ಬೆಂಗಳೂರು: ರಾಜ್ಯಾದ್ಯಂತ ನಾಳೆಯಿಂದ 2021-22ನೇ ಸಾಲಿನ SSLC ಪರೀಕ್ಷೆ ನಡೆಯಲಿದೆ. ಏಪ್ರಿಲ್ 11ರವರೆಗೆ ಪರೀಕ್ಷೆ ನಡೆಯಲಿದ್ದು ಸಕಲ ಸಿದ್ದತೆಗಳು ನಡೆದಿವೆ. ಪರೀಕ್ಷಾ ಕೇಂದ್ರಗಳ ಸುತ್ತ ಮುಂಜಾಗ್ರತಾ ಕ್ರಮವಾಗಿ ನಿಷೆಧಾಜ್ಞೆ ಜಾರಿಗೊಳಿಸಲಾಗಿದೆ.
ಇದೇ ವೇಳೆ, ಸಮವಸ್ತ್ರ ವಿಚಾರದಲ್ಲಿ ಹೈಕೋರ್ಟ್ ತೀರ್ಪು ಪಾಲಿಸಲೇಬೇಕಿದ್ದು ಹಿಜಾಬ್ ಧಾರಿಸಿ ಪರೀಕ್ಷೆಗೆ ಹಾಜಾರಾಗಲು ಅವಕಾಶ ಇಲ್ಲ ಎಂದು ಶಿಕ್ಷಣ ಸಚಿವ ನಾಗೇಶ್ ತಿಳಿಸಿದ್ದಾರೆ.
ಪರೀಕ್ಷೆ ಹೇಗಿರುತ್ತೆ..? ನಿಯಮಗಳೇನು..? ಇಲ್ಲಿದೆ ಮಾಹಿತಿ..
- 80 % ಮುಗಿದಿರುವ ಸಿಲೆಬಸ್’ನಲ್ಲಿಯೇ ಪ್ರಶ್ನೆ ಪತ್ರಿಕೆ ಸಿದ್ದಗೊಂಡಿದೆ.
- ಪ್ರಶ್ನೆ ಪತ್ರಿಕೆಯಲ್ಲಿ ಹೆಚ್ಚಿನ ಆಯ್ಕೆಗಳಿವೆ.
- ಪಠ್ಯ ಮುಗಿಯದೇ ಇರುವ ಶಾಲೆಯ ವಿದ್ಯಾರ್ಥಿಗಳಿಗೆ ಬೇರೆ ಪ್ರಶ್ನೆ ಆಯ್ಕೆಮಾಡುವ ಅವಕಾಶ ಇದೆ.
- ರಾಜ್ಯದಲ್ಲಿ ಒಟ್ಟು 8,73,846 ವಿದ್ಯಾರ್ಥಿಗಳು ಈ ವರ್ಷ ಪರೀಕ್ಷೆಗೆ ನೊಂದಣಿ ಮಾಡಿಸಿಕೊಂಡಿದ್ದಾರೆ.
- 4,52,732 ಬಾಲಕರು ಹಾಗೂ 4,21,110 ಬಾಲಕಿಯರು ಪರೀಕ್ಷೆ ಬರೆಯಲಿದ್ದಾರೆ.
- ನಾಲ್ವರು ತೃತಿಯ ಲಿಂಗಿಗಳು ಪರೀಕ್ಷೆ ಬರೆಯಲಿದ್ದಾರೆ.
- 5,307 ವಿಭಿನ್ನ ಸಾಮಾರ್ಥ್ಯವುಳ್ಳ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
- 15,387 ಶಾಲೆಗಳು ಪರೀಕ್ಷೆಗೆ ನೋಂದಾಯಿತಗೊಂಡಿವೆ. ಈ ಪೈಕಿ 5,717 ಸರ್ಕಾರಿ, 3,412 ಅನುದಾನಿತ, 6,258 ಅನುದಾನ ರಹಿತ ಶಾಲೆಗಳು.
- ಒಟ್ಟು 3,444 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ.
- ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಸಮವಸ್ತ್ರ ಕಡ್ಡಾಯವಾಗಿದೆ.
- ಹಿಜಾಬ್ ಧರಿಸಿ ಬಂದರೆ ಎಕ್ಸಾಂಗೆ ನೋ ಎಂಟ್ರಿ.
- 1995ರ ನಿಯಮ 11ರಲ್ಲಿ ಪ್ರದತ್ತವಾಗಿರುವ ಅಧಿಕಾರದನ್ವಯ ಸಮವಸ್ತ್ರ ನಿಯಮ ಜಾರಿ.
- ಸಿಸಿ ಟಿವಿ ಕಣ್ಗಾವಲಿನಲ್ಲಿ SSLC ಪರೀಕ್ಷೆ ನಡೆಯಲಿದೆ.
- 3,275 ಸಾಮಾನ್ಯ ಕೇಂದ್ರಗಳು, 169 ಖಾಸಗಿ ಕೇಂದ್ರಗಳನ್ನು ಗುರುತು ಮಾಡಲಾಗಿದೆ.
- ಸುಮಾರು 45,289 ಪರೀಕ್ಷಾ ಕೊಠಡಿಗಳಲ್ಲಿ ಪರೀಕ್ಷಾ ಸಿದ್ಧತೆ ನಡೆದಿದೆ,
- 3,444 ಮುಖ್ಯ ಅಧೀಕ್ಷಕರ ನೇತೃತ್ವದಲ್ಲಿ 49,817 ಮಂದಿ ಕೊಠಡಿ ಮೇಲ್ವಿಚಾರಕರು ನಿಗಾ ವಹಿಸಲಿದ್ದಾರೆ.
- ಬೆಳಗ್ಗೆ 10.30 ರಿಂದ ಮಧ್ಯಾಹ್ನ 1.45ರವರೆಗೆ ಪರೀಕ್ಷೆ.
- ಪ್ರತಿ ವಿಷಯಕ್ಕೂ ಪ್ರಶ್ನೆ ಪತ್ರಿಕೆ ಓದಲು 15 ನಿಮಿಷ ಕಾಲಾವಕಾಶ.
ಎಸ್ಎಸ್ಎಲ್ಸಿ ಪರೀಕ್ಷಾ ವೇಳಾಪಟ್ಟಿ ಹೀಗಿದೆ:
- ಮಾರ್ಚ್ 28ರಂದು ಪ್ರಥಮ ಭಾಷೆ.
- ಮಾರ್ಚ್ 30ರಂದು ದ್ವಿತೀಯ ಭಾಷೆ, ಅರ್ಥ ಶಾಸ್ತ್ರ ಮತ್ತು ಕೋರ್ ಸಬ್ಜೆಕ್ಟ್.
- ಏಪ್ರಿಲ್ 4ರಂದು ಗಣಿತ ಹಾಗೂ ಸಮಾಜಶಾಸ್ತ್ರ.
- ಏಪ್ರಿಲ್ 6ರಂದು ಸಮಾಜ ವಿಜ್ಞಾನ.
- ಏಪ್ರಿಲ್ 8ರಂದು ತೃತೀಯ ಭಾಷೆ ಹಿಂದಿ.
- ಏಪ್ರಿಲ್ 11ರಂದು ವಿಜ್ಞಾನ, ರಾಜ್ಯಶಾಸ್ತ್ರ, ಕರ್ನಾಟಕ/ ಹಿಂದೂಸ್ತಾನಿ ಸಂಗೀತ.