ಬೆಂಗಳೂರು: ಬಿಎಸ್‌ವೈ ಸಿಎಂ ಆಗಿದ್ದಾಗ ಕುಟುಂಬ ರಾಜಕಾರಣದ ಆರೋಪ ಮಾಡುತ್ತಿದ್ದ ಕಾಂಗ್ರೆಸ್ ಇದೀಗ, ನೂತನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಬಗ್ಗೆಯೂ ಕುಟುಂಬ ರಾಜಕಾರಣದ ಶಂಕೆ ವ್ಯಕ್ತಪಡಿಸಿದೆ.
ಈ ಕುರಿತಂತೆ ಪ್ರದೇಶ ಕಾಂಗ್ರೆಸ್ ಮಾಡಿರುವ ಟ್ವೀಟ್ ಗಮನಸೆಳೆದಿದೆ. ಸರ್ಕಾರಿ ಕಾರ್ಯಕ್ರಮವೊಂದರಲ್ಲಿ ಸಿಎಂ ಬೊಮ್ಮಾಯಿ ಪುತ್ರ ಭಾಗಿಯಾಗಿದ್ದಾರೆ ಎನ್ನಲಾದ ಫೊಟೋ ಹಾಕಿ ಈ ಟ್ವೀಟ್ ಮಾಡಲಾಗಿದೆ.
‘ಉದ್ಯಮಿಗಳೊಂದಿಗಿನ ಸರ್ಕಾರಿ ಸಭೆಯಲ್ಲಿ ನಿಮ್ಮ ಪುತ್ರನದ್ದೇನು ಪಾತ್ರ ಬೊಮ್ಮಾಯಿಯವರೇ? ಕುಟುಂಬ ರಾಜಕಾರಣದ ಪರಂಪರೆ ಮುಂದುವರೆಸುವ ಇರಾದೆಯೇ? ಎಂದು ಟ್ವೀಟ್‌ನಲ್ಲಿ ಕಾಂಗ್ರೆಸ್ ಪ್ರಶ್ನಿಸಿದೆ. ಯಡಿಯೂರಪ್ಪ ಅವರ ಅಧಿಕಾರದಲ್ಲಿ ಬಿ.ವೈ.ವಿಜಯೇಂದ್ರ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸರ್ಕಾರದಲ್ಲಿ ಹಸ್ತಕ್ಷೇಪ ಮಾಡಿದ್ದರು. ಈಗ ತಾವೂ ಅದೇ ದಾರಿಯಲ್ಲಿ ಹೊರಟಿರುವಿರಾ? ಎಂದು ಪ್ರಶ್ನಿಸಿರುವ ಕಾಂಗ್ರೆಸ್, ದೃತರಾಷ್ಟ್ರಪ್ರೇಮ ಒಳ್ಳೆಯದಲ್ಲ ಎಂದು ಕೆಣಕಿದೆ.
ಉದ್ಯಮಿಗಳೊಂದಿಗಿನ ಸರ್ಕಾರಿ ಸಭೆಯಲ್ಲಿ ನಿಮ್ಮ ಪುತ್ರನದ್ದೇನು ಪಾತ್ರ @BSBommai ಅವರೇ?
ಕುಟುಂಬ ರಾಜಕಾರಣದ ಪರಂಪರೆ ಮುಂದುವರೆಸುವ ಇರಾದೆಯೇ?@BSYBJP ಅವರ ಅಧಿಕಾರದಲ್ಲಿ @BYVijayendra ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸರ್ಕಾರದಲ್ಲಿ ಹಸ್ತಕ್ಷೇಪ ಮಾಡಿದ್ದರು, ಈಗ ತಾವೂ ಅದೇ ದಾರಿಯಲ್ಲಿ ಹೊರಟಿರುವಿರಾ?
ದೃತರಾಷ್ಟ್ರಪ್ರೇಮ ಒಳ್ಳೆಯದಲ್ಲ. pic.twitter.com/hyXWuwYVA9
— Karnataka Congress (@INCKarnataka) August 14, 2021