ಗದಗ: ಸಮರ್ಪಕ ಕುಡಿಯುವ ನೀರಿಗಾಗಿ ಆಗ್ರಹಿಸಿ ಗದಗ್ ಶಹಪೂರ ಪೇಟೆ ನಿವಾಸಿಗಳು ವಿನೂತನವಾಗಿ ಪ್ರತಿಭಟನೆ ನಡೆಸಿದರು. ತಮಟೆ ಬಾರಿಸುತ್ತಾ ಖಾಲಿ ಕೊಡದ ಜೊತೆಗೆ ನಗರಸಭೆಗೆ ದೌಡಾಯಿಸಿದ ಮಹಿಳೆಯರು ಕೈಯಲ್ಲಿ ಕಸಬರಿಗೆ ಹಿಡಿದು ಬಾಯಿ ಬಡೆದುಕೊಳ್ಳುತ್ತಾ ಪ್ರತಿಭಟನಾ ಮೆರವಣಿಗೆ ನಡೆಸಿ ತಮ್ಮ ಆಕ್ರೋಶ ಹೊರ ಹಾಕಿದರು.
ಶಹಪೂರಪೇಟೆಯಿಂದ ಗಾಂಧಿ ವೃತ್ತದ ಮಾರ್ಗವಾಗಿ ನಗರಸಭೆಗೆವರೆಗೂ ಮಹಿಳೆಯರು ಪ್ರತಿಭಟನಾ ಮೆರವಣಿಗೆ ನಡೆಸಿದರ. ನಗರದ ಜನತೆಗೆ 24×7 ಕುಡಿಯುವ ನೀರಿನ ಸಂಪರ್ಕ ಒದಗಿಸಲಾಗಿದೆ ಅಂತ ಜನಪ್ರತಿನಿಧಿಗಳು ಪ್ರಚಾರ ಗಿಟ್ಟಿಸಿಕೊಳ್ತುದ್ದಾರೆ. ಆದರೆ ನಮ್ಮ ವಾರ್ಡಿಗೆ ನೀರು ಬಂದು ಹಲವಾರು ತಿಂಗಳುಗಳೇ ಕಳೆದವು. ಒಂದು ಸಾರಿ ನೀರು ಬಂದ್ರೆ ತಿಂಗಳುಗಟ್ಟಲೇ ಸರಿಯಾಗಿ ನೀರು ಬರುವದಿಲ್ಲ. ಕೇಳಿದ್ರೆ ಅದಕ್ಕೂ ನಮಗೂ ಸಂಬಂದವಿಲ್ಲದಂತೆ ಮಾತಾಡ್ತಾರೆ. ನೀರಿನ ಸಮಸ್ಯೆ ಬಗೆಹರಿಯುವವರೆಗೂ ಮನೆ ಕಡೆ ಮುಖ ಮಾಡುವದಿಲ್ಲ ಅಂತ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು