ಬಿಗ್ ಬಾಸ್ ವಿನ್ನರ್ ಶೈನ್ ಶೆಟ್ಟಿಗೆ ಮದುವೆಯಂತೆ. ತಮಗೆ ಮದುವೆ ಫಿಕ್ಸ್ ಆಗಿದೆ ಎಂದು ಕಲರ್ಸ್ ಕನ್ನಡದ ಪ್ರೊಮೋವೊಂದರಲ್ಲಿ ಶೈನ್ ಶೆಟ್ಟಿ ಹೇಳಿಕೊಂಡಿದ್ದಾರೆ.
ಯಾರು ಹುಡುಗಿ ಎಂಬ ಪ್ರಶ್ನೆಗೆ ಶೈನ್ ಅವರು ಸುಕೃತಾ ಎಂಬ ಹೆಸರನ್ನು ಹೇಳಿದ್ದಾರೆ. ಅಷ್ಟೇ ಅಲ್ಲ, ಫೋನ್‌ನಲ್ಲಿ ಆಕೆಯ ಜೊತೆ ಮಾತನಾಡುತ್ತಾ ಆತ್ಮೀಯತೆಯ ಪದಗಳೊಂದಿಗೆ ಎಲ್ಲರ ಕುತೂಹಲ ಕೆರಳುವಂತೆ ಮಾಡಿದ್ದಾರೆ.
View this post on Instagram
ಶೈನ್ ಅವರ ಈ ಪ್ರೊಮೋ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ಚರ್ಚೆ ಸಾಗಿದೆ. ಯಾರು ಈ ಸುಕೃತಾ ಎಂಬ ಕುತೂಹಲದ ಪ್ರಶ್ನೆಗಳೂ ಹಲವರದ್ದು.