ವರದಿ : ಹೆಚ್ ಎಂ ಪಿ ಕುಮಾರ್.
ದಾವಣಗೆರೆ. ಇತ್ತೀಚಿನ ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಕೊಟ್ಟ ಮಾತಿನಂತೆ ನಡೆದ ಇಂದು ಚಿತ್ರ ನಟ ದರ್ಶನ್ ಅವರು ಮಾಜಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ ಅವರಿಗೆ
ಕುದುರೆಯ ತಡಿ ( ಕುದುರೆಯ ಮೇಲೆ ಮನುಷ್ಯ ಕುಳಿತುಕೊಳ್ಳಲು ಹಾಕುವ ವಸ್ತು) ನೀಡುವ ಮೂಲಕ ಕೃತಜ್ಞತೆ ಸಲ್ಲಿಸಿದರು.
ಹುಬ್ಬಳ್ಳಿಯಲ್ಲಿ ರಾಬರ್ಟ್ ಸಿನಿಮಾದ ಪ್ರೀ ರಿಲೀಸಿಂಗ್ ಇವೆಂಟ್ ಮುಗಿಸಿದ ನಟ ದರ್ಶನ್ ದಾವಣಗೆರೆಗೆ ಭೇಟಿ ನೀಡಿ ಮಲ್ಲಿಕಾರ್ಜುನ ಜೊತೆ ಸೌಹಾರ್ದ ಮಾತುಕತೆ ನಡೆಸಿದರು.
ಕಾಂಗ್ರೆಸ್ ನಾಯಕ ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರ ಒಡೆತನದ ಬಾಪೂಜಿ ಅತಿಥಿ ಗೃಹಕ್ಕೆ ತೆರಳಿದ ವೇಳೆ ನಟರಾದ ಚಿಕ್ಕಣ್ಣ, ವಿನೋದ್ ಪ್ರಭಾಕರ್, ರವಿಶಂಕರ್ ಕೂಡ ಜೊತೆಗಿದ್ದರು.ಮೊದಲಿನಿಂದಲೂ ಎಸ್.ಎಸ್.ಮಲ್ಲಿಕಾರ್ಜುನ್ಗೆ ನಟ ದರ್ಶನ್ ಆಪ್ತರಾಗಿದ್ದು, ಕಳೆದ ಬಾರಿ ದರ್ಶನ್‌ಗೆ ಮಲ್ಲಿಕಾರ್ಜುನ್ ಕುದುರೆಯೊಂದನ್ನ ಉಡುಗೊರೆಯಾಗಿ ನೀಡಿದ್ದಾರೆ.
ಅಮೇರಿಕಾದಿಂದ ತಂದಿದ್ದ ಕುದುರೆಯ ತಡಿ (ಜೀನ್) ನನ್ನು ಉಡುಗೊರೆಯಾಗಿ ದರ್ಶನ್ ನೀಡಿದರು. ನಂತರ ಮಲ್ಲಿಕಾರ್ಜುನ್ ರವರ ಒಡೆತನದ ಮುದೋಳದ ಸಕ್ಕರೆ ಕಾರ್ಖಾನೆಯಲ್ಲಿ ಪ್ರಸಕ್ತ ಹಂಗಾಮಿನಲ್ಲಿ 20 ಲಕ್ಷ ಟನ್ ಕಬ್ಬ ಅರೆದಿದ್ದು, ಮಲ್ಲಿಕಾರ್ಜುನ ಅವರನ್ನು ದರ್ಶನ್ ಅವರು ರೈತರ ಪರವಾಗಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಸದಸ್ಯ ಜಿ.ಎಸ್.ಮಂಜುನಾಥ್ ಗಡಿಗುಡಾಳ್, ಎಪಿಎಂಸಿ ಮಾಜಿ ಅಧ್ಯಕ್ಷ ಮುದೇಗೌಡ್ರು ಗಿರೀಶ್, ಬಿ.ಕೆ.ಪರಶುರಾಮ ಸೇರಿದಂತೆ ಮಲ್ಲಿಕಾರ್ಜುನ ಮತ್ತು ದರ್ಶನ್ ಅವರ ಅಭಿಮಾನಿಗಳು ಉಪಸ್ಥಿತರಿದ್ದರು.