ಯಲಹಂಕ: ಫಿಟ್ ಇಂಡಿಯಾ ರನ್ ಕಾರ್ಯಕ್ರಮಕ್ಕೆ ಸಿ.ಆರ್.ಪಿ.ಎಫ್ ಕರ್ನಾಟಕ-ಕೇರಳ ವಿಭಾಗೀಯ ಐ.ಜಿ.ಪಿ ಗಿರಿ ಪ್ರಸಾದ್ ಮತ್ತು ಡಿ.ಐ.ಜಿ.ಪಿ ಇಮಾಂಷು ಕುಮಾರ್ ಚಾಲನೆ ನೀಡಿದರು.
ಯಲಹಂಕದಲ್ಲಿರುವ ವಿಭಾಗೀಯ ಕೇಂದ್ರ ಕಚೇರಿಯಲ್ಲಿ ಆಯೋಜನೆ ಮಾಡಿದ್ದ ಕಾರ್ಯಕ್ರಮದಲ್ಲಿ ಸಿ.ಆರ್.ಪಿ.ಎಫ್ ತರಬೇತಿ ಶಿಭಿರದ ಒಂದು ಸಾವಿರದಷ್ಟು ಸೇನಾನಿಗಳು ಮತ್ತು ಉನ್ನತ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.
ದೇಶದ ಭದ್ರತೆಯಲ್ಲಿ ಸಿ.ಆರ್.ಪಿ.ಎಫ್ ಯೋಧರು ಸೇನೆಯಷ್ಟೆ ಮಹತ್ತರ ಪಾತ್ರ ವಹಿಸುತ್ತಿದ್ದು, ಕೊರೋನದಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ನಮ್ಮ ಯೋಧರು ಎಲ್ಲಾ ವಿಭಾಗಗಳಲ್ಲೂ ಕೆಲಸ ಮಾಡಿ ಸೈ ಎನಿಸಿಕೊಂಡಿದ್ದಾರೆ. ಅದಾಗಿ ಇಂತಹಾ ಸಂದಿಗ್ಧ ಪರಿಸ್ಥಿತಿಯಲ್ಲಿ ಎಲ್ಲರಿಗೂ ಆರೋಗ್ಯ ಮುಖ್ಯವಾಗಿದ್ದು ಅವರ ಆತ್ಮಸ್ಥೈರ್ಯ ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳ ಆಯೋಜನೆಯಿಂದ ಮನೋಲ್ಲಾಸ, ಆರೋಗ್ಯ, ಉತ್ಸಾಹ ಹೆಚ್ಚಿಸುವ ನಿಟ್ಟಿನಲ್ಲಿ ಇಂಥಹಾ ಕಾರ್ಯಕ್ರಮಗಳು ಬಹು ಪ್ರಾಮುಖ್ಯ ಎಂದರು.