ಬೆಂಗಳೂರು: ಒಂದಿಲ್ಲೊಂದು ಅವಾಂತರಗಳಿಗೆ ಸಾಕ್ಷಿಯಾಗುತ್ತಿರುವ ರಾಜ್ಯದ ಬಸವರಾಜ ಬೊಮ್ಮಾಯಿ ಸರ್ಕಾರ, ಇದೀಗ ಸರ್ಕಾರಿ ಕಚೇರಿಗಳಲ್ಲಿ ಫೊಟೋ ವೀಡಿಯೋ ನಿರ್ಬಂಧಿಸಲು ಮುಂದಾದ ವೈಖರಿಯಿಂದಾಗಿ ಮತ್ತಷ್ಟು ಸಿಟ್ಟಿಗೆ ಗುರಿಯಾಗಿದೆ. ಜನರ ಆಕ್ಷೇಪ, ಆಕ್ರೋಶಕ್ಕೆ ಬೆಚ್ಚಿದ ಸರ್ಕಾರ ರಾತ್ರೋ ರಾತ್ರಿ ತನ್ನ ಆದೇಶವನ್ನು ಹಿಂಪಡೆದಿದೆ ಎನ್ನಲಾಗಿದೆ.
ಈ ಮರು ಆದೇಶ ಕೂಡಾ ಅವಾಂತರ ಸೃಷ್ಟಿಸಿದೆ. ಆದೇಶದಲ್ಲಿನ ಪದಗಳು ತಪ್ಪಾಗಿದ್ದು ಬೇರೆ ಬೇರೆ ಅರ್ಥಗಳನ್ನು ಕೊಡುವಂತಿವೆ. ಅಧಿಕಾರಿಗಳು ರಾತ್ರೋ ರಾತ್ರಿ ನಿದ್ರೆಯ ಮಂಪರಿನಲ್ಲಿ ಈ ಆದೇಶವನ್ನು ಬರೆದಿರಬಹುದು ಎಂಬ ವ್ಯಂಗ್ಯದ ಮಾತುಗಳೂ ಸಾರ್ವಜನಿಕ ವಲಯದಲ್ಲಿ ಕೇಳಿಬರತ್ತಿವೆ.
ಈ ನಡುವೆ, ಆದೇಶ ಹಿಂಪಡೆದ ಸರ್ಕಾರದ ಅಧಿಸೂಚನೆಯ ಪ್ರತಿಯನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಮದ್ಯ ರಾತ್ರಿ’ ಕೆಲಸಗಳನ್ನು ನಿಲ್ಲಿಸಿ ಎಂದು ಪ್ರತಿಕ್ರಿಯಿಸುತ್ತಾ ತಪ್ಪುಗಳ ಬಗ್ಗೆ ಲೇವಡಿ ಮಾಡಿದೆ.
ಭ್ರಷ್ಟ ರಕ್ಷಕ ಸರ್ಕಾರಕ್ಕೆ ರಾತ್ರೋರಾತ್ರಿ ಯೂಟರ್ನ್ ಹೊಡೆಯುವಂತೆ ಚಾಟಿಯೇಟು ಬಿದ್ದಿದೆ.
ಸಾರ್ವಜನಿಕ ಟೀಕೆ, ವಿಪಕ್ಷಗಳ ವಿರೋಧವೇ ಬರಬೇಕಾ ಭ್ರಷ್ಟ ಬಿಜೆಪಿ ಸರ್ಕಾರ ಬುದ್ದಿ ಕಲಿಯಲು?@BJP4Karnataka ಸರ್ಕಾರ “ಮದ್ಯ’ ರಾತ್ರಿ” ಕೆಲಸಗಳನ್ನು ನಿಲ್ಲಿಸಬೇಕು
&
ಹಿಂದಿ ಪ್ರೇಮದ ಉತ್ತುಂಗದಲ್ಲಿ ಕನ್ನಡದ ಕೊಲೆ ನಿಲ್ಲಿಸಬೇಕೆಂಬುದು ನಮ್ಮ ಸಲಹೆ! pic.twitter.com/hZFiWT9FBK— Karnataka Congress (@INCKarnataka) July 16, 2022


















































