ಬೆಂಗಳೂರು: ಬೆಳ್ಳಂಬೆಳಿಗ್ಗೆಯೇ ಭೀಕರ ಅಪಘಾತದ ಸುದ್ದಿ ಅಪ್ಪಳಿಸಿದೆ. ರಾಜಧಾನಿ ಬೆಂಗಳೂರಿನ ಕೊರಮಂಗಲ ಬಳಿ ಐಷಾರಾಮಿ ಕಾರು ಅಪಘಾತಕ್ಕೀಡಾಗಿದ್ದು ಹೊಸೂರು ಶಾಸಕರ ಪುತ್ರ ಸೇರಿ 7 ಮಂದಿ ಸಾವನ್ನಪ್ಪಿದ್ದಾರೆ.
ತಮಿಳುನಾಡು ವಿಧಾನಸಬೆಯ ಶಾಸಕ, ಹೊಸೂರಿನ ವೈ ಪ್ರಕಾಶ್ ಪುತ್ರ ಕರುಣಾ ಸಾವನ್ನಪ್ಪಿದ್ದಾರೆ. ಪ್ರಕಾಶ್ ಅವರು ಡಿಎಂಕೆ ಶಾಸಕರಾಗಿದ್ದಾರೆ.
ಹಿಂದೆ ತಳಿ ಕ್ಷೇತ್ರದಿಂದ ವೈ ಪ್ರಕಾಶ್ ಗೆದ್ದಿದ್ದರು. ಕಳೆದ ಚುನಾವಣೆಯಲ್ಲಿ ಹೊಸೂರು ಕ್ಷೇತ್ರದಿಂದ ಸ್ಪರ್ಧಿಸಿ ಅವರು ಗೆಲುವು ಸಾಧಿಸಿದ್ದರು
ಮೃತದೇಹಗಳನ್ನು ಬೆಂಗಳೂರಿನ ಆಸ್ಪತ್ರೆಯಲ್ಲಿಡಲಾಗಿದ್ದು, ಕಾಂಗ್ರೆಸ್ ಶಾಸಕ ರಾಮಲಿಂಗಾ ರೆಡ್ಡಿ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ರಾಮಲಿಂಗಾ ರೆಡ್ಡಿ, ಅಪಘಾತದಲ್ಲಿ 7 ಮಂದಿ ಮೃತಪಟ್ಟಿದ್ದಾರೆ. ಶಾಸಕರ ಪುತ್ರ ಹಾಗೂ ಅವರ ಸ್ನೇಹಿತರು ಆ ಕಾರಿನಲ್ಲಿದ್ದರು ಎಂದು ತಿಳಿಸಿದರು.
ಕೆಲವು ತಿಂಗಳ ಹಿಂದಷ್ಟೇ ಶಾಸಕರ ಪತ್ನಿ ಮೃತಪಟ್ಟಿದ್ದರು. ಇದೀಗ ಒಬ್ಬ ಮಗನೂ ಸಾವನ್ಬಪ್ಪಿದ್ದಾನೆ. ಮಗನನ್ನ ಮದುವೆಯಾಗಲಿದ್ದ ಯುವತಿಯೂ ಈ ಭೀಕರ ಅಪಘಾತದಲ್ಲಿ ಸಾವನ್ನಪ್ಪಿದ್ದು ತನ್ನವರನ್ನು ಕಳೆದುಕೊಂಡು ದುಃಖದ ಮಡುವಿನಲ್ಲಿದ್ದಾರೆ.



























































