ಮಂಗಳೂರು: ಗುರುಪುರದ ವರದರಾಜ ವೆಂಕಟರಮಣ ದೇವಸ್ಥಾನದಲ್ಲಿ ನೂತನ ಯಜ್ಞ ಶಾಲೆ ನಿರ್ಮಾಣಕ್ಕಾಗಿ ಶಿಲಾನ್ಯಾಸ ನೆರವೇರಿಸಲಾಯಿತು. ಕಾಶೀ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರು ಪೂಜಿಸಿ, ಅನುಗ್ರಹಿಸಲ್ಪಟ್ಟ ಶಿಲೆಗಳ ಶಿಲಾನ್ಯಾಸ ಸಮಾರಂಭ ನೆರವೇರಿತು.
ಬುಧವಾರ ಬೆಳಿಗ್ಗೆ ಗಣಪತಿ ಭಟ್ ರವರ ನೇತೃತ್ವದಲ್ಲಿ ಶ್ರೀ ಕ್ಷೆತ್ರದ ತಂತ್ರಿಗಳು, ಅರ್ಚಕರು , ಆಡಳಿತ ಸಮಿತಿ, ಕ್ಷೇತ್ರಾಭಿವೃದ್ಧಿ ಸಮಿತಿ ಮತ್ತು ಊರಿನ ಹತ್ತು ಸಮಸ್ತರ ಉಪಸ್ಥಿತಿಯಲ್ಲಿ ನೆರವೇರಿದ ಈ ಕೈಂಕರ್ಯ ಇಡೀ ಸಮುದಾಯದ ಗಮನಸೆಳೆಯಿತು.
ನೂತನ ಯಜ್ಞ ಶಾಲೆಯ ಸೇವಾ ಸಮರ್ಪಣೆ ಶ್ರೀಮತಿ ಲಕ್ಷ್ಮಿ ದೇವಿ ಮತ್ತು ಶ್ರೀ ಗುರುಪುರ ಗುಂಡ ಯಾನೆ ದಾಮೋದರ ಶೆಣೈ ಯವರ ಸ್ಮರಣಾರ್ಥ ಮಂಗಳೂರು ಹಾಗೂ ಬೆಂಗಳೂರು ಗುರುಪುರ ಶೆಣೈ ಸಹೋದರರು ಸಮರ್ಪಿಸಿದರು .
ಈ ಸಂದರ್ಭದಲ್ಲಿ ಲೆಕ್ಕ ಪರಿಶೋಧಕ ಜಿ . ಹರಿರಾಮ್ ಶೆಣೈ , ಲೆಕ್ಕ ಪರಿಶೋಧಕ ಜಿ . ರಾಜಾರಾಮ್ ಶೆಣೈ , ದೇವಳದ ಆಡಳಿತ ಮಂಡಳಿಯ ಜಿ ಪಾಂಡುರಂಗ ಕಾಮತ್ , ಜಿ ರಾಜೇಶ್ ಪ್ರಭು , ಜಿ ವಿಷ್ಣು ಕಾಮತ್ , ಜಿ ಪ್ರಾಣೇಶ್ ಪ್ರಭು ಮ್ಯಾನೇಜರ್ ಎಂ ಪ್ರಸಾದ್ ಪೈ , ಜಿ . ವಿನಾಯಕ್ ಪ್ರಭು ಉಪಸ್ಥಿತರಿದ್ದರು.