ಮುಂಬಯಿ: ರಾಜ್ಯ ಸರ್ಕಾರಿ ಸ್ವಾಮ್ಯದ ಸಾರಿಗೆ ಸಂಸ್ಥೆ KSRTCಗೆ ಮತ್ತೆ 6 ಪ್ರಶಸ್ತಿಗಳ ಗರಿಮೆ ಸಿಕ್ಕಿದೆ. ಈ ಮೂಲಕ ನಿಗಮವು ಕಳೆದ 8 ತಿಂಗಳುಗಳಲ್ಲಿ ಬರೋಬ್ಬರಿ 51 ಪುರಸ್ಕಾರ ಗಳಿಸಿದ ಖ್ಯಾತಿಗೆ ಪಾತ್ರವಾಗಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ, World Manufacturing Congress ಹಾಗೂ World Marketing Congressನ 5 ಪ್ರಶಸ್ತಿಗಳು ಹಾಗೂ ನಿಗಮದ ಮಂಡಳಿ ಕಾರ್ಯದರ್ಶಿಯೂ ಆಗಿರುವ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿಯವರಿಗೆ ಜಾಗತಿಕ ಮಹಿಳಾ ನಾಯಕಿ ಪ್ರಶಸ್ತಿ ಲಭಿಸಿರುತ್ತದೆ. .
ನೂತನ ಪ್ರಶಸ್ತಿಗಳು ಹೀಗಿವೆ:
- ವಿದ್ಯುತ್ ವಾಹನಗಳ ಕೈಗಾರಿಕಾ ನಾಯಕತ್ವ ಪ್ರಶಸ್ತಿ. ಇ.ವಿ.ಪವರ್ ಪ್ಲಸ್.
- ಜಾಗತಿಕ ಬ್ರಾಂಡ್ ಉತ್ಕೃಷ್ಟತೆ ಪ್ರಶಸ್ತಿ- ಅತ್ಯುತ್ತಮ ಬ್ರಾಂಡಿಂಗ್ ಮತ್ತು ಮಾರ್ಕೆಟಿಂಗ್ ಉಪಕ್ರಮ.
- ವರ್ಷದ ವ್ಯಾವಹಾರಿಕ ನಾಯಕತ್ವ ಪ್ರಶಸ್ತಿ- ಅತ್ಯುತ್ತಮ ವಿನೂತನ ಉಪಕ್ರಮ ಸಂಸ್ಥೆ.
- ಜಾಗತಿಕ ಮಾನವ ಸಂಪನ್ಮೂಲ ಉತ್ಕೃಷ್ಟತೆ ಪ್ರಶಸ್ತಿ- ಕಾರ್ಮಿಕರೊಂದಿಗೆ ಉತ್ತಮ ಭಾಂದವ್ಯ ಹೊಂದಿರುವ ಸಂಸ್ಥೆ.
- ಜಾಗತಿಕ ಅತ್ಯುತ್ತಮ ಉದ್ಯೋಗದಾತ ಬ್ರಾಂಡ್ ಪ್ರಶಸ್ತಿ.-ಜಾಗತಿಕ ಮಾನವ
ಸಂಪನ್ಮೂಲ ಉಪಕ್ರಮ.
ಇದಲ್ಲದೆ, ನಿಗಮದ ಮಂಡಳಿ ಕಾರ್ಯದರ್ಶಿ ಮತ್ತು ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿಯವರಾದ ಡಾ. ಲತಾ ಟಿ.ಎಸ್ ಅವರಿಗೆ ವಿಶ್ವ ಮಾರ್ಕೆಟಿಂಗ್ ಉತ್ಕೃಷ್ಟತೆಗಾಗಿ ಜಾಗತಿಕ ಮಹಿಳಾ ನಾಯಕಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ.
ಮುಂಬಯಿಯಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ನಿನಾ ಇ ಉಡರ್ಡ ಅಸೋಸಿಯೇಟ್ಸ್, ಯುನೈಟೆಡ್ ಸ್ಟೇಟ್ಸ್ ಇದರ ಅಧ್ಯಕ್ಷರಾದ ಮಿಸ್. ನಿನಾ ಇ ಉಡರ್ಡ್ ಹಾಗೂ ಓಝೋನ್ ಗ್ರೂಪ್, ದುಬೈ ಇದರ ಮಾಲೀಕರಾದ ಡಾ. ಓವಿಲಿಯಾ ಫೆರ್ನಾಂಡಿಸ್ ಅವರು KSRTC ನಿಗಮಕ್ಕೆ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.
ಡಾ.ಲತಾ ಟಿ.ಎಸ್.ಕೆಎಸ್ಸಾರ್ಟಿಸಿ ಮಂಡಳಿ ಕಾರ್ಯದರ್ಶಿ ಹಾಗೂ ಸಾರ್ವಜನಿಕ ಸಂಪರ್ಕಾಧಿಕಾರಿ, ಹೆಚ್ ಎಸ್. ಸತೀಶ್, ವಿಭಾಗೀಯ ತಾಂತ್ರಿಕ ಅಭಿಯಂತರರು, ಸೌಮ್ಯ.ಸಿ. ವಿಭಾಗೀಯ ತಾಂತ್ರಿಕ ಶಿಲ್ಪಿ ಹಾಗೂ ಶಿಬಾ.ಎಸ್. ಸಹಾಯಕ ಆಡಳಿತಾಧಿಕಾರಿ ಅವರು ನಿಗಮದ ಪರವಾಗಿ ಪ್ರಶಸ್ತಿಗಳನ್ನು ಸ್ವೀಕರಿಸಿದರು.