ಮಂಗಳೂರು: ಉಳ್ಳಾಲ ಕ್ಷೇತ್ರದ ತಿರುಮಲ ತಥಾ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನದ ಪುನಃ ಪ್ರತಿಷ್ಠಾ ಶತಮಾನೋತ್ಸವ ಪ್ರಯುಕ್ತ ಶ್ರೀ ದೇವಳದಲ್ಲಿ ಶ್ರೀ ಮಹಾ ವಿಷ್ಣು ಯಾಗ ಆಯೋಜಿಸಲಾಗಿದ್ದು ಈ ಕಾರ್ಯಕ್ರಮಕ್ಕೆ ಕಾಶೀ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರು ಶ್ರೀ ದೇವಳಕ್ಕೆ ಚಿತ್ತೈಸಿದರು , ಶ್ರೀಗಳವರಿಗೆ ಉಳ್ಳಾಲ ದೇವಸ್ಥಾನದ ಆಡಳಿತಮಂಡಳಿ ಹಾಗೂ ಸಮಾಜ ಭಾಂಧವರು ಪೂರ್ಣ ಕುಂಭ ಸ್ವಾಗತದಿಂದ ಬರಮಾಡಿಕೊಂಡರು . ಶ್ರೀ ಮಹಾ ವಿಷ್ಣು ಯಾಗವು ಸೋಮವಾರದಿಂದ ಉಳ್ಳಾಲ-ಲಕ್ಷ್ಮೀ-ನರಸಿಂಹ-ದೇಪ್ರಾರಂಭಗೊಂಡಿದ್ದು ಬುಧವಾರದವರೆಗೆ ನಡೆಯಲಿದೆ .

ಜೂನ್ 8ರಂದು ಶ್ರೀಗಳವರ ಅಮೃತ ಹಸ್ತಗಳಿಂದ ಮಹಾ ಪೂರ್ಣಾಹುತಿ ನಡೆಯಲಿರುವುದು . ಮಂಗಳವಾರ ಶ್ರೀಗಳವರಿಂದ ಸಮಾಜ ಬಾಂಧವರಿಗೆ ತಪ್ತ ಮುದ್ರಾಧಾರಣೆ , ಶ್ರೀದೇವರಿಗೆ ಶತ ಕಲಶಾಭಿಷೇಕ ನಡೆಯಲಿರುವುದು . ಈ ಎಲ್ಲಾ ಕಾರ್ಯಕ್ರಮದಲ್ಲಿ ಸಮಾಜ ಬಾಂಧವರು ಪಾಲ್ಗೊಳ್ಳಬೇಕಾಗಿ ದೇವಳದ ಆಡಳಿತ ಮಂಡಳಿ ವಿನಂತಿಸಿದೆ .






















































