ದೆಹಲಿ: ದೇಶದಲ್ಲೀಗ ಕೋವಿಡ್ ಎರಡನೇ ಅಲೆಯಿಂದ ಜನ ಪಾರಾಗುತ್ತಿದ್ದಾರೆ ಎನ್ನುವಷ್ಟರಲ್ಲೇ ಇದೀಗ ಡೆಲ್ಟಾ ಪ್ಲಸ್ ಹಾವಳಿಯು ತಲ್ಲಣದ ತರಂಗ ಎಬ್ಬಿಸಿದೆ. ಇದು ಅತ್ಯಂತ ಅಪಾಯಕಾರಿ ವೈರಸ್ ಎಂದು ಕೇಂದ್ರ ಆರೋಗ್ಯ ಸಚಿವಾಲಯವೇ ಹೇಳಿದೆ.
ದೇಶಾದ್ಯಂತ ಮಾರಕ ಡೆಲ್ಟಾ ಪ್ಲಸ್ ಕೋವಿಡ್ ರೂಪಾಂತರಿಯ ಸುಮಾರು 40 ಸೋಂಕು ಪ್ರಕರಣಗಳು ವರದಿಯಾಗಿದೆ. ಕರ್ನಾಟಕದಲ್ಲಿ 2 ಪ್ರಕರಣ ಪತ್ತೆಯಾಗಿವೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.
ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ಹಂಚಿಕೊಂಡಿದ್ದು, ದೇಶಾದ್ಯಂತ 40 ಡೆಲ್ಟಾ ಪ್ಲಸ್ ರೂಪಾಂತರಿ ಸೋಂಕು ಪ್ರಕರಣಗಳ ಪೈಕಿ, ಮಹಾರಾಷ್ಟ್ರದಲ್ಲಿ ಗರಿಷ್ಠ ಸೋಂಕಿನ ಕೇಸ್‌ಗಳು ದೃಢಪಟ್ಟಿವೆ.
ಎಲ್ಲೆಲ್ಲಿ ಎಷ್ಟು ಕೇಸ್‌ಗಳು..?
- ಮಹಾರಾಷ್ಟ್ರದಲ್ಲಿ 21
- ಮಧ್ಯ ಪ್ರದೇಶದಲ್ಲಿ 6
- ಕೇರಳದಲ್ಲಿ 3
- ತಮಿಳುನಾಡಿನಲ್ಲಿ 3
- ಕರ್ನಾಟಕದಲ್ಲಿ 2
- ಪಂಜಾಬ್‌ನಲ್ಲಿ 1
- ಆಂಧ್ರಪ್ರದೇಶದಲ್ಲಿ 1
- ಜಮ್ಮು ಮತ್ತು ಕಾಶ್ಮೀರದಲ್ಲಿ 1
ಕರ್ನಾಟಕದಲ್ಲಿನ ಡೆಲ್ಟಾ ಪ್ಲಸ್ ರೂಪಾಂತರಿ ಸೋಂಕು ಪೈಕಿ ಮೈಸೂರು ಮತ್ತು ಬೆಂಗಳೂರಿನಲ್ಲಿ ತಲಾ ಒಂದೊಂದು ಪ್ರಕರಣಗಳು ಪತ್ತೆಯಾಗಿವೆ ಎಂದು ಮೂಲಗಳು ತಿಳಿಸಿವೆ.