ಕರಾವಳಿಯ ಖಾದ್ಯದ ವಿಶೇಷತೆಗಳಲ್ಲಿ ಪತ್ರೊಡೆ ಕೂಡಾ ಒಂದು. ಕರಾವಳಿ ಮಂದಿ ಮಳೆಗಾಲದಲ್ಲಿ ಹೆಚ್ಚಾಗಿ ತಯಾರಿಸುವ ಪತ್ರೊಡೆ ಪರಿಸರಕ್ಕೆ ಪೂರಕ ಆಹಾರ ಪದ್ಧತಿಯ ಒಂದು ಖಾದ್ಯ.
ಹಲಸು, ಅಣಬೆ, ಕೆಸು ಶೀತ ಪರಿಸರದಲ್ಲಿ ಸಿಗುವ ವಸ್ತುಗಳನ್ನೇ ಬಳಸಿ ವಿವಿಧ ಖಾದ್ಯಗಳನ್ನು ತಯಾರಿಸಾಯುವ ಕರಾವಳಿಯ ಪಾಕ ಪ್ರವೀಣರು ಪತ್ರೊಡೆಗೂ ಆದ್ಯತೆ ಕೊಡುತ್ತಾರೆ. ಊರ ಕೆಸು ಮತ್ತು ಮರ ಕೆಸುವಿನ ಎಲೆಗಳನ್ನು ಬಳಸಿ ತಯಾರಿಸುವ ಪತ್ರೊಡೆ ಒಗ್ಗರಣೆಯ ರುಚಿಯನ್ನು ನೀವೂ ಒಮ್ಮೆ ಸವಿಯಿರಿ.