ಪವರ್ ಸ್ಟಾರ್ ಪುನಿತ್ ರಾಜ್‌ಕುಮಾರ್ ವಿಧಿವಶರಾಗಿದ್ದಾರೆ. ಆದರೆ ಅವರು ನೆನಪಿನಂಗಳದಲ್ಲಿ ಇನ್ನೂ ಸ್ಟಾರ್ ಆಗಿಯೇ ಅಭಿಮಾನಿಗಳಿಗೆ ಸ್ಫೂರ್ತಿಯಾಗಿದ್ದಾರೆ. ಪುನೀತ್ ಬಗ್ಗೆ ಬಗೆಬಗೆಯ ಗುಣಗಾನದ ಸನ್ನಿವೇಶ ಕಂಡುಬರುತ್ತಿದ್ದು, ಅತ್ತ ಕರಾವಳಿಯ ಕ್ರಿಯಾಶೀಲ ಯುವಜನರ ತಂಡ ವಿಶೇಷ ಹಾಡು ಮೂಲಕ ಯುವರತ್ನನ ಗುಣಗಾನ ಮಾಡಿದೆ. ‘ಕನ್ನಡ ನಾಡಿನ ಕುವರ.. ರಾಜಕುವರಾ..’ ಎಂಬ ಹಾಡು ಕನ್ನಡ ಸಿನಿಲೋಕವಷ್ಟೇ ಅಲ್ಲ, ಸಮಸ್ತ ಕನ್ನಡಿಗರ ಗಮನಸೆಳೆದಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಹಾಡು ಸಕತ್ ಲೈಕ್ಸ್ ಗಿಟ್ಟಿಸಿಕೊಂಡಿದೆ.
© 2020 Udaya News – Powered by RajasDigital.