ವರದಿ : ಹೆಚ್ ಎಂ ಪಿ ಕುಮಾರ್
ದಾವಣಗೆರೆ: ದಾವಣಗೆರೆಯ ಗ್ರಾಮಾಂತರ ಉಪವಿಭಾಗದ ಡಿವೈಎಸ್‌ಪಿ ನರಸಿಂಹ ತಾಮ್ರಧ್ವಜ ನೇತೃತ್ವದಲ್ಲಿ 24 ಗಂಟೆಯಲ್ಲಿ ಮತ್ತೊಂದು ದಾಳಿ ನಡೆಸಿ 2 ಲಕ್ಷದ 76 ಸಾವಿರ ಮೌಲ್ಯದ ಸ್ಫೋಟಕ ವಸ್ತುಗಳನ್ನ ವಶಕ್ಕೆ ಪಡೆಯಲಾಗಿದೆ.
ಶಿವಮೊಗ್ಗ ಹಾಗೂ ಚಿಕ್ಕಬಳ್ಳಾಪುರ ದಲ್ಲಿ ನಡೆದ ಘಟನೆಗಳು ಪುನಃ ಮರುಕಳಿಸದಂತೆ ದಾವಣಗೆರೆ ಪೋಲೀಸ್ ಮುಂಜಾಕೃತವಾಗಿ ಉತ್ತಮ ಕೆಲಸ ಮಾಡುತ್ತಿದ್ದಾರೆ.
ನಿನ್ನೆ ದಾವಣಗೆರೆ ಗ್ರಾಮಾಂತರ ವ್ಯಾಪ್ತಿಯ ಕಾಡಜ್ಜಿ ಗ್ರಾಮದಲ್ಲಿ ಷಣ್ಮುಖಪ್ಪ ಎಂಬುವವರಿಗೆ ಸೇರಿದ ದುರ್ಗಾದೇವಿ ಎಕ್ಸ್ ಪ್ಲೋಸಿವ್ ಮ್ಯಾಗಜೀನ್ ಬಳಿ ಇರುವ ಗೋಡಾನ್ ನಲ್ಲಿ ಅಕ್ರಮವಾಗಿ ಸಂಗ್ರಹಣೆ ಮಾಡಿಕೊಂಡಿದ್ದ ಸ್ಫೊಟಕ ವಸ್ತುಗಳು ಹಾಗೂ ಸಾಗಾಣಿಕೆ ಮಾಡಲು ಬಂದಿದ್ದ ಬೋಲೆರೊ ಪಿಕ್ ಅಪ್ ವಾಹನವನ್ನ ಜಪ್ತಿ ಮಾಡಿ 4 ಜನರನ್ನ ಬಂಧಿಸಲಾಗಿತ್ತು. ಬಂಧಿತ ಎ ಒನ್ ಆರೋಪಿ ವಿಕ್ರಮ್ ನೀಡಿದ ಮಾಹಿತಿ ಮೇರೆಗೆ ರಾಯಚೂರು ಜಿಲ್ಲೆಯ ಮಾನ್ವಿಯಲ್ಲಿ ಸಂಗ್ರಹಿಸಿದ್ದ ಸ್ಫೋಟಕ ವಸ್ತುಗಳನ್ನ ವಶಕ್ಕೆ ಪಡೆದು ಆರೋಪಿ ಶೇಕ್ ಮುಜಾಹಿದ್ ಎಂಬಾತನನ್ನ ಬಂಧಿಸಲಾಗಿದೆ. ಶೇಕ್ ಮುಜಾಹಿದ್ ರಾಯಚೂರಿನ ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿಯ ಆರ್ ಜಿ ಕ್ಯಾಂಪ್ ನಲ್ಲಿದ್ದ ಗೋದಾಮಿಗೆ ಸ್ಥಳೀಯ ಪೊಲೀಸ್ ನೆರವಿನಿಂದ ಬಂದಿಸಿ ದಾವಣಗೆರೆಗೆ ಕರೆತರಲಾಗಿದೆ. ಈತ ಹಲವು ದಿನಗಳಿಂದ ದಾವಣಗೆರೆಯ ವಿಕ್ರಮ್ ಎಂಬುವವರಿಗೆ ಸ್ಫೋಟಕ ವಸ್ತುಗಳನ್ನ ಸರಬರಾಜು ಮಾಡುತ್ತಿದ್ದ ವಿಷಯ ಇದೀಗ ಬೆಳಕಿಗೆ ಬಂದಿದೆ.
ರಾಯಚೂರಿನ ಮಾನ್ವಿಯಲ್ಲಿ ದೊರೆತ ವಸ್ತುಗಳ ವಿವರ:
1.ಒಂದು ಲಕ್ಷ ಹತ್ತು ಸಾವಿರ ಮೌಲ್ಯದ 50 ಬಾಕ್ಸ್ ಜಿಲೆಟಿನ್ ಗಳು.
2. ಆರು ಬಾಕ್ಸ್ ಎಲೆಕ್ಟ್ರಿಕ್ ಡಿಟೋನೆಟರ್ ತೊಂಬತ್ತು ಸಾವಿರ ಮೌಲ್ಯ.
3. ಪವರ್ ಕಾರ್ಡ್ ಸೇಫ್ಟಿ ಫ್ಯೂಸ್.
4. ಐವತ್ತು ಕೆಜಿಯ 5 ಚೀಲಗಳಲ್ಲಿದ್ದ ಒಟ್ಟು 750 ಕೆಜಿ ಅಮೋನಿಯಂ ನೈಟ್ರೇಟ್.
ಒಟ್ಟು 2 ಲಕ್ಷದ 76 ಸಾವಿರ ಮೌಲ್ಯದ ಸ್ಫೋಟಕ ವಸ್ತುಗಳನ್ನ ವಶಪಡಿಸಿಕೊಂಡಿದ್ದಾರೆ.
ದಾವಣಗೆರೆ ಮೂಲದ ವಿಕ್ರಮ್, ನಾಗರಾಜ್, ವಿಜಯ್, ಮಂಜುನಾಥ್ ಎಂಬುವವರನ್ನ ಬಂಧಿಸಿದ್ದು, ಷಣ್ಮುಖಪ್ಪ ಹಾಗೂ ಮುಜಿಬ್ ಎಂಬುವವರ ಮೇಲೆ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ವಿಕ್ರಮ್ ನೀಡಿದ ಮಾಹಿತಿ ಮೇರೆಗೆ ದಾವಣಗೆರೆಯಿಂದ ಮಾನ್ವಿಗೆ ತೆರೆಳಿದ್ದ ಡಿವೈಎಸ್‌ಪಿ ಜೊತೆ ಪಿಎಸ್‌ಐ ಪುಷ್ಪಲತಾ, ಸಿಬ್ಬಂದಿ ವೀರಭದ್ರಪ್ಪ, ದೇವೆಂದ್ರನಾಯ್ಕ್, ನಾಗರಾಜಯ್ಯ, ವೆಂಕಟೇಶ ರೆಡ್ಡಿ, ಮಂಜುನಾಥ ಗೌಡ, ಅರುಣ ಕುಮಾರ್ ಇವರಿದ್ದ ತಂಡಕ್ಕೆ ದಾವಣಗೆರೆ ಎಸ್ ಪಿ ಹನುಮಂತರಾಯ ಬಹುಮಾನ ಘೋಷಿಸಿದ್ದಾರೆ.