ಬೆಂಗಳೂರು: ಜಿಎಸ್ಟಿ ಪರಿಷ್ಜರಣೆ ನೆಪದಲ್ಲಿ ಕೆಎಂಎಫ್ ಉತ್ಪನ್ನಗಳ ದರ ಏರಿಕೆ ಮಾಡಿದ ಸರ್ಕಾರದ ಕ್ರಮದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ನಂದಿನಿ ಮೊಸರು, ಮಜ್ಜಿಗೆ, ಲಸ್ಸಿ ಮೇಲೆ ಜಿಎಸ್ ಟಿ ಆಕರಣೆಯಿಂದ ಹೆಚ್ಚಾಗಿದ್ದ ದರ ಮರು ಪರಿಷ್ಕರಣೆ ಮಾಡಿದ್ದ ಕೆಎಂಎಫ್, ಸಾರ್ವಜನಿಕರ ಆಕ್ಷೇಪದ ಹಿನ್ನೆಲೆಯಲ್ಲಿ ದರವನ್ಬು ಮರು ಪರಿಷ್ಕರಿಸಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ ಮೇರೆಗೆ ದರ ಮರು ಪರಿಷ್ಕರಣೆ ಮಾಡಿದ ಕರ್ನಾಟಕ ಹಾಲು ಮಹಾಮಂಡಳ ಈ ಕುರಿತಂತೆ ಆದೇಶ ಹೊರಡಿಸಿದೆ.
ಮೊಸರು, ಮಜ್ಜಿಗೆ ಮತ್ತು ಲಸ್ಸಿ ಮೇಲೆ ಶೇ. ೫ ರಷ್ಟು ಜಿಎಸ್ ಟಿ ಯಿಂದ ದರ ಹೆಚ್ವು ಆಗಿತ್ತು. ಆದರೆ ಸಂಜೆಯಾಗುವಷ್ಟರಲ್ಲಿ ದರ ಮರು ಪರಿಷ್ಕರಣೆ ಮಾಡಿದೆ. ಸಿಎಂ ಬಸವರಾಜ ಬೊಮ್ಮಾಯಿ ಅವರ ಸೂಚನೆ ಮೇರೆಗೆ ಆದೇಶ ಹೊರಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.


















































