ಬೆಂಗಳೂರು: ಸಿಎಂ ಬಿಎಸ್‌ವೈ ರಾಜೀನಾಮೆ ಬಗ್ಗೆ ಬಿಜೆಪಿ ನಾಯಕರನ್ನು ಕಾಂಗ್ರೆಸ್ ಟೀಕಿಸಿದೆ.
ಮೊನ್ನೆ ಮೊನ್ನೆಯವರೆಗೂ ನಾನೇ ಇನ್ನೆರೆಡು ವರ್ಷ ಸಿಎಂ ಎನ್ನುತ್ತಿದ್ದವರು ಈಗ ಏಕಾಏಕಿ ರಾಜೀನಾಮೆ ನೀಡಿದ ಕಾರಣವೇನು ಹೇಳಿ? ನಿಮ್ಮ ಭೀಷ್ಮನನ್ನು ಸಿ.ಟಿ.ರವಿ, ನಳಿನ್ ಕುಮಾರ್ ಎಲ್ಲರೂ ಸೇರಿ ಪುಂಖಾನುಪುಂಖವಾಗಿ ಬಾಣ ಬಿಟ್ಟು ಶರಶಯ್ಯೆಯಲ್ಲಿ ಮಲಗಿಸಿಬಿಟ್ಟಿರಲ್ಲ! ಎಂದು ಕಾಂಗ್ರೆಸ್ ಟೀಕಿಸಿದೆ. ಈ ಕುರಿತು ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಬಿಎಸ್‌ವೈ ಅವರ ಕಣ್ಣೀರಿಗೆ ನಿಮ್ಮ ದ್ರೋಹವೇ ಕಾರಣವಲ್ಲವೇ? ಎಂದು ಪ್ರಶ್ನಿಸಿದೆ.
ರಾಜೀನಾಮೆ ವಿಚಾರ ಪ್ರಸ್ತಾಪಿಸಿದ ಬಿಎಸ್‌ವೈ ಅವರು ಕಣ್ಣೀರಿಟ್ಟಿದ್ದು, ಇದು ಒಬ್ಬ ವ್ಯಕ್ತಿಯ ಕಣ್ಣೀರಲ್ಲ, ರಾಜ್ಯವನ್ನು ಪ್ರತಿನಿಧಿಸುವ ಮುಖ್ಯಮಂತ್ರಿಯ ಕಣ್ಣೀರು. ಅವರ ರಾಜೀನಾಮೆ ಹಿಂದೆ ಸಂತೋಷ ಕಾಣಲಿಲ್ಲ, ಬದಲಿಗೆ ಅವರ ನಿರ್ಧಾರದಲ್ಲಿ ನೋವಿತ್ತು. ಆ ನೋವು ಕೊಟ್ಟವರ್ಯಾರು ಎಂಬುದನ್ನು ಅವರು ರಾಜ್ಯದ ಜನರಿಗೆ ತಿಳಿಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದ.
ರಾಜೀನಾಮೆ ವಿಚಾರ ಪ್ರಸ್ತಾಪಿಸಿದ @BSYBJP ಅವರು ಕಣ್ಣೀರಿಟ್ಟಿದ್ದು, ಇದು ಒಬ್ಬ ವ್ಯಕ್ತಿಯ ಕಣ್ಣೀರಲ್ಲ, ರಾಜ್ಯವನ್ನು ಪ್ರತಿನಿಧಿಸುವ ಮುಖ್ಯಮಂತ್ರಿಯ ಕಣ್ಣೀರು.
ಅವರ ರಾಜೀನಾಮೆ ಹಿಂದೆ ಸಂತೋಷ ಕಾಣಲಿಲ್ಲ, ಬದಲಿಗೆ ಅವರ ನಿರ್ಧಾರದಲ್ಲಿ ನೋವಿತ್ತು.
ಆ ನೋವು ಕೊಟ್ಟವರ್ಯಾರು ಎಂಬುದನ್ನು ಅವರು ರಾಜ್ಯದ ಜನರಿಗೆ ತಿಳಿಸಬೇಕು.
– @DKShivakumar pic.twitter.com/jOOd5W3xgG— Karnataka Congress (@INCKarnataka) July 26, 2021
ರಾಜೀನಾಮೆ ನೀಡಲು ನಾನೇ ನಿರ್ದಾರ ಮಾಡಿದ್ದು” ಎನ್ನುಲು ಅವರಿಗೆ ಅದೆಷ್ಟು ಐಟಿ, ಇಡಿ, ಸಿಬಿಐಗಳ ಬೆದರಿಕೆ ಒಡ್ಡಿದ್ದಿರಬಹುದು ಬಿಜೆಪಿ ಹೈಕಮಾಂಡ್! ಅವರೇ ನಿರ್ದಾರ ಮಾಡಿದ್ದಾದರೆ, ನಳಿನ್ ಕುಮಾರ್ ಎಂಬ ಮೀರ್‌ಸಾದಿಕ್‌ನಿಗೆ ಮೊದಲೇ ಹೇಗೆ ತಿಳಿಯಿತು? ಪಕ್ಷ ಕಟ್ಟಿದವರನ್ನೇ ಮೂಲೆಗುಂಪು ಮಾಡುವ ಬಿಜೆಪಿ ಮತ ಹಾಕಿದವರನ್ನು ಮರೆತೇಬಿಟ್ಟಿದೆ ಎಂದು ಕಾಂಗ್ರೆಸ್ ವಿಶ್ಲೇಷಣೆ ಮಾಡಿದೆ.
ತಾಕತ್ತಿದ್ದರೆ ಬಿಜೆಪಿಯು ಸಿಎಂ ರಾಜಿನಾಮೆ ಹಿಂದಿರುವ ಸ್ಪಷ್ಟ ಕಾರಣ ತಿಳಿಸಲಿ. ಹಾಗೂ ತಮ್ಮದೇ ಪಕ್ಷದ ಹಿರಿಯ ನಾಯಕನಿಗೆ ಕಣ್ಣೀರು ಹಾಕಿಸಿ, ಹೀನಾಯವಾಗಿ ನಡೆಸಿಕೊಂಡಿದ್ದಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳಲಿ, ಕಾಂಗ್ರೆಸ್ ನಾಯಕರ ಬಗ್ಗೆ ನಾಲಿಗೆ ಹರಿಬಿಡುವುದನ್ನು ನಿಲ್ಲಿಸಲಿ ಎಂದು ಕಿವಿಮಾತು ಹೇಳಿದೆ.