ಬೆಂಗಳೂರು: ರಾಜ್ಯದಲ್ಲಿ ಬಾನುವಾರ 330 ಹೊಸ ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಇದರ ಜೊತೆಯಲ್ಲೇ ಬೆಂಗಳೂರಿನಲ್ಲಿ ಮತ್ತೊಂದು ಓಮಿಕ್ರಾನ್ ಪ್ರಕರಣ ಕೂಡಾ ಪತ್ತೆಯಾಗಿದೆ. ಈ ಮೂಲಕ ಕರ್ನಾಟಕದಲ್ಲಿ ಓಮಿಕ್ರಾನ್ ಪ್ರಕರಣಗಳ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ.
ದಕ್ಷಿಣ ಆಫ್ರಿಕಾದಿಂದ ಡಿಸೆಂಬರ್ 1ರಂದು ಬೆಂಗಳೂರಿಗೆ ಬಂದಿದ್ದ 34 ವರ್ಷದ ವ್ಯಕ್ತಿ ಓಮಿಕ್ರಾನ್ ಸೋಂಕಿಗೊಳಗಾಗಿದ್ದಾರೆ.