ಬೆಂಗಳೂರು: ಒಂದಿಲ್ಲೊಂದು ವಿಚಾರದಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಕೆಣಕುತ್ತಿರುವ ಬಿಜೆಪಿ ಇದೀಗ ಮತ್ತೆ ಟೀಕಾಸ್ತ್ರ ಎಸೆದಿದೆ. ಸೋತಿರುವ ಚಾಮುಂಡೇಶ್ವರಿಯೇ ಆಗಲಿ, ಗೆದ್ದಿರುವ ಬಾದಾಮಿ ಕ್ಷೇತ್ರವೇ ಇರಲಿ, ಏನೇ ಪ್ರಶ್ನೆ ಕೇಳಿದರೂ ಸಿದ್ದರಾಮಯ್ಯನವರ ಸರ್ವಾಂಗ ಉರಿಯುತ್ತದೆಯಂತೆ. ಹೀಗೆಂದು ಹೇಳಿಕೊಳ್ಳುಕೊಳ್ಳುತ್ತಲೇ ಕೇಸರಿ ಪಡೆ ಸಿದ್ದರಾಮಯ್ಯನವರ ಚಾಮರಾಜನಗರ ರಹಸ್ಯ ಬೇಧಿಸುವ ಪ್ರಯತ್ನದಲ್ಲಿ ಕುತೂಹಲಕಾರಿ ಪ್ರಶ್ನೆಯನ್ನು ಮುಂದಿಟ್ಟಿದೆ.
ಏನಿದು ಚಾಮರಾಜಪೇಟೆ ರಹಸ್ಯ..?
ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರವು ಕಾಂಗ್ರೆಸ್ ಪಕ್ಷದ ಭದ್ರಕೋಟೆ. ದೇವೇಗೌಡರ ಕೃಪೆಯಿಂದ ಜಮೀರ್ ಅಹ್ಮದ್ ಈ ಹಿಂದೆ ಈ ಕ್ಷೇತ್ರದಲ್ಲಿ ಗೆದ್ದಿದ್ದನ್ನು ಬಿಟ್ಟರೆ ಆ ಕ್ಷೇತ್ರ ಈಗಿನ್ನೂ ಕೈ ಮುಷ್ಟಿಯಲ್ಲಿದೆ. ಆದರೆ ಈಗ ಎದುರಾಗಿರುವುದು ಪ್ರಾಬಲ್ಯದ ಪ್ರಶ್ನೆ ಅಲ್ಲ; ಸಿದ್ದರಾಮಯ್ಯ ಅವರು ಆ ಊರಿಗೆ ಆಗಾಗ್ಗೆ ಭೇಟಿ ನೋಡುತ್ತಿದ್ದಾರೆಂಬ ವಿಚಾರ. ಈ ಸಂಗತಿಯನ್ನು ಮುಂದಿಟ್ಟಿರುವ ಬಿಜೆಪಿ ಕೌತುಕದ ಪ್ರಶ್ನೆಗಳನ್ನು ಸಿದ್ದರಾಮಯ್ಯರ ಮುಂದಿಟ್ಟಿದೆ. ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಬಿಜೆಪಿಯು ಸಿದ್ದರಾಮಯ್ಯರ ‘ಅಪ್ಪಿಕೊಳ್ಳುವ’ ಉದ್ದೇಶದ ಬಗ್ಗೆ ಅನುಮಾನ ವ್ಯಕ್ತಪಡಿಸಿದೆ.
ಕೋವಿಡ್ ಸಂದರ್ಭವನ್ನು ಬಳಸಿ ಮತ್ತೊಂದು ಮಹಾವಲಸೆಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯರವರು ಸಿದ್ಧವಾಗಿರುವ ಸೂಚನೆ ಕಂಡುಬರುತ್ತಿದೆ. ಸ್ವಕ್ಷೇತ್ರ ಚಾಮುಂಡೇಶ್ವರಿಯಲ್ಲಿ ಸೋತು, ಬಾದಾಮಿ ಕ್ಷೇತ್ರದ ಶಾಸಕರಾಗಿದ್ದರೂ ಚಾಮರಾಜಪೇಟೆ ಕ್ಷೇತ್ರದ ಮೇಲೆ ವಿಶೇಷ ಒಲವು ತೋರುತ್ತಿರುವುದರ ಹಿಂದಿನ ಉದ್ದೇಶವಾದರೂ ಏನು ಎಂದು ಬಿಜೆಪಿ ಪ್ರಶ್ನಿಸಿದೆ.
ಕೋವಿಡ್ ಸಂದರ್ಭವನ್ನು ಬಳಸಿ ಮತ್ತೊಂದು ಮಹಾವಲಸೆಗೆ ಪ್ರತಿಪಕ್ಷ ನಾಯಕ @siddaramaiah ಸಿದ್ಧವಾಗಿರುವ ಸೂಚನೆ ಕಂಡುಬರುತ್ತಿದೆ.
ಸ್ವಕ್ಷೇತ್ರ ಚಾಮುಂಡೇಶ್ವರಿಯಲ್ಲಿ ಸೋತು, ಬಾದಾಮಿ ಕ್ಷೇತ್ರದ ಶಾಸಕರಾಗಿದ್ದರೂ ಚಾಮರಾಜಪೇಟೆ ಕ್ಷೇತ್ರದ ಮೇಲೆ ವಿಶೇಷ ಒಲವು ತೋರುತ್ತಿರುವುದರ ಹಿಂದಿನ ಉದ್ದೇಶವಾದರೂ?
— BJP Karnataka (@BJP4Karnataka) May 22, 2021
ಕೋವಿಡ್ ಬಂದ ನಂತರ ಬಾದಾಮಿ ಕ್ಷೇತ್ರಕ್ಕೆ ಎಷ್ಟು ಬಾರಿ ಭೇಟಿ ಕೊಟ್ಟಿದ್ದೀರಿ, ಎಷ್ಟು ಲಸಿಕೆ ಹಾಕಿಸಿದ್ದೀರಿ ಎಂಬಿತ್ಯಾದಿ ಜನಪರ ಪ್ರಶ್ನೆ ಕೇಳಿದರೆ ಸಿದ್ದರಾಮಯ್ಯ ಅವರಿಗೆ ಸರ್ವಾಂಗವೂ ಉರಿಯುತ್ತದೆ. ಆದರೆ ಚಾಮರಾಜಪೇಟೆ ಕ್ಷೇತ್ರಕ್ಕೆ ಪದೇ ಪದೇ ಭೇಟಿ ನೀಡುವ ಉದ್ದೇಶವನ್ನಾದರೂ ಸ್ಪಷ್ಟಪಡಿಸಿ ಸಿದ್ದರಾಮಯ್ಯ ಎಂದು ಬಿಜೆಪಿ ಪ್ರಶ್ನಿಸಿದೆ.
ಕೋವಿಡ್ ಬಂದ ನಂತರ ಬಾದಾಮಿ ಕ್ಷೇತ್ರಕ್ಕೆ ಎಷ್ಟು ಬಾರಿ ಭೇಟಿ ಕೊಟ್ಟಿದ್ದೀರಿ, ಎಷ್ಟು ಲಸಿಕೆ ಹಾಕಿಸಿದ್ದೀರಿ ಎಂಬಿತ್ಯಾದಿ ಜನಪರ ಪ್ರಶ್ನೆ ಕೇಳಿದರೆ @siddaramaiah ಅವರಿಗೆ ಸರ್ವಾಂಗವೂ ಉರಿಯುತ್ತದೆ.
ಆದರೆ ಚಾಮರಾಜಪೇಟೆ ಕ್ಷೇತ್ರಕ್ಕೆ ಪದೇ ಪದೇ ಭೇಟಿ ನೀಡುವ ಉದ್ದೇಶವನ್ನಾದರೂ ಸ್ಪಷ್ಟಪಡಿಸಿ ಸಿದ್ದರಾಮಯ್ಯ.
— BJP Karnataka (@BJP4Karnataka) May 22, 2021
ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ಟಿಪ್ಪು ಜಯಂತಿ ಆಚರಣೆ, ಶಾದಿಭಾಗ್ಯ ಯೋಜನೆಯನ್ನು ಏಕೆ ಜಾರಿಗೆ ತಂದಿದ್ದು ಎಂಬುದಕ್ಕೆ ಈಗ ಉತ್ತರ ಸಿಗುತ್ತಿದೆ. ಚಾಮರಾಜಪೇಟೆಯಂಥ ಕ್ಷೇತ್ರವನ್ನು ಸಮಯ ಬಂದಾಗ ಅಪ್ಪಿಕೊಳ್ಳುವ ಉದ್ದೇಶಕ್ಕಾಗಿ ಅಲ್ವೇ ಸಿದ್ದರಾಮಯ್ಯ? ಎಂಬ ಬಿಜೆಪಿ ಪ್ರಶ್ನೆ ಕುತೂಹಲಕಾರಿ ರಾಜಕೀಯ ಬೆಳವಣಿಗೆಯ ಸಾಧ್ಯತೆಯತ್ತ ಬೊಟ್ಟು ಮಾಡಿದೆ.
ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ಟಿಪ್ಪು ಜಯಂತಿ ಆಚರಣೆ, ಶಾದಿಭಾಗ್ಯ ಯೋಜನೆಯನ್ನು ಏಕೆ ಜಾರಿಗೆ ತಂದಿದ್ದು ಎಂಬುದಕ್ಕೆ ಈಗ ಉತ್ತರ ಸಿಗುತ್ತಿದೆ.
ಚಾಮರಾಜಪೇಟೆಯಂಥ ಕ್ಷೇತ್ರವನ್ನು ಸಮಯ ಬಂದಾಗ ಅಪ್ಪಿಕೊಳ್ಳುವ ಉದ್ದೇಶಕ್ಕಾಗಿ ಅಲ್ವೇ ಸಿದ್ದರಾಮಯ್ಯ?
— BJP Karnataka (@BJP4Karnataka) May 22, 2021