ಮುಂಬೈ:ಜಾಗತಿಕ ಉದ್ಯಮ ಕ್ಷೇತ್ರದ ದಿಗ್ಗಜ ಮುಕೇಶ್ ಅಂಬಾನಿ ಹತ್ಯೆಗೆ ಸಂಚು ನಡೆದಿದೆಯೇ? ಇಂಥದ್ದೊಂದು ಅನುಮಾನ ಪೊಲೀಸರನ್ನು ಕಾಡಿದೆ. ರಿಲಯನ್ಸ್ ಕಂಪನಿ ಮುಖ್ಯಸ್ಥ ಅಂಬಾನಿ ಮನೆ ಮುಂದಿನ ಆಘಾತಕಾರಿ ಸಬ್ನಿವೇಶವೊಂದು ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ.
ಮುಂಬೈನಲ್ಲಿರುವ ರಿಲಯನ್ಸ್ ಇಂಡಸ್ಟ್ರೀಸ್ ಲಿ. ಅಧ್ಯಕ್ಷ ಮುಖೇಶ್ ಅಂಬಾನಿ ಅವರ ಎಂಟಿಲಿಯಾ ನಿವಾಸದ ಬಳಿ ಗುರುವಾರ ಸಂಜೆ ಅನುಮಾನಾಸ್ಪದ ಕಾರೊಂದು ಪತ್ತೆಯಾಗಿದ್ದು ಅದರಲ್ಲಿ ಸ್ಫೋಟಕ ತುಂಬಿತ್ತು ಎನ್ನಲಾಗಿದೆ.
ಸ್ಕಾರ್ಪಿಯೋ ಕಾರು ಪತ್ತೆಯಾಗಿದ್ದು ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದಾಗ ಅದರಲ್ಲಿ ಜಿಲೆಟಿನ್ ಕಡ್ಡಿಗಳು ಸಹಿತ ಸ್ಫೋಟಕ ವಸ್ತುಗಳನ್ನು ಪತ್ರೆಯಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ಸ್ಪೋಟಕ ಎಲ್ಲಿಂದ ಬಂತು? ಇದನ್ನು ತಂದಿಟ್ಟವರು ಯಾರು ಎಂಬ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಈ ಪ್ರಕರಣದ ನಂತರ ಮುಂಬೈ ಮಹಾನಗರದಲ್ಲಿ ಪೊಲೀಸರು ಹೈ ಅಲರ್ಟ್ ಆಗಿದ್ದಾರೆ.