ಬೆಂಗಳೂರು: ರಿಪಬ್ಲಿಕ್ ಆಫ್ ಪೋಲೆಂಡ್ ದೇಶದ ರಾಯಭಾರಿ ಪ್ರೊಫೆಸರ್. ಆಡಮ್ ಬುರೂಖಾವಸ್ಕಿ ಅವರು ಸೋಮವಾರ ನಗರಾಭಿವೃದ್ಧಿ ಸಚಿವರಾದ ಬಿ.ಎ.ಬಸವರಾಜ ಅವರನ್ನು ವಿಧಾನಸೌದ ದಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದರು.
ಕೌನ್ಸಿಲ್ ಜನರಲ್ ಡಮಿನ್ ರಝಕ್, ಕಾರ್ಯದರ್ಶಿ ಕ್ಲೌಫಿಝ್ ಟೆಕ್ರೌಝಯಿ, ಬೆಂಗಳೂರಲ್ಲಿ ಇರುವ ಪೋಲ್ಯಾಂಡ್ ನ ಗೌರವ ಕೌನ್ಸಿಲ್ ರಘು ಸಿ.ರಾಜಪ್ಪ, ಸಚಿವರ ಅಪ್ತ ಕಾರ್ಯದರ್ಶ ಸಿ.ನಾಗರಾಜ್ ಇದೇ ವೇಳೆ ಉಪಸ್ಥಿತರಿದ್ದರು.
ರಾಜ್ಯದಲ್ಲಿ ಬಯೋ ಗ್ಯಾಸ್, ಸ್ಮಾರ್ಟ್ ಸಿಟಿ ಯೋಜನೆಗಳಲ್ಲಿ ತೊಡಗಿಸಿಕೊಳ್ಳುವ ಬಗ್ಗೆ ಚರ್ಚೆ ನಡೆಸಿದರು.
ಮಾನ್ಯ ನಗರಾಭಿವೃದ್ಧಿ ಸಚಿವರು ಮುಂದಿನ ದಿನಗಳಲ್ಲಿ ಇದರ ಬಗ್ಗೆ ಕೂಲಂಕಷವಾಗಿ ಚರ್ಚಿಸುವುದಾಗಿ ತಿಳಿಸಿದರು.