ಬೆಂಗಳೂರು: ಎಲ್ಲಾ ವರ್ಗದವರಿಗೆ ಸಮರ್ಪಕವಾಗಿ ಪರಿಹಾರ ಘೋಷಣೆಯಾಗಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ದೂರಿದ್ದಾರೆ.
ಸಿಎಂ ಘೋಷಿಸಿರುವ ಪರಿಹಾರ ಬಗ್ಗೆ ಪ್ರತಿಕ್ರಿಯಿಸಿರುವ ಡಿಕೆಶಿ, ಟೈಲರ್‌ಗಳು ಸಹಿತ ಹಲವು ಕೆಲಸಗಾರರೂ ನಮ್ಮ ರಾಜ್ಯದಲ್ಲಿದ್ದಾರೆ. ಅವರಿಗೆಲ್ಲಾ ಎಲ್ಲಿದೆ ಸೂಕ್ತ ಪರಿಹಾರ ಎಂದು ಪ್ರಶ್ನಿಸಿದ್ದಾರೆ.
ಪ್ಯಾಕೇಜ್ ಘೋಷಣೆಗೆ ಮುನ್ಬಾ ಬ್ಯಾಂಕ್‌ಗಳ ಮೂಲಕ ಸರ್ಕಾರ ಚರ್ಚೆ ಮಾಡಿದೆಯೇ? ಸಾಲದ ಕಂತು ಪಾವತಿ ವಿಚಾರದಲ್ಲಿ ಬ್ಯಾಂಕ್‌ಗಳು ಒಪ್ಪಿವೆಯೇ ಎಂದಿರುವ ಡಿ.ಕೆ.ಶಿವಕುಮಾರ್, ಸರ್ಕಾರ ಮನಸ್ಸು ಮಾಡಿದರೆ ಬಡವರ ಕೆಲವು ಕಂತಿನ ಸಾಲವನ್ನು ಮನ್ನಾ ಮಾಡಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪ್ಯಾಕೇಜ್ ಘೋಷಿಸಿರುವ ಸರ್ಕಾರ ಕಳೆದ ವರ್ಷ ಎಷ್ಟು ಮಂದಿಗೆ ಪರಿಹಾರ ಹಣ ಪಾವತಿಯಾಗಿದೆ ಎಂಬುದನ್ನು ತಿಳಿದಿದೆಯೇ ಎಂದು ಪ್ರಶ್ನಿಸಿರುವ ಡಿಕೆಶಿ, ಯಾರೆಲ್ಲಾ ಸಂಕಷ್ಟದಲ್ಲಿದ್ದಾರೆ ಎಂಬ ಬಗ್ಗೆ ಮಾಹಿತಿ ಪಡೆಯಲಿ. ಈ ಪರಿಹಾರದ ಹಣವನ್ನು ಪಂಚಾಯತ್ ಮೂಲಕ ವಿತರಿಸಲಿ ಎಂದರು.
ಪ್ರಸಕ್ತ ಘೋಷಿಸಿರುವ ಆರ್ಥಿಕ ನೆರವಿನ ಪ್ರಮಾಣವನ್ನು ಗಮನಿಸಿದರೆ ಪರಿಸ್ಥಿತಿ ನಿಭಾಯಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂಬುದನ್ನು ಸೂಚಿಸುತ್ತದೆ ಎಂದು ಡಿಕೆಶಿ ವಿಶ್ಲೇಷಿಸಿದ್ದಾರೆ.