ಬೆಂಗಳೂರು: ಬಿಜೆಪಿ ನಾಯಕ ಮುನಿರಾಜು ಅವರು ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ವೀಡಿಯೋ ಕಾಂಗ್ರೆಸ್ ನಾಯಕರ ಕೆಂಗಣ್ಣಿಗೆ ಕಾರಣವಾಗಿದೆ. ಈ ವೀಡಿಯೋ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ವೀಡಿಯೋ ಜೊತೆ ಟ್ವೀಟ್ ಮಾಡಿರುವ ಅವರು, .’ಒಂದು ಸಾವಿರ ಜನ ಕಾರ್ಯಕರ್ತರು ಬಂದು… ಐದೈದು, ಹತ್ತತ್ತು ಓಟ್ ಹಾಕಿದ್ರು. ಆ ರೀತಿ ಪಕ್ಷ ಕಟ್ಟಿದ್ದಕ್ಕೆ.. ಇವತ್ತು 119 ವಿಧಾನಸಭಾ ಸದಸ್ಯರನ್ನು ಇಟ್ಕೊಂಡು ಸರ್ಕಾರ ಮಾಡಿದ್ದೇವೆ..” ಏನಿದು ರಹಸ್ಯ? ಅಸಹ್ಯ? ಎಂದಿದ್ದಾರೆ.
"..ಒಂದು ಸಾವಿರ ಜನ ಕಾರ್ಯಕರ್ತರು ಬಂದು… ಐದೈದು, ಹತ್ತತ್ತು ಓಟ್ ಹಾಕಿದ್ರು. ಆ ರೀತಿ ಪಕ್ಷ ಕಟ್ಟಿದ್ದಕ್ಕೆ…. ಇವತ್ತು 119 ವಿಧಾನಸಭಾ ಸದಸ್ಯರನ್ನು ಇಟ್ಕೊಂಡು ಸರ್ಕಾರ ಮಾಡಿದ್ದೇವೆ.."
ಏನಿದು ರಹಸ್ಯ? ಅಸಹ್ಯ?@narendramodi@JPNadda @nalinkateel@BSBommai ..? pic.twitter.com/ajjxFslEQR
— Siddaramaiah (@siddaramaiah) May 21, 2022
ಇದಕ್ಕೆ ಪ್ರತಿಕ್ರಿಯಿಸಿರುವ ನೆಟ್ಟಿಗರೊಬ್ಬರು, 5 ಅಥವಾ10 ಓಟ್ ಹಾಕಕ್ ಆಗಲ್ಲ, ತಮ್ಮ ಮನೆಯ ಸದಸ್ಯರ 5 ರಿಂದ10 ಓಟುಗಳನ್ನು ಹಾಕಿಸಿದ್ರು ಅಂತ ಹೇಳಲು ಹೋಗಿ, ಪದ ಮಿಸ್ಸಾಗಿ ಆತರ ಕೇಳಿದೆ ಅಷ್ಟೇ, ಯಾರಾದರೂ 5 ಅಥವಾ10 ವೋಟ್ ಹಾಕಲು ಸಾಧ್ಯವಿದೆಯೇ? ಮತ ಚಲಾಯಿಸಿದ ಬೆರಳ ಗುರುತು ಇರುತ್ತದೆ ಅಲ್ಲವೇ? ನಿಮಗೆ ಟೀಕೆ ಮಾಡಲು ಬೇರೆ ವಿಷಯವೇ ಸಿಕ್ಕಿಲ್ಲ ಅನಿಸುತ್ತದೆ? ಇದು ಸಾಮಾನ್ಯ ಜ್ಞಾನ ಸರ್ ಎಂದು ಸಿದ್ದರಾಮಯ್ಯ ಅವರ ಟ್ವೀಟ್ಗೆ ಎದಿರೇಟು ನೀಡಿದ್ದಾರೆ.
5 ಅಥವಾ10 ಓಟ್ ಹಾಕಕ್ ಆಗಲ್ಲ, ತಮ್ಮ ಮನೆಯ ಸದಸ್ಯರ 5 ರಿಂದ10 ಓಟುಗಳನ್ನು ಹಾಕಿಸಿದ್ರು ಅಂತ ಹೇಳಲು ಹೋಗಿ, ಪದ ಮಿಸ್ಸಾಗಿ ಆತರ ಕೇಳಿದೆ ಅಷ್ಟೇ, ಯಾರಾದರೂ 5 ಅಥವಾ10 ವೋಟ್ ಹಾಕಲು ಸಾಧ್ಯವಿದೆಯೇ? ಮತ ಚಲಾಯಿಸಿದ ಬೆರಳ ಗುರುತು ಇರುತ್ತದೆ ಅಲ್ಲವೇ? ನಿಮಗೆ ಟೀಕೆ ಮಾಡಲು ಬೇರೆ ವಿಷಯವೇ ಸಿಕ್ಕಿಲ್ಲ ಅನಿಸುತ್ತದೆ? ಇದು ಸಾಮಾನ್ಯ ಜ್ಞಾನ ಸರ್.
— Sudha Shivaraj (@SudhaShivaraj3) May 21, 2022

























































