ಮಂಗಳೂರು: ಜಿಯಸ್‌ಬಿ ಸಮಾಜದ 18 ಪೇಟೆ ದೇವಳವೆಂಬ ಖ್ಯಾತಿಯ ಇತಿಹಾಸ ಪ್ರಸಿದ್ಧ ಶ್ರೀಮದ್ ಮದನಂತೇಶ್ವರ ದೇವರಿಗೆ ಸಮರ್ಪಣೆಗೊಳ್ಳಲಿರುವ ನೂತನ ‘ಸ್ವರ್ಣ ಪಲ್ಲಕಿ’ಯ ನಿರ್ಮಾಣ ಪ್ರಾರಂಭ ಗೊಂಡಿದೆ. ಈ ಪ್ರಯುಕ್ತ ಮಂಗಳೂರಿನ ಕಾರ್ ಸ್ಟ್ರೀಟ್ ಶ್ರೀ ವೆಂಕಟರಮಣ ದೇವಸ್ಥಾನ ರಥಬೀದಿ ಮಂಗಳೂರು ಇದರ ಶ್ರೀ ದೇವರ ಭಂಡಾರದಿಂದ ಸ್ವರ್ಣ ಸಮರ್ಪಣೆಯು ಶ್ರೀ ದೇವರ ಸಮ್ಮುಖದಲ್ಲಿ ನೆರವೇರಿತು .
ಈ ಸಂದರ್ಭದಲ್ಲಿ ಮೊಕ್ತೇಸರರಾದ ಸಿ ಎಲ್ ಶೆಣೈ , ಕೆ ಪಿ ಪ್ರಶಾಂತ್ ರಾವ್ ,ರಾಮಚಂದ್ರ ಕಾಮತ್ , ಮಂಜೇಶ್ವರ ದೇವಳದ ಮೊಕ್ತೇಸರರಾದ ಕೋಟೇಶ್ವರ ದಿನೇಶ್ ಕಾಮತ್ , ಪಂಡಿತ್ ನರಸಿಂಹ ಆಚಾರ್ಯ ಸಹಿತ ಅನೇಕ ಗಣ್ಯರು ಉಪಸ್ಥಿತರಿದ್ದರು.