ಶಿವಮೊಗ್ಗ: ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ರೈತರನ್ನು ತಪ್ಪು ದಾರಿಗೆ ಎಳೆಯುತ್ತಿದೆ ಎಂದು ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಅವರು,ರೈತ ಸಂಘದ ಕೆಲ ಕಾರ್ಯಕರ್ತರು ಹಾಗೂ ಕೆಲ ಸಂಘಟನೆಗಳ ಮೂಲಕ ಕಾಂಗ್ರೆಸ್ ನಾಯಕರು ತಪ್ಪು ಮಾಹಿತಿ ರವಾನಿಸುತ್ತಿದ್ದರೆ ಎಂದು ದೂರಿದರು.
ಕೃಷಿ ಮಸೂದೆ ಹಾಗೂ ಭೂಸುಧಾರಣಾಕಾಯ್ದೆ ರೈತರ ಪರವಾಗಿದೆ. ಈ ಮಸೂದೆಯಿಂದ ಎಸ್ ಸಿ, ಎಸ್ ಟಿಗೆ ಸೆರಿದ ರೈತರಿಗೆ ಅನ್ಯಾಯವಾಗದು ಎಂದವರು ಸ್ಪಷ್ಟಪಡಿಸಿದರು.