ಹೋಂ ಐಸೋಲೇಷನ್ ಗಾಗಿ ವಸತಿ ಶಾಲೆಗಳ ಬಳಕೆ.. ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ್ ನಿರಾಣಿ ಸೂತ್ರದಂತೆ ಅಧಿಕಾರಿಗಳ ಕ್ರಮ.. ಗ್ರಾಮೀಣ ಭಾಗದವರಿಗೆ ಇದರಿಂದ ಅನುಕೂಲ.. ಕಲಬುರಗಿ ಜಿಲ್ಲೆಯಲ್ಲಿ ಪ್ರತ್ಯೇಕ ಆಕ್ಸಿಜನ್ ಕಾನ್ಸಂಟ್ರೇಟರ್..
ಕಲಬುರಗಿ – ಕಲಬುರಗಿ ಜಿಲ್ಲೆಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಕೊರೋನಾ ಸೋಂಕಿತರಿಗೆ ಪ್ರತ್ಯೇಕ ಹೋಂ
ಐಸೋಲೇಷನ್ ಕಲ್ಪಿಸುವ ಸಂಬಂಧ ಸಮಾಜ ಕಲ್ಯಾಣ ಇಲಾಖೆಯಡಿ ಬರುವ ವಸತಿ ಶಾಲೆಗಳನ್ನು ಬಳಸಿಕೊಳ್ಳಲು ಗಣಿ ಮತ್ತು ಭೂವಿಜ್ಞಾನ ಹಾಗೂ
ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ್ ಆರ್ ನಿರಾಣಿ ಅವರು ತೀರ್ಮಾನಿಸಿದ್ದಾರೆ.
ಈ ಸಂಬಂಧ ಕಲಬುರಗಿ ಜಿಲ್ಲೆಯ ಜಿಲ್ಲಾಧಿಕಾರಿ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು, ವಾರ್ಡನ್ ಸೇರಿದಂತೆ ಮತ್ತಿತರ ಜೊತೆ ಮಾತುಕತೆ ನಡೆಸಿ ವಸತಿ ಶಾಲೆಗಳನ್ನು ತಾತ್ಕಾಲಿಕವಾಗಿ ಹೋಂ ಐಸೋಲೇಶನ್ ಗೆ ಬಳಸಿಕೊಳ್ಳಲು ಸೂಚನೆ ನೀಡಿದ್ದಾರೆ.
ಸದ್ಯ ಲಾಕ್ ಡೌನ್ ಹಾಗೂ ಬೇಸಿಗೆ ಇರುವ ಕಾರಣ, ವಸತಿ ಶಾಲೆಗಳಿಗೆ ರಜೆ ನೀಡಲಾಗಿದೆ.
ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಬರುವ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಹಿಂದುಳಿದ ವರ್ಗಗಳ. ಬಾಲಕರು ಹಾಗೂ ಬಾಲಕಿಯರ ವಸತಿ ಶಾಲೆಗಳನ್ನು ಕೆಲ ದಿನಗಳ ಮಟ್ಟಿಗೆ ಬಳಕೆಮಾಡಿಕೊಳ್ಳಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ನಗರ ಪ್ರದೇಶಗಳಲ್ಲಿ ಹೋಂ ಐಸೋಲೇಷನ್ ಗೆ ಒಳಗಾಗುವ ವ್ಯಕ್ತಿಗಳಿಗೆ ಪ್ರತ್ಯೇಕವಾದ ಕೊಠಡಿ, ಶೌಚಾಲಯ, ಸೇರಿದಂತೆ ಮತ್ತಿತರ ಸೌಲಭ್ಯಗಳು ಲಭ್ಯವಿರುತ್ತವೆ. ಆದರೆ, ಗ್ರಾಮೀಣ ಪ್ರದೇಶಗಳಲ್ಲಿ ಹೋಂ ಐಸೋಲೇಷನ್ ಗೆ ಒಳಗಾದರೆ ಅವರಿಗೆ ಪ್ರತ್ಯೇಕ ಕೊಠಡಿ, ಶೌಚಾಲಯ ಸವಲತ್ತುಗಳು ಸಿಗುವುದಿಲ್ಲ. ಇದರಿಂದ ಉಂಟಾಗುವ ಸಮಸ್ಯೆಗಳನ್ನು ತಪ್ಪಿಸುವ ಸಲುವಾಗಿಯೇ ವಸತಿ ಶಾಲೆಗಳನ್ನು ಬಳಕೆ ಮಾಡಿಕೊಳ್ಳುವಂತೆ ಸಲಹೆ ಮಾಡಿದ್ದಾರೆ.
ಅವರಿಗೆ ಹಾಸಿಗೆ, ಶೌಚಾಲಯ, ಉಟ, ತಿಂಡಿ, ಅಡುಗೆ ಭಟ್ಟರು ಸೇರಿದಂತೆ ಮತ್ತಿತರ ಸವಲತ್ತುಗಳನ್ನು ಒದಗಿಸಲು ಬೇಕಾದ ಪೂರ್ವ ಸಿದ್ಧತೆಗಳನ್ನು ಕೈಗೊಳ್ಳುವಂತೆಯೂ ಸೂಚಿಸಿದ್ದಾರೆ.
ಜಿಲ್ಲಾ ಹಾಗೂ ತಾಲ್ಲೂಕಿನಲ್ಲಿರುವ ನೊಡೆಲ್ ಅಧಿಕಾರಿಗಳು ಇದರ ನಿವಾ೯ಹಣೆಯನ್ನು ನೋಡಿಕೊಳ್ಳಬೇಕು ಎಂದು ನಿರಾಣಿ ಸೂಚಿಸಿದ್ದಾರೆ.
ಪ್ರತ್ಯೇಕ ಆಕ್ಸಿಜನ್ ಕಾನ್ಸಂಟ್ರೇಟರ್
ಆಮ್ಲಜನಕ ಪೂರೈಕೆಗೆ ಅನುಕೂಲವಾಗುವಂಥ
‘ಆಕ್ಸಿಜನ್ ಕಾನ್ಸಂಟ್ರೇಟರ್’ ಖರೀದಿಗೆ ಈಗಾಗಲೇ ಶಾಂಘೈ ಸರ್ಕಾರದ ಜತೆಗೆ ಮಾತುಕತೆ ನಡೆಸಲಾಗಿದೆ.10 ಲೀಟರ್ ಸಾಮಾಥ್ಯ೯ದ 500 ಕಾನ್ಸಂಟ್ರೇಟರ್‌ಗಳು ಸರಬರಾಜು ಮಾಡಲು ಕೋರಲಾಗಿದೆ. ಕಲಬುರಗಿ ಜಿಲ್ಲೆಯಲ್ಲಿ ಆಮ್ಲಜನಕ ಕೊರತೆ ನೀಗಿಸಿ, ಸಾವಿನ ಸಂಖ್ಯೆ ಕಡಿಮೆ ಮಾಡಲು ಆದ್ಯತೆ ನೀಡಿದಲಾಗಿದೆ. ಕಾನ್ಸಂಟ್ರೇಟರ್‌ನಿಂದ ಏಕಕಾಲಕ್ಕೆ ಇಬ್ಬರಿಗೆ ಆಮ್ಲಜನಕ ಪೂರೈಕೆ ಮಾಡಲು ಅನುಕೂಲವಾಗುತ್ತದೆ. ವಿಶೇಷ ವಿಮಾನದ ಮೂಲಕ ಕಲಬುರ್ಗಿಗೆ ತರಲಾಗುತ್ತದೆ ಎಂದು ಸಚಿವ ಮುರುಗೇಶ್ ನಿರಾಣಿ ತಿಳಿಸಿದ್ದಾರೆ.
ಆಮ್ಲಜನಕ ಸರಬರಾಜು, ಪೂರೈಕೆ ಮಾಡಲು ಟ್ಯಾಂಕರ್ಗಳು ಅಗತ್ಯವಿದ್ದು, ಕೆಲವು ಖಾಸಗಿಯವರ ಜೊತೆ ಈಗಾಗಲೇ ಮಾತುಕತೆ ನಡೆಸಿದ್ದು,2- ಅಥವಾ 3 ದಿನಗಳಲ್ಲಿ ಈ ಸಮಸ್ಯೆ ಇತ್ಯಾಥ೯ವಾಗಲಿದೆ.
ವಿಶೇಷವಾಗಿ, ಆಮ್ಲಜನಕ ಸರಬರಾಜು ಮಾಡಲು ಜಿಲ್ಲೆಗಾಗಿಯೇ ಒಂದು ಪ್ರತ್ಯೇಕ ವಾಹನ ಪಡೆಯಲು ಏಜೆನ್ಸಿ ಸಚಿವರು ಈಗಾಗಲೇ ಮಾತುಕತೆ ನಡೆಸಿದ್ದಾರೆ.ಆಮ್ಲಜನಕ ತುಂಬಿದ ಈ ಟ್ಯಾಂಕರ್ ಇಡೀ ದಿನ ಇಲ್ಲೇ ಇರಲಿದೆ. ಖಾಲಿ ಆದ ತಕ್ಷಣ ಮತ್ತೆ ತುಂಬಿಕೊಂಡು ಬರಲಿದೆ. ಅಗತ್ಯದಷ್ಟು ಆಮ್ಲಜನಕ ಪೂರೈಸಲು ಬಳ್ಳಾರಿಯ ಜಿಂದಾಲ್ ಕಂಪನಿ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ. ಇದೊಂದು ಆಶಾದಾಯಕ ಬೆಳವಣಿಗೆಯಾಗಿದೆ ಎಂದವರು ಹೇಳಿದ್ದಾರೆ.
ಪ್ರತ್ಯೇಕ ಪ್ರ್ಲೋರ್ ವ್ಯವಸ್ಥೆ
ಇನ್ನು ಮುಂದೆ ಜಿಲ್ಲೆಯಲ್ಲಿರುವ ಸರಕಾರಿ ಆಸ್ಪತ್ರೆಗಳಲ್ಲಿ ಕೋವಿಡ್ – 19 ಸೋಂಕಿತರಿಗಾಗಿ
ಪ್ರತ್ಯೇಕವಾದ ಪ್ರೋರ್ ಕಾಯಾ೯ರಂಭ ಮಾಡಲಿದೆ.
ಈ ವರೆಗೂ ಕೋವಿಡ್ ಸೋಂಕಿತರು ಹಾಗೂ ಸಾಮಾನ್ಯ ಜನರಿಗೂ ಚಿಕಿತ್ಸೆ ನೀಡಲು ಅನಾನುಕೂಲವಾಗುತ್ತಿತ್ತು. ಇದನ್ನು ತಪ್ಪಿಸಲು ಮುಂದಾಗಿರುವ ಸಚಿವ ನಿರಾಣಿ ಅವರು, ಕೋವಿಡ್ ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ಪ್ರತ್ಯೇಕವಾದ ಪ್ರ್ಲೋರ್ ಸಿದ್ದಪಡಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದಾರೆ.
ಪ್ರತ್ಯೇಕವಾದ ಪ್ರ್ಲೋರ್ ಇರುವುದರಿಂದ ಉತ್ತಮ ವೈದ್ಯಕೀಯ ಸೌಲಭ್ಯ, ಯಾರಿಗೆ ಅಕ್ಸಿಜನ್ ನೀಡಬೇಕು? ಇನ್ಯಾರಿಗೆ ಐಸಿಯೂ ವ್ಯವಸ್ಥೆ, ಕಲ್ಪಿಸಬೇಕು? ಯಾರಿಗೆ ರೆಮಿಡಿಸಿವರ್ ಔಷಧಿ ಕೊಡಬೇಕು ಸೇರಿದಂತೆ ಎಲ್ಲಾ ಮಾಹಿತಿಯೂ ಏಕಕಾಲಕ್ಕೆ ಲಭ್ಯವಾಗುವುದರಿಂದ ಸಚಿವರು
ಈ ತೀಮಾ೯ನಕ್ಕೆ ಬಂದಿದ್ದಾರೆ. ಜೊತೆಗೆ ಇನ್ನು ಮುಂದೆ ಪ್ರತಿಯೊಂದು ಆಸ್ಪತ್ರೆಗಳಲ್ಲಿ ಕೋವಿಡ್ ಸೋಂಕಿತರಿಗೆ ಎಷ್ಟು ಪ್ರಮಾಣದಲ್ಲಿ ಆಕ್ಸಿಜನ್ ನೀಡಬೇಕು? ಆಸ್ಪತ್ರೆಯಲ್ಲಿ ಸಿಲಿಂಡರ್ ಲಭ್ಯತೆ ಸೇರಿದಂತೆ ಇತ್ಯಾದಿ ಮಾಹಿತಿ ಲಭ್ಯವಾಗಲಿದೆ.
ವೆಂಟಿಲೇಟರ್ ಸಮರ್ಪಕ ಬಳಕೆ
ಈಗಾಗಲೇ ಜಿಲ್ಲೆಯ ಕೆಲವು ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ಸಮಸ್ಯೆ ಎದುರಾಗಿರುವುದರಿಂದ ಯಾವುದೇ ರೀತಿಯಲ್ಲೂ ದುಬ೯ಳಕೆಯಾಗದಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಸ್ವಲ್ಪವೂ ದುರುಪಯೋಗದಂತೆ ಎಚ್ಚರಬಹಿಸುವಂತೆ ಸೂಚಿಸಲಾಗಿದೆ. ಕಳೆದ ವರ್ಷ ಜಿಲ್ಲೆಗೆ ಎಷ್ಟು ಪ್ರಮಾಣದಲ್ಲಿ ವೆಂಟಿಲೇಟರ್ ಸರಬರಾಜಾಗಿತ್ತೋ ಅದನ್ನು ಕೂಡ ಸಮರ್ಪಕವಾಗಿ ಬಳಸಿಕೊಳ್ಳಬೇಕು.ಯಾವುದೇ ರೀತಿಯಲ್ಲೂ ಹಾಳು ಮಾಡುವುದು ಇಲ್ಲವೇ ದುರುಪಯೋಗವಾಗದಂತೆ ಅಧಿಕಾರಿಗಳು ತೀವ್ರ ನಿಗಾವಹಿಸಬೇಕೆಂದು ಸೂಚಿಸಿದ್ದಾರೆ.
ಜಿಲ್ಲೆಯಲ್ಲಿ ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್ ಗಳ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಆಸ್ಪತ್ರೆಯ ಮುಂಭಾಗದಲ್ಲಿ ಪ್ರತಿದಿನ ಎಷ್ಟು ಬೆಡ್ ಗಳಿವೆ ಎಂಬುದನ್ನು ಮುಂಭಾಗದಲ್ಲಿ ಪ್ರದಶಿ೯ಸಬೇಕು. ಲಭ್ಯವಿರುವ ಬೆಡ್ ಗಳನ್ನು ಸಂಪೂರ್ಣವಾಗಿ ಬಳಸಿಕೊಳ್ಳಬೇಕು ಎಂದು ಸಚಿವ ನಿರಾಣಿ ಅವರು ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಅಧಿಕಾರಿಗಳು ಸಬೂಬು ಹೇಳದೆ ಮೈ ಚಳಿ ಬಿಟ್ಟು ಕೆಲಸ ಮಾಡಬೇಕು. ಅನಗತ್ಯವಾಗಿ ಯಾರೊಬ್ಬರೂ ರಜೆ ತೆಗೆದುಕೊಳ್ಳದೆ ಸಾಂಕ್ರಾಮಿಕ ರೋಗವನ್ನು ಮುಕ್ತಗೊಳಿಸಲು ಜಿಲ್ಲಾಡಳಿತ ಸಜ್ಜಾಗುವಂತೆ ಕರೆಕೊಟ್ಟಿದ್ದಾರೆ.