ಬೆಂಗಳೂರು: ಬ್ಯಂಕ್‌ನಲ್ಲಿ ಹಣ ನಗದೀಕರಿಸುವವರನ್ನೇ ಟಾರ್ಗೆಟ್ ಮಾಡುತ್ತಿದ್ದ ಖದೀಮರು ಬೆಂಗಳೂರಿನ ಜನರ ಪಾಲಿಗೆ ಸವಾಲೆಂಬಂತಿದ್ದರು. ಪೊಲೀಸರಿಗೂ ಇಂತಹಾ ಪ್ರಕರಣಗಳನ್ನು ಬೇಧಿಸುವುದು ಕಬ್ಬಿಣದ ಕಡಲೆಯಂತಿದೆ. ಇಲ್ಲೊಂದು ಪ್ರಕರಣದಲ್ಲಿ ಉದ್ಯಾನನಗರಿಯ ಜೆ.ಸಿ.ನಗರ ಉಪವಿಭಾಗದ ಚಾಣಾಕ್ಷ ಪೊಲೀಸ್ ತಂಡ ಇಂತಹಾ ಖದೀಮರನ್ನು ಖೆಡ್ಡಕ್ಕೆ ಬೀಳಿಸುವಲ್ಲಿ ಯಶಸ್ವಿಯಾಗಿದೆ.
ಇತ್ತೀಚೆಗೆ ಜೆ.ಸಿ.ನಗರ ಠಾಣಾ ವ್ಯಾಪ್ತಿಯ ಜಯಮಹಲ್‌ನಲ್ಲಿರುವ ಸ್ಟೇಟ್ ಬ್ಯಾಂಕ್‌ನಿಂದ ಗ್ರಾಹಕರೊಬ್ಬರು ನಗದೀಕರಿಸಿದ ಹಣವನ್ನು ಕೆಲವೇ ಹೊತ್ತಿನಲ್ಲಿ ಖದೀಮರು ಲಪಾಟಾಯಿಸಿದ್ದರು. ಈ ಪ್ರಕರಣವನ್ನು ಬೆನ್ನತ್ತಿದ್ದ ಜೆ.ಸಿ.ನಗರ ಠಾಣೆಯ ಪೊಲೀಸರು ಕಳ್ಳರ ಗ್ಯಾಂಗನ್ನು ಬೇಧಿಸುವಲ್ಲಿ ಯಶಸ್ಸಾಗಿದ್ದಾರೆ. ಸೆರೆಸಿಕ್ಕಿದ ಆರೋಪಿ ಮೂಲಕ ಜೆ.ಸಿ.ನಗರ ಸಹಾಯಕ ಪೊಲೀಸ್ ಆಯುಕ್ತೆ ರೀನಾ ಸುವರ್ಣ ನೇತೃತ್ವದ ಪೊಲೀಸರ ತಂಡ ಬೆಂಗಳೂರಿನ ಆರು ಠಾಣೆಗಳ 10ಕ್ಕೂ ಹೆಚ್ಚು ಪ್ರಕರಣಗಳನ್ನು ಬೇಧಿಸಿದ್ದಾರೆ.
ಬಲೆ ಬೀಸಿದ್ದು ಪೆಡ್ಲರ್‌ಗೆ; ಸಿಕ್ಕಿಬಿದ್ದಿದ್ದು ಖದೀಮ ಕಳ್ಳರ ಗ್ಯಾಂಗ್
ಜೆ.ಸಿ.ನಗರ ಸುತ್ತಮುತ್ತಲ ಪ್ರದೇಶಗಳನ್ನು ವರ್ಷಗಳ ಹಿಂದೆ ಗಾಂಜಾ ಸಹಿತ ಮಾದಕ ವಸ್ತುಗಳ ಮಾಫಿಯಾವು ತನ್ನ ಕಾರಸ್ಥಾನವನ್ನಾಗಿಸಿತ್ತು. ಈ ಬಗ್ಗೆ ಮಾಹಿತಿ ಪೇರಿಸಿದ ಎಸಿಪಿ ರೀನಾ ಸುವರ್ಣ ಅವರು ತನ್ನದೇ ಉಸ್ತುವಾರಿಯಲ್ಲಿ ಅಪರಾಧ ವಿಭಾಗದ ಪೊಲೀಸರನ್ನು ಅಖಾಡಕ್ಕಿಳಿಸಿದ್ದರು. ಅದರಲ್ಲೂ ಜೆ.ಸಿ.ನಗರ ಠಾಣೆಯ ಇನ್‌ಸ್ಪೆಕ್ಟರ್ ನಾಗರಾಜ್ ಹಾಗೂ ಸಬ್‌ಇನ್‌ಸ್ಪೆಕ್ಟರ್ ವಿನೋದ್ ಜಿರಗಾಳೆ ಸಾರಥ್ಯದ ಪೊಲೀಸರ ತಂಡ ಈ ಗಾಂಜಾ ಪೆಡ್ಲರ್‌ಗಳನ್ನು ಮಟ್ಟಹಾಕುವಲ್ಲಿ ಯಶಸ್ವಿಯಾಗಿದೆ. ಆ ಮೂಲಕ ಈ ಪ್ರದೇಶಗಳಲ್ಲಿನ ಕ್ರೈಮ್ ರೇಟ್ ಪ್ರಮಾಣ ಕಡಿಮೆಗೊಳಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಈ ನಡುವೆ ಗಾಂಜಾ ಮಾರಾಟಗಾರಾರ ಹಾಗೂ ಕಳ್ಳತನ ಮಾಫಿಯಾಗಳ ಹೆಜ್ಜೆ ಗುರುತು ಬೆನ್ನತ್ತಲು ಎಸಿಪಿ ರೀಣಾ ಸುವರ್ಣ ಹೆಣೆದ ಬಲೆಗೆ ಕತರ್ನಾಕ್ ಕಳ್ಳರು ಬಿದ್ದಿದ್ದು, ಈ ಖದೀಮರ ಗ್ಯಾಂಗ್ ಬಳಿ ಬೆಂಗಳೂರಿನ ಹಲವು ಪ್ರಕರಣಗಳ ರಹಸ್ಯವಿರುವ ಸಂಗತಿಯನ್ನು ಬಯಲಿಗೆಳೆಯಲಾಗಿದೆ. ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಎಸಿಪಿ ರೀಣಾ ಸುವರ್ಣ, ಬಂಧಿತ ಪ್ರಮುಖ ಆರೋಪಿ 30 ವರ್ಷ ಪ್ರಾಯದ ಮುಬಾರಕ್ ಅಲಿಯಾಸ್ ಸಿದ್ದಿಕ್ ಎಂಬಾತನಿಂದಲೇ ಸುಮಾರು 30 ಲಕ್ಷ ರೂಪಾಯಿಗಳ 1 ಕಾರು, 11 ದ್ವಿಚಕ್ರ ವಾಹನಗಳು, 2 ಲ್ಯಾಪ್ ಟಾಪ್, ಹಾಗೂ ವಿವಿಧ ಕಂಪೆನಿಗಳ ಬೆಳೆಬಾಳುವ 31 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ದಿನಾಂಕ 17.01.2021 ರಂದು ಜೆ.ಸಿ ನಗರ ಪೊಲೀಸರು ಒಬ್ಬ ಆರೋಪಿಯನ್ನು ಬಂಧಿಸಿ 10 ಪ್ರಕರಣಗಳನ್ನು ಪತ್ತೆಮಾಡಿ ಸುಮಾರು 30 ಲಕ್ಷ ಮೌಲ್ಯದ 11 ಬೈಕಗಳು, 1 ಕಾರು, 2 ಲ್ಯಾಪ್ ಟಾಪ್, 31 ಮೊಬೈಲ್ ಫೋನುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.@Jcnagarps @DCPNorthBCP @CPBlr @BlrCityPolice @AddlCPWest pic.twitter.com/Cf1GkJC3VG
— ACP J C NAGAR (@acpjcnagar) January 22, 2021
ಕಳ್ಳ ಪೊಲೀಸ್ ಬೊಂಬಾಟ್ ಆಟ
ನವೆಂಬರ್ 5ರಂದು ಜಯಮಹಲ್ ಎಸ್‌ಬಿಐನಿಂದ 60 ವರ್ಷ ಹರೆಯದ ಇಮ್ಯಾನ್ಯುಯಲ್ ಎಂಬವರು 35 ಸಾವಿರ ರೂಪಾಯಿಗಳನ್ನು ನಗದೀಕರಿಸಿ ಅದನ್ನು ಸ್ಕೂಟರ್‌ನ ಡಿಕ್ಕಿಯಲ್ಲಿಟ್ಟು ಮನೆಯತ್ತ ತೆರಳುತ್ತಿದ್ದಾಗ ದಾರಿ ಮಧ್ಯೆ ಕಳ್ಳರ ತಂಡ ಈ ಹಣವನ್ನು ದೋಚಿತ್ತು. ಈ ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿದ ಪೊಲೀಸರು ಕೆಲವು ಸಮಯದಿಂದ ಅನುಮಾನಾಸ್ಪದವಾಗಿ ತಿರುಗಾಡುತ್ತಿರುವವರ ಬಗ್ಗೆ ನಿಗಾವಹಿಸಿತ್ತು. ಈ ನಡುವೆ ಡ್ರಗ್ ಮಾಫಿಯಾ ವಿರುದ್ದ ಕಾರ್ಯಾಚರಣೆ ಸಂಬಂಧ ಪಿಎಸ್‌ಐ ವಿನೋದ್ ಜಿರಗಾಳೆ ಮತ್ತು ಪೊಲೀಸರು ಗಸ್ತಿನಲ್ಲಿದ್ದಾಗ ಕಳ್ಳರಿಬ್ಬರ ಬಗ್ಗೆ ಮಾಹಿತಿ ಸಿಕ್ಕಿದೆ. ಅವರನ್ನು ಬಂಧಿಸಲು ಮುಂದಾದಾಗ ಸ್ಕೂಟರ್‌ನಲ್ಲಿ ಪರಾರಿಯಾಗಲೆತ್ತಿಸಿದ್ದಾರೆ. ಈ ಪೈಕಿ ಮುಬಾರಕ್ ಎಂಬಾತನನ್ನು ಸಿನಿಮೀಯ ರೀತಿಯಲ್ಲಿ ಸೆರೆಹಿಡಿದಿದ್ದಾರೆ. ಮತ್ತೊಬ್ಬ ತಪ್ಪಿಸಿಕೊಂಡಿದ್ದಾನೆ. ಬಂಧಿತ ಕಳ್ಳನನ್ನು ವಿಚಾತಣೆಗೆ ಗುರಿಪಡಿಸಿದಾಗ ತಮ್ಮ ತಂಡದ ಚಾಲಾಕಿ ಕೃತ್ಯಗಳನ್ನು ಹೇಳಿಕೊಂಡಿದ್ದಾನೆ. ಬ್ಯಾಂಕ್‌ನಿಂದ ಹಣ ಪಡೆದು ತೆರಳುತ್ತಿರುವವರನ್ನು ತಾವು ಟಾರ್ಗೆಟ್ ಮಾಡುತ್ತಿದ್ದೆವು ಎಂದು ಆತ ತಮ್ಮ ಅಪರಾಧದ ನಿಗೂಢತೆಯನ್ನು ಬಹಿರಂಗಪಡಿಸಿದ್ದಾನೆ. ಈತನ ಗ್ಯಾಂಗ್ ಜೆ.ಸಿ.ನಗರ ಠಾಣಾ ವ್ಯಾಪ್ತಿಯಲ್ಲಿನ 4 ಪ್ರಕರಣ, ವಿದ್ಯಾರಣ್ಯಪುರ, ಅತ್ತಿಬೆಲೆ, ಜೆ.ಜೆ.ನಗರ, ಇಂದಿರಾನಗರ ಸಹಿತ ವಿವಿಧ ಠಾಣೆಗಳ ಹಲವು ಕಳ್ಳತನ, ಸುಲಿಗೆ ಪ್ರಕರಣಗಳಲ್ಲಿ ಭಾಗಿಯಾಗಿರುವುದಾಗಿ ಬಾಯ್ಬಿಟ್ಟಿದ್ದಾನೆ. ಈ ಪೈಕಿ ವಾಹನ ಕಳ್ಳತನ ಪ್ರಕರಣಗಳೇ ಬಹಳಷ್ಟಿವೆಯಂತೆ.
ಈತನ ಜೊತೆಗಿದ್ದಾತ ಪೊಲೀಸ್ ಬಲೆಗೆ ಬೀಳದೆ ತಪ್ಪಿಸಿಕೊಂಡಿದ್ದಾನೆ. ಆ ಆರೋಪಿ ಇನ್ಬಷ್ಟು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎಂಬ ಸಂಗತಿ ಮುಬಾರಕ್ ಮೂಲಕ ಬೆಳಕಿಗೆ ಬಂದಿದೆ. ಇದೀಗ ಆತನ ಹೆಜ್ಜೆ ಗುರುತು ಬೆನ್ಬತ್ತಿರುವ ಪಿಎಸ್‌ಐ ವಿನೋದ್ ಜಿರಗಾಳೆ ತಂಡ ಆತನ ಬಂಧನಕ್ಕಾಗಿ ಬಲೆ ಬೀಸಿದೆ. ಈ ಯಶಸ್ವೀ ಕಾರ್ಯಾಚರಣೆ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಎಸಿಪಿ ರೀಣಾ ಸುವರ್ಣ, ಜೆ.ಸಿ.ನಗರ ಉಪವಿಭಾಗದಲ್ಲಿ ಪ್ರಸ್ತುತ ಬೀಟ್ ವ್ಯವಸ್ಥೆ ಸುಧಾರಿಸಲಾಗಿದ್ದು ಅಪರಾಧ ಪ್ರಕರಣಗಳು ಗಣನೀಯವಾಗಿ ಕಡಿನೆಯಾಗಿದೆ ಎಂದಿದ್ದಾರೆ.
ದಿನಾಂಕ.19.12.2020 ರಂದು ಶ್ರೀ ಮಹೇಶ ವೈದ್ಯ ಸರ್ಕಾರಿ ಅಭಿಯೋಜಕರು ಸಿ.ಐ.ಡಿ ಘಟಕ ರವರು ಜೆ.ಸಿ ನಗರ ಉಪ ವಿಭಾಗದ ಅಧಿಕಾರಿ ಸಿಬ್ಬಂದಿಗಳಿಗೆ CRIME AGAINEST WOMEN ಬಗ್ಗೆ ಕಾರ್ಯಗಾರ ನಡೆಸಿ ತನಿಖೆಯ ಬಗ್ಗೆ ತನಿಖಾ ಸಲಹೆ ಸೂಚನೆಗಳನ್ನು ನೀಡಿರುತ್ತಾರೆ.@DCPNorthBCP @CPBlr @BlrCityPolice pic.twitter.com/dlTC7CpNDk
— ACP J C NAGAR (@acpjcnagar) December 21, 2020
ಇದನ್ನೂ ಓದಿ.. ಡ್ರಗ್ಸ್ ಮಾಫಿಯಾ ವಿರುದ್ದ ಸಮರ; ಜೆ.ಸಿ.ನಗರ ಪೊಲೀಸರ ಸಾಧನೆಗೆ ಪ್ರಶಂಸೆಯ ಗರಿ