ಬೆಂಗಳೂರು: ಹನಿಟ್ರ್ಯಾಪ್ ವಿಚಾರ ರಾಜ್ಯ ರಾಜಕೀಯದಲ್ಲಿ ಕೋಲಾಹಲ ಎಬ್ಬಿಸಿದೆ. ಈ ವಿಚಾರದಲ್ಲಿ ಆಡಳಿತಾರೂಢ ಕಾಂಗ್ರೆಸ್ ಹಾಗೂ ಪ್ರತಿಪಕ್ಷ ಬಿಜೆಪಿ ನಡುವೆ ವಾಗ್ಯುದ್ಧವೇ ನಡೆದಿದೆ.
ಈ ನಡುವೆ ಹನಿಟ್ರ್ಯಾಪ್ ಕುರಿತಂತೆ ಆಡಳಿತಾರೂಢ ಕಾಂಗ್ರೆಸ್ ಪಕ್ಷವನ್ನು ತರಾಟೆಗೆ ತೇಗ್ವೆದುಕೊಂಡಿರುವ ಬಿಜೆಪಿ ನಾಯಕರು ವಿಧಾನ ಸಭೆ ಹಾಗೂ ವಿಧಾನ ಪರಿಷತ್ತುಗಳಲ್ಲಿ ಗದ್ದಲ ಎಬ್ಬಿಸಿವೆ. ಹನಿಟ್ರ್ಯಾಪ್ ಪ್ರಕರಣ ಬಗ್ಗೆ ಸಿಬಿಐ ತನಿಖೆಗೆ ವಹಿಸಬೇಕು ಹಾಗೂ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ನಾಯಕರು ಒತ್ತಾಯಿಸಿದ್ದಾರೆ.
ಬಿಜೆಪಿ ಆಡಳಿತಾವಧಿಯಲ್ಲಿ 17 ಶಾಸಕರು ನ್ಯಾಯಾಲಯದಿಂದ ಸ್ಟೇ ತಂದಿದ್ದರು. ಇದರ ಬಗ್ಗೆ ಅಂದು ಚರ್ಚೆಗೆ ಅವಕಾಶವನ್ನೇ ನೀಡಲಿಲ್ಲ. ಹಾಗಿದ್ದರೆ ಇಂದು ಈ ವಿಷಯದಲ್ಲಿ ಚರ್ಚೆಯ ಅವಶ್ಯಕತೆ ಇದೆಯೇ?
ಬಿಜೆಪಿಯವರಿಗೆ ಅಂದು ಇಲ್ಲದ ನೈತಿಕತೆಯ ಪ್ರಶ್ನೆ ಇಂದು ಹೇಗೆ ಹುಟ್ಟಿಕೊಂಡಿತು?
– @PriyankKharge pic.twitter.com/H4QfxdojoM— Karnataka Congress (@INCKarnataka) March 21, 2025
ಬಿಜೆಪಿಯವರ ನಡೆಗೆ ಸಚಿವ ಪ್ರಿಯಾಂಕ್ ಖರ್ಗೆ ಆಕ್ರೋಶ ಹೊರಹಾಕಿದ್ದಾರೆ. ಹನಿಟ್ರ್ಯಾಪ್ ಹಾಗೂ ಲೈಂಗಿಕ ಕಿರುಕುಳ ಅರೋಪಗಳ ಬಗ್ಗೆ ಬಿಜೆಪಿ ನಾಯಕರ ವಿರುದ್ಧ ಅವರು ಶುಕ್ರವಾರ ಸದನದಲ್ಲೇ ವಾಗ್ಬಾಣ ಪ್ರಯೋಗಿಸಿದ್ದಾರೆ.
ಬಿಜೆಪಿ ಆಡಳಿತಾವಧಿಯಲ್ಲಿ 17 ಶಾಸಕರು ನ್ಯಾಯಾಲಯದಿಂದ ಸ್ಟೇ ತಂದಿದ್ದರು. ಇದರ ಬಗ್ಗೆ ಅಂದು ಚರ್ಚೆಗೆ ಅವಕಾಶವನ್ನೇ ನೀಡಲಿಲ್ಲ. ಹಾಗಿದ್ದರೆ ಇಂದು ಈ ವಿಷಯದಲ್ಲಿ ಚರ್ಚೆಯ ಅವಶ್ಯಕತೆ ಇದೆಯೇ? ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ. ಬಿಜೆಪಿಯವರಿಗೆ ಅಂದು ಇಲ್ಲದ ನೈತಿಕತೆಯ ಪ್ರಶ್ನೆ ಇಂದು ಹೇಗೆ ಹುಟ್ಟಿಕೊಂಡಿತು? ಎಂದವರು ತರಾಟೆಗೆ ತೆಗೆದುಕೊಂಡಿದ್ದಾರೆ.