ಹೈದರಾಬಾದ್: ಇದು ನಿಜಕ್ಕೂ ಬೆಚ್ಚಿಬೀಳಿಸುವಂತಹಾ ಸಂಗತಿ. ವ್ಯವಸ್ಥೆಗೆ ಹಿಡಿದ ಕನ್ನಡಿ ಎಂದೂ ಹೇಳಬಹುದು.
ವ್ಯಕ್ತಿಯೊಬ್ಬ ತನ್ನ ಅಜ್ಜನ ಶವವನ್ನು ಮೂರು ದಿನಗಳ ಕಾಲ ಫ್ರಿಜ್‌ನಲ್ಲಿಟ್ಟು ಸ್ಥಳೀಯರನ್ನು ಬೆಚ್ಚಿ ಬೀಳಿಸಿದ್ದಾನೆ. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಶವವೊಂದು ಫ್ರಿಜ್‌ನಲ್ಲಿ ಪತ್ತೆಯಾಗಿದೆ.
ಈ ಪ್ರಸಂಗ ನಡೆದದ್ದು ತೆಲಂಗಾಣದಲ್ಲಿ. ಇದೇನೂ ಕ್ರೈಂ ಅಲ್ಲ, 93 ವರ್ಷ ಪ್ರಾಯದ ಅಜ್ಜ ಕೊಲೆಯಾಗಿದ್ದೂ ಅಲ್ಲ, ಅನಾರೋಗ್ಯದಿಂದ ಬಳಲಿ ಕೊನೆಯುಸಿರೆಳೆದಿದ್ದಾರೆ. ಆದರೂ ಆತನ ಮೊಮ್ಮಗ ನಿಖಿಲ್ ಎಂಬಾತ ಈ ಶವವನ್ನು ಫ್ರಿಜ್‌ನಲ್ಲಿಟ್ಟಿದ್ದ ಎಂಬ ಬಗ್ಗೆ ಪೊಲೀಸರು ವಿಚಾರಿಸಿದಾಗ ಇಡೀ ನಾಗರಿಕ ಸಮಾಜವೇ ತಲೆತಗ್ಗಿಸುವಂತ ಸಂಗತಿ ಬೆಳಕಿಗೆ ಬಂದಿದೆ.
ವಾರಂಗಲ್ ನ ಪರ್ಕಾಲಾ ಎಂಬಲ್ಲಿ ಕೆಟ್ಟ ವಾಸನೆ ಬರುತ್ತಿರುವುದಾಗಿ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದರು. ಈ ವಾಸನೆಯ ಬಗ್ಗೆ ತಲೆಕೆಡಿಸಿಕೊಂಡ ಪೊಲೀಸರು ಅದರ ಮೂಲ ಹುಡುಕುತ್ತಾ ಹೋದಾಗ ಫ್ರಿಜ್‌ನಲ್ಲಿ ಶವ ಇರುವುದು ಗೊತ್ತಾಗಿದೆ. ಬಳಿಕ ಪೊಲೀಸರ ನೆರವಿನಲ್ಲಿ ಮುಂದಿನ ಕ್ರಮ ನಡೆದಿದೆ.