ದೆಹಲಿ; ಭಾರತದಲ್ಲೂ ಕೊರೋನಾ ಮರಣ ಮೃದಂಗ ಭಾರಿಸುತ್ತಿದೆ. ಹಲವಾರು ರಾಜ್ಯಗಳಲ್ಲಿ ಆಕ್ಸಿಜನ್ ಕೊರತೆಯಿಂದಾಗಿ ಮಾರಣಹೋಮವೇ ನಡೆದಿದೆ. ಆಮ್ಲಜನಕ ಸಮರ್ಪಕ ಪೂರೈಕೆಗೆ ವಿವಿಧ ರಾಜ್ಯಗಳಿಂದ ಒತ್ತಡ ಇದ್ದು ಅದೇ ಸಂದರ್ಭದಲ್ಲಿ ಕೋರ್ಟ್ ಕೂಡಾ ಕೇಂದ್ರ ಸರ್ಕಾರಕ್ಕೆ ಪ್ರಹಾರ ಮಾಡಿದೆ.
ಈ ನಡುವೆ ಏಪ್ರಿಲ್ 19ರಿಂದ ವಿವಿಧ ರಾಜ್ಯಗಳಿಗೆ 268 ಕ್ಕೂ ಹೆಚ್ಚು ಟ್ಯಾಂಕರ್ ಗಳಲ್ಲಿ ಆಮ್ಲಜನಕ ರವಾನಿಸಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಸುಮಾರು 4,200 ಟನ್ ಲಿಕ್ವಿಡ್ ವೈದ್ಯಕೀಯ ಆಕ್ಸಿಜನ್ ಪೂರೈಸಲಾಗಿದೆ ಎಂದು ಭಾರತೀಯ ರೈಲ್ವೆ ತಿಳಿಸಿದೆ.
68 ‘ಆಕ್ಸಿಜನ್ ಎಕ್ಸ್ ಪ್ರೆಸ್’ ರೈಲುಗಳು ತಮ್ಮ ಪ್ರಯಾಣವನ್ನು ಪೂರ್ಣಗೊಳಿಸಿದೆ. ಮಹಾರಾಷ್ಟ್ರದಲ್ಲಿ 293, ಉತ್ತರ ಪ್ರದೇಶದಲ್ಲಿ 1230, ಮಧ್ಯಪ್ರದೇಶಕ್ಕೆ 271, ಹರಿಯಾಣಕ್ಕೆ 555, ತೆಲಂಗಾಣಕ್ಕೆ 123, ರಾಜಸ್ಥಾನಕ್ಕೆ 40 ಮತ್ತು ದೆಹಲಿಗೆ 1679 ಟನ್ ಲಿಕ್ವಿಡ್ ಆಕ್ಸಿಜನ್ ರವಾನಿಸಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.