ಬೆಂಗಳೂರು: ಕರ್ನಾಟಕ ಸರ್ಕಾರದ ಗ್ಯಾರೆಂಟಿ ಯೋಜನೆಯಿಂದ ಉಂಟಾಗಿರುವ ಪರಿಸ್ಥಿತಿ ಬಗ್ಗೆ ಕಾಟು ಟೀಕೆ ಮಾಡಿರುವ ಜೆಡಿಎಸ್, ಹಿಮಾಚಲ ಪ್ರದೇಶ, ತೆಲಂಗಾಣ ಬಳಿಕ ಮುಂದಿನ ಸರದಿ ಕರ್ನಾಟಕ ಎಂದು ವಿಶ್ಲೇಷಿಸಿದೆ.
ತೆಲಂಗಾಣದಲ್ಲೂ ಉಚಿತ ಗ್ಯಾರಂಟಿಗಳನ್ನು ಘೋಷಿಸಿ ಅಧಿಕಾರ ಹಿಡಿದಿರುವ ಕಾಂಗ್ರೆಸ್ ಸರ್ಕಾರ ಈಗ ಸಂಪೂರ್ಣ ದಿವಾಳಿಯಾಗಿ ಬಿಟ್ಟಿದೆ ಏನು ಜೆಡಿಎಸ್ ಪಕ್ಷ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಾಕಿದೆ.
ಕರ್ನಾಟಕದ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಕೋಟ್ಯಂತರ ರೂಪಾಯಿ ಲೂಟಿಹೊಡೆದು, ಆ ದುಡ್ಡಲ್ಲಿ ಸರ್ಕಾರ ರಚಿಸಿದ್ದ ತೆಲಂಗಾಣ ಕಾಂಗ್ರೆಸ್ ಇಂದು, ಜನರಿಗೆ ನೀಡಿದ್ದ ಭರವಸೆ ಈಡೇರಿಸಲು ನಯಾಪೈಸೆ ಇಲ್ಲವಾಗಿದೆ. ಭಿಕ್ಷೆ ಬೇಡಿದರೂ ಒಂದು ರೂ. ಸಿಗುತ್ತಿಲ್ಲ. ಸರ್ಕಾರದ ಬೊಕ್ಕಸವೂ ಬತ್ತಿಹೋಗಿದೆ. ಅಡಮಾನವಿಟ್ಟು ಹಣ ಪಡೆಯಲು 1 ಇಂಚು ಜಾಗವೂ ಸಹ ಸರ್ಕಾರದ ಬಳಿ ಇಲ್ಲ ಎಂದು ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದ ಸ್ಥಿತಿಯೂ ಇದಕ್ಕೆ ಹೊರತಾಗಿಲ್ಲ. ನಮ್ಮ ರಾಜ್ಯದ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ.ಶಿವಕುಮಾರ್ ಗ್ಯಾರಂಟಿ ಅನುಷ್ಠಾನ ಸಮಿತಿ ಹೆಸರಲ್ಲಿ, ಕಾಂಗ್ರೆಸ್ ಕಾರ್ಯಕರ್ತರಿಗೆ ತಿಂಗಳಿಗೆ 50 ರಿಂದ 60 ಸಾವಿರ ರೂ. ಸಂಬಳ ನೀಡುತ್ತಾ ರಾಜ್ಯದ ಬೊಕ್ಕಸವನ್ನು ಬರಿದು ಮಾಡುತ್ತಿದ್ದಾರೆ ಎಂದು ಜೆಡಿಎಸ್ ಆರೋಪಿಸಿದೆ.
ಹಿಮಾಚಲ ಪ್ರದೇಶ, ತೆಲಂಗಾಣ ಬಳಿಕ ಮುಂದಿನ ಸರದಿ ಕರ್ನಾಟಕ ?
ತೆಲಂಗಾಣದಲ್ಲೂ ಉಚಿತ ಗ್ಯಾರಂಟಿಗಳನ್ನು ಘೋಷಿಸಿ ಅಧಿಕಾರ ಹಿಡಿದಿರುವ ಕಾಂಗ್ರೆಸ್ ಸರ್ಕಾರ ಈಗ ಸಂಪೂರ್ಣ ದಿವಾಳಿಯಾಗಿ ಬಿಟ್ಟಿದೆ.
ಕರ್ನಾಟಕದ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಕೋಟ್ಯಂತರ ರೂಪಾಯಿ ಲೂಟಿಹೊಡೆದು, ಆ ದುಡ್ಡಲ್ಲಿ ಸರ್ಕಾರ ರಚಿಸಿದ್ದ ತೆಲಂಗಾಣ ಕಾಂಗ್ರೆಸ್ ಇಂದು,… pic.twitter.com/hqUlSt79Jp
— Janata Dal Secular (@JanataDal_S) August 26, 2025