ತುಮಕೂರು: ಸ್ಮಾರ್ಟ್ ಸಿಟಿ ಕಾಮಗಾರಿಯಿಂದಾಗಿ ಕಲ್ಪತರು ನಾಡು ತುಮಕೂರಿನ ಜನರು ಕಿರಿಕಿರಿ ಅನುಭವಿಸುವಂತಾಗಿದೆ. ಈ ಬಗ್ಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಂತೆಯೇ ತುಮಕೂರಿಗೆ ಭೇಟಿ ನೀಡಿದ ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜ ಅವರು ಶುಕ್ರವಾರ ಬೆಳಿಗ್ಗೆ ತುಮಕೂರು ನಗರಕ್ಕೆ ಭೇಟಿ ನೀಡಿ ಅಧಿಕಾರಿಗಳ ಪಾಳಯದಲ್ಲಿ ಸಂಚಲನ ಮೂಡಿಸಿದರು.
ತುಮಕೂರು ಮಹಾನಗರ ಪಾಲಿಕೆ, ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಮತ್ತು ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಗರದಲ್ಲಿ ನಡೆದಿರುವ ಅಭಿವೃದ್ಧಿ ಯೋಜನೆಗಳ ಕಾಮಗಾರಿ ಪರಿಶೀಲನೆ ನಡೆಸಿದರು. ಕಾಮಗಾರಿಗಳು ಕಾಲ ಮಿತಿಯಲ್ಲಿ ಪೂರ್ಣ ಮಾಡುವಂತೆ ಸಂಭಂದಿಸಿದ ಅಧಿಕಾರಿಗಳಿಗೆ ತಾಕೀತು ಮಾಡಿದರು.
ನಗರ ಪ್ರದಕ್ಷಿಣೆ ನಡೆಸಿದ ನಂತರ ಸಚಿವರು ಪಾಲಿಕೆ ಕಾಮಗಾರಿಗಳು ಬಗ್ಗೆ ಅಧಿಕಾರಿಗಳೂಂದಿಗೆ ಸಭೆ ನಡೆಸಿ ದಾಖಲೆಗಳನ್ನು ಪರಿಶೀಲಿಸಿದರು. ನಗರ ಪ್ರದಕ್ಷಿಣ ಮಾಡುವ ಮೂಲಕ ಕಾಮಗಾರಿ ಪರಿಶೀಲನೆ ವೇಳೆ ವೃತದಲ್ಲಿ ಇದ್ದ ಕನಕದಾಸರ ಪ್ರತಿಮೆಗೆ ಸಚಿವ ಬಸವರಾಜ ಅವರು ಮಾಲಾರ್ಪಣೆ ಮಾಡಿದರು.
ತುಮಕೂರು ನಗರ ಶಾಸಕ ಜಿ. ಬಿ.ಜ್ಯೋತಿಗಣೇಶ, ಪಾಲಿಕೆ ಮೇಯರ್ ಶ್ರೀ ಕೃಷ್ಣಪ್ಪ, ಪಾಲಿಕೆ ಅಯುಕ್ತೆ ರೇಣುಕಾ ಸೇರಿದಂತೆ ಪಾಲಿಕೆ ಮತ್ತು ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರು, ಅಧಿಕಾರಿ ವರ್ಗದವರು ಉಪಸ್ಥಿತರಿದ್ದರು.