ಆಡಳಿತಾರೂಢ ಬಿಜೆಪಿಗೆ ಪ್ರತಿಷ್ಠೆಯ ಅಖಾಡವಾಗಿದ್ದ ಹಾವೇರಿ ಜಿಲ್ಲೆ ಹಾನಗಲ್‌ನಲ್ಲಿ ಬಿಜೆಪಿಗೆ ಮುಖಭಂಗವಾಗಿದೆ. ಅನುಕಂಪದ ಅಲೆ ಇದ್ದರೂ ಬಿಜೆಪಿಗಾಗಿರುವ ಸೋಲು ಕಮಲ ಪಾಳಯದಲ್ಲಿ ಬದಲಾವಣೆಯ ಪರ್ವಕ್ಕೆ ಕಾರಣವಾಗಲಿದೆಯೇ ಎಂಬ ಮಾತುಗಳು ಕೇಳಿಬರುತ್ತಿವೆ.
ಹಾವೇರಿ: ಆಡಳಿತಾರೂಢ ಬಿಜೆಪಿಗೆ ಪ್ರತಿಷ್ಠೆಯ ಅಖಾಡವಾಗಿದ್ದ ಹಾವೇರಿ ಜಿಲ್ಲೆ ಹಾನಗಲ್‌ನಲ್ಲಿ ಬಿಜೆಪಿಗೆ ಮುಖಭಂಗವಾಗಿದೆ. ಬಿಜೆಪಿ ಈ ಕ್ಷೇತ್ರವನ್ನು ಕಳೆದುಕೊಂಡಿದ್ದು, ಈ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ 7,598 ಮತಗಳ ಅಂತದಿಂದ ಜಯಶಾಲಿಯಾಗಿದ್ದಾರೆ.
ಬಿಜೆಪಿ ಶಾಸಕರಾಗಿದ್ದ ಸಿ.ಎಂ.ಉದಾಸಿ ಅವರ ನಿಧನದಿಂದಾಗಿ ಹಾನಗಲ್ ಕ್ಷೇತ್ರ ತೆರವಾಗಿತ್ತು. ಈ ಕ್ಷೇತ್ರದಲ್ಲಿ ಬಿಜೆಪಿಗೆ ಅನುಕಂಪದ ಅಲೆ ಇತ್ತು. ಅಷ್ಟೇ ಅಲ್ಲ, ಸಿಎಂ ಬಸವರಾಜ್ ಬೊಮ್ಮಾಯಿ ಅವರ ತವರು ಜಿಲ್ಲೆಯ ಕ್ಷೇತ್ರವೂ ಹೌದು. ಅನೇಕ ದಿಗ್ಗಜ ನಾಯಕರು ಹಾಗೂ ಸಚಿವರನೇಕರು ಪ್ರಚಾರ ಕೈಗೊಂಡರೂ ಕ್ಷೇತ್ರವನ್ನು ಉಳೊಸಿಕೊಳ್ಳಲು ಬಿಜೆಪಿಯಿಂದ ಸಾಧ್ಯವಾಗಿಲ್ಲ.
ಹಾನಗಲ್: ಮತಗಳ ಹಂಚಿಕೆ ಹೀಗಿದೆ:
- ಶ್ರೀನಿವಾಸ ಮಾನೆ (ಕಾಂಗ್ರೆಸ್) 87,113 ಮತಗಳು
- ಶಿವರಾಜ್ ಸಜ್ಜನವರ್ (ಬಿಜೆಪಿ) 79,515 ಮತಗಳು,
- ನಿಯಾಜ್ ಶೇಖ್ (ಜೆಡಿಎಸ್) 921 ಮತಗಳು