಂಟಿ ಎಂದು ರಾಜ್ಯದ ಜನರಿಗೆ ಗೊತ್ತಾಗಿದೆ.
— Nalinkumar Kateel (@nalinkateel) July 24, 2022
ಕಾಂಗ್ರೆಸ್ ನಾಯಕರು ಅಧಿಕಾರದಲ್ಲಿದ್ದಾಗ ಭ್ರಷ್ಟಾಚಾರದಿಂದ 3-4 ತಲೆಮಾರಿಗಾಗುವಷ್ಟು ಸಂಪಾದಿಸಿದ್ದೇವೆ ಎಂದು ರಮೇಶ್ ಕುಮಾರ್ ವಾಸ್ತವ ಒಪ್ಪಿಕೊಂಡಿದ್ದಾರೆ. ಇಂತವರ “ಕೈ” ಗೆ ಇನ್ನೊಮ್ಮೆ ಅಧಿಕಾರ ಕೊಟ್ಟರೆ ಇನ್ನೆಷ್ಟು ತಲೆಮಾರಿಗೆ ಸಂಪಾದಿಸುತ್ತಾರೆ ಎಂದು ರಾಜ್ಯದ ನಾಗರಿಕರು ಕೇಳುತ್ತಿದ್ದಾರೆ ಎಂದು ಗಮನಸೆಳೆದ ಕಟೀಲ್, ಗಾಂಧಿ ಕುಟುಂಬದಿಂದ 3-4 ತಲೆಮಾರಿಗೆ ಆಗುವಷ್ಟು ಸಂಪಾದಿಸಿದ್ದೇವೆ ಎಂದು ಸತ್ಯ ಹೇಳಿರುವ ಕಾಂಗ್ರೆಸ್ ಹಿರಿಯ ನಾಯಕ ರಮೇಶ್ ಕುಮಾರ್, ಸೋನಿಯಾ ಗಾಂಧಿಯ ಸಮಾಧಾನಕ್ಕಾಗಿ ಬೀದಿಗೆ ಇಳಿಯಲು ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. ಇವರ ಬ್ರಹ್ಮಾಂಡ ಭ್ರಷ್ಟಾಚಾರಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಆತ್ಮಸಾಕ್ಷಿ ಬದಿಗಿಟ್ಟು ಹೋರಾಟ ಮಾಡಬೇಕಿದೆ ಎಂದಿದ್ದಾರೆ.
ಗಾಂಧಿ ಕುಟುಂಬದಿಂದ 3-4 ತಲೆಮಾರಿಗೆ ಆಗುವಷ್ಟು ಸಂಪಾದಿಸಿದ್ದೇವೆ ಎಂದು ಸತ್ಯ ಹೇಳಿರುವ ಕಾಂಗ್ರೆಸ್ ಹಿರಿಯ ನಾಯಕ ರಮೇಶ್ ಕುಮಾರ್, ಸೋನಿಯಾ ಗಾಂಧಿಯ ಸಮಾಧಾನಕ್ಕಾಗಿ ಬೀದಿಗೆ ಇಳಿಯಲು ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
ಇವರ ಬ್ರಹ್ಮಾಂಡ ಭ್ರಷ್ಟಾಚಾರಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಆತ್ಮಸಾಕ್ಷಿ ಬದಿಗಿಟ್ಟು ಹೋರಾಟ ಮಾಡಬೇಕಿದೆ.
— Nalinkumar Kateel (@nalinkateel) July 24, 2022

























































