ದೊಡ್ಡಬಳ್ಳಾಪುರ: ಲಾಕ್‌ಡೌನ್ ಹಿನ್ನೆಲೆಯಲ್ಲಿ ನೇಕಾರರು ಪಡೆದಿದ್ದ ರೂ1 ಲಕ್ಷ ಸಾಲ ಮನ್ನಾ ಯೋಜನೆಯಲ್ಲಿ ನಮ್ಮ ಬ್ಯಾಂಕ್‌ಗೆ ರೂ3 7 ಲಕ್ಷ ಸಬ್ಸಿಡಿ ಬಂದಿದೆ. ಈ ಎಲ್ಲಾ ಹಣವನ್ನು ಸಾಲ ಪಡೆದಿದ್ದ ಅರ್ಹ ನೇಕಾರರ ಖಾತೆಗಳಿಗೆ ಜಮೆ ಮಾಡಲಾಗಿದೆ ಎಂದು ದೊಡ್ಡಬಳ್ಳಾಪುರ ಟಿಎಂಸಿ ಬ್ಯಾಂಕ್ ಅಧ್ಯಕ್ಷ ಕೆ.ಪಿ.ವಾಸುದೇವಮೂರ್ತಿ ಹೇಳಿದ್ದಾರೆ.
ದೊಡ್ಡಬಳ್ಳಾಪುರ ನಗರದ ಟಿಎಂಸಿ ಬ್ಯಾಂಕ್‌ನಲ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ 202 ಜನ ನೇಕಾರರಿಗೆ ಸರ್ಕಾರದ ಸಾಲ ಮನ್ನಾ ಯೋಜನೆಯ ಉಪಯೋಗ ದೊರೆತಿದೆ. ಈ ಹಿಂದೆ ಸಾಲ ಮರುಪಾವತಿ ಮಾಡದ ಸುಸ್ಥಿದಾರರ ಬಡ್ಡಿ ಮಾತ್ರ ಮನ್ನಾ ಮಾಡಲಾಗಿತ್ತು. ಆದರೆ ಸಾಲ ಮರುಪಾವತಿ ಮಾಡಿದ್ದ ನೇಕಾರರ ಮನವಿಯ ನಂತರ 2019ರ ಜನವರಿ 1 ರಿಂದ 2019ರ ಮಾರ್ಚ್ 31ವರೆಗೂ ರೂ1ಲಕ್ಷ ಸಾಲ ಮರುಪಾವತಿ ಮಾಡಿದ್ದ ನೇಕಾರರಿಗು ಈಗ ಸಾಲ ಮನ್ನಾ ಮಾಡಲಾಗಿದೆ. ಇದು ರಾಜ್ಯ ಸರ್ಕಾರ ನೇಕಾರರಿಗೆ ನೀಡಿರುವ ಯುಗಾದಿ ಬಂಪರ್ ಕೊಡುಗೆಯಾಗಿದೆ ಎಂದರು.
ಟಿಎಂಸಿ ಬ್ಯಾಂಕ್ ವತಿಯಿಂದ ನೇಕಾರರಿಗೆ ರೂ2 ಕೋಟಿ ಸಾಲ ನೀಡಲಾಗಿದೆ. ಲಾಕ್ಡೌನ್ ಸಂದರ್ಭದಲ್ಲಿ ನೇಕಾರರ ನೆರವಿಗೆ ನಮ್ಮ ಬ್ಯಾಂಕ್ ವತಿಯಿಂದ ನಾಲ್ಕು ಹಂತದ ಯೋಜನೆಗಳ ಮೂಲಕ ರೂ 25 ಸಾವಿರದಿಂದ ರೂ 3 ಲಕ್ಷಗಳವರೆಗೂ ಸಾಲ ನೀಡಲಾಗಿದೆ. ನೇಕಾರ ಕಾರ್ಮಿಕರಿಂದ ಯಾವುದೇ ಆಧಾರ ಇಲ್ಲದೆ ಸಾಲ ನೀಡಲಾಗಿದೆ. ಹಾಗೆಯೇ ವಿದ್ಯುತ್ ಮಗ್ಗಗಳನ್ನು ಹೊಂದಿರುವ ನೇಕಾರರಿಗು ಸಹ ಯಾವುದೇ ಆಧಾರ ಇಲ್ಲದೆ ಮಗ್ಗದ ಮೇಲೆಯೇ ರೂ3 ಲಕ್ಷದವರೆಗೂ ಸಾಲ ನೀಡಿ ಮರುಪಾವತಿಯ ಅವಧಿಗು ಸಾಕಷ್ಟು ಕಾಲಾವಕಾಸ ನೀಡಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಟಿಎಂಸಿ ಬ್ಯಾಂಕ್ ಉಪಾಧ್ಯಕ್ಷ ಜಿ.ಮಂಜುನಾಥ್, ನಿರ್ದೇಶಕರಾದ ಪಿ.ಸಿ.ವೆಂಕಟೇಶ್, ಕೆ.ಎಂ.ಕೃಷ್ಣಮೂರ್ತಿ, ಬಿ.ಆರ್.ಉಮಾಕಾಂತ್, ಎ.ಆರ್.ಶಿವಶಂಕರ್, ಬಿ.ಪ್ರಶಾಂತ್, ಎ.ಗಿರಿಜಾ, ಡಾ.ಇಂದಿರಾ, ನಾರಾಯಣನಾಯ್ಡು ಉಪಸ್ಥಿತರಿದ್ದರು.