ತುಮಕೂರು: ಕೊರಟಗೆರೆ ತಾಲ್ಲೂಕಿನ ವಡ್ಡಗೆರೆ ಗ್ರಾಮದ ವೀರ ನಾಗಮ್ಮ ದೇವಾಲಯದ ಸಮೀಪ ಕಲ್ಯಾಣಿಯಲ್ಲಿ ಈಜಲು ತೆರಳಿದ್ದ ಯುವಕ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ನಡೆದಿದೆ.
ಮೃತಪಟ್ಟ ಯುವಕನನ್ನು ತರುಣ್ (14) ವರ್ಷ ಎಂದು ಗುರುತಿಸಲಾಗಿದೆ. ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹುಳಿಯಾರು ಹೋಬಳಿಯ ಲಕ್ಕನಹಳ್ಳಿ ಗ್ರಾಮದ ವೀರ ನಾಗಣ್ಣ ಎಂಬುವರ ಮಗನಾದ ತರುಣ್ ತನ್ನ ತಾಯಿ ಕವಿತ ರೊಂದಿಗೆ ದೇಗುಲಕ್ಕೆ ಬಂದಿದ್ದು, ಈ ವೇಳೆ ಕಲ್ಯಾಣಿ ಸಮೀಪ ಗಂಗೆ ಪೂಜೆಯಲ್ಲಿ ನಿರತರಾಗಿದ್ದ ತನ್ನ ತಾಯಿ ಎದುರಿನಲ್ಲಿಯೆ ಕಲ್ಯಾಣಿಯಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ತನ್ನ ಕಣ್ಣುಮುಂದನೇ ಮಗನನ್ನು ಕಳೆದುಕೊಂಡು ತಾಯಿ ಮತ್ತು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ವಿಷಯ ತಿಳಿದು ಸ್ಥಳಕ್ಕೆ ಬಂದ ಅಗ್ನಿಶಾಮಕ ಠಾಣೆ ಸಿಬ್ಬಂದಿ ಹಾಗೂ ಪೊಲೀಸರು ಕಲ್ಯಾಣಿಯಿಂದ ತರುಣ್ ಶವವನ್ನು ಮೇಲೆತ್ತಿದ್ದು. ಘಟನೆ ಸಂಬಂಧ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


















































