ಬಾಲಿವುಡ್ ಸ್ಟಾರ್ ಶಾರುಖ್ ಖಾನ್ ಇದೀಗ ‘ಪಠಾಣ್’ಸಿನಿಮಾ ಮೂಲಕ ಎಲ್ಲರ ಕುತೂಹಲದ ಕೇಂದ್ರಬಿಂದು. ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಾಹಂ ಕೂಡ ‘ಪಠಾಣ್’ ಸಿನಿಮಾದಲ್ಲಿ ನಟಿಸುತ್ತಿರುವ ಶಾರುಖ್ ಖಾನ್ ಅವರು ತನ್ನ ಪಾತ್ರಕ್ಕಾಗಿ ಭರ್ಜರಿ ಸಿದ್ದತೆ ನಡೆಸಿದ್ದಾರೆ.
ಈ ಬಾರಿ ವಿಭಿನ್ನ ತಯಾರಿಯಲ್ಲಿ ಶೂಟಿಂಗ್ ಅಖಾಡಕ್ಕೆ ಧುಮುಕಿರುವ ಶಾರುಖ್ ಖಾನ್ ‘ಪಠಾಣ್’ ಸಿನಿಮಾಕ್ಕಾಗಿ ಹಲವು ಕಸರತ್ತುಗಳನ್ನು ನಡೆಸಿದ್ದಾರೆ. ಹಾಗಾಗಿ ಈ ಸಿನಿಮಾದಲ್ಲಿ ಶಾರುಖ್ ಖಾನ್ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಈ ನಡುವೆ ‘ಪಠಾಣ್’ಗಾಗಿ ಸಿದ್ದರಾಗಿರುವ ಫೊಟೋವನ್ನು ಶಾರುಖ್ ಖಾನ್ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಅವರ 8 ಪ್ಯಾಕ್ಸ್ ಆ್ಯಬ್ಸ್ ಗಮನ ಸೆಳೆದಿದೆ. ‘ಪಠಾಣ್’ ಚಿತ್ರಕ್ಕಾಗಿ ಶಾರುಖ್ ಖಾನ್ ಅವರು ಬಾಡಿ ಟ್ರಾನ್ಸ್ಫಾರ್ಮೇಷನ್ ಮಾಡಿಕೊಂಡಿದ್ದಾರೆ. 8 ಪ್ಯಾಕ್ಸ್ ಆ್ಯಬ್ಸ್ ಮಾಡಿಕೊಂಡು ಪೋಸ್ ನೀಡಿರುವ ಈ ಫೋಟೋ ಸಕತ್ ಲೈಕ್ಸ್ ಗಿಟ್ಟಿಸಿಕೊಂಡಿದೆ.
View this post on Instagram