ಬೆಂಗಳೂರು: ಮಳೆ ಅನಾಹುತ ಮತ್ತು ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸುವ ಉದ್ದೇಶದಿಂದ ಬೆಂಗಳೂರಿನಲ್ಲಿ 8 ವಲಯಗಳಿಗೆ ಬೆಂಗಳೂರಿನ ಸಚಿವರ ನೇತೃತ್ವದಲ್ಲಿ ಕಾರ್ಯಪಡೆಗಳನ್ನು ರಚಿಸಲಾಗಿದೆ. ಈ ಕಾರ್ಯಪಡೆಯಲ್ಲಿ ಸಂಬಂಧಪಟ್ಟ ವಲಯಗಳ ಶಾಸಕರು, ಸಂಸದರು ಮತ್ತು ಬಿಬಿಎಂಪಿ ಅಧಿಕಾರಿಗಳು ಸದಸ್ಯರಾಗಿರುತ್ತಾರೆ. ವಲಯಗಳ ಜಂಟಿ ಆಯುಕ್ತರು ಈ ಕಾರ್ಯಪಡೆಯ ಸಂಚಾಲಕರಾಗಿ ಕಾರ್ಯ ನಿರ್ವಹಿಸುತ್ತಾರೆ.
ಕಾರ್ಯಪಡೆ ನೇತೃತ್ವದ ವಿವರ ಇಂತಿದೆ.:
- ಆರ್ ಅಶೋಕ್- ದಕ್ಷಿಣ ವಲಯ
ಡಾ.ಅಶ್ವಥ್ ನಾರಾಯಣ್- ಪೂರ್ವ ವಲಯ - ವಿ ಸೋಮಣ್ಣ- ಪಶ್ಚಿಮ ವಲಯ
- ಎಸ್ ಟಿ ಸೋಮಶೇಖರ್ -ಆರ್ ಆರ್ ನಗರ ವಲಯ
- ಬೈರತಿ ಬಸವರಾಜ್- ಮಹದೇವಪುರ ವಲಯ
- ಗೋಪಾಲಯ್ಯ -ಬೊಮ್ಮನಹಳ್ಳಿ ವಲಯ
- ಮುನಿರತ್ನ -ಯಲಹಂಕ ಮತ್ತು ದಾಸರಹಳ್ಳಿ ವಲಯ

























































