ಹೈದರಾಬಾದ್: ತೆಲಂಗಾಣದ ಹನುಮಕೊಂಡ ಬಳಿ ಇಂದು ಟ್ರಕ್ ಹಾಗೂ ಕಾರು ನಡುವೆ ಡಿಕ್ಕಿಯಾಗಿ ನಾಲ್ವರು ಸಾವನ್ನಪ್ಪಿದ್ದಾರೆ.
ಎಲ್ಕತುರ್ಥಿ ಮಂಡಲದಲ್ಲಿ ಈ ಅಪಘಾತ ನಡೆದಿದ್ದು, ಪ್ರಯಾಣಿಕರಿದ್ದ ಕಾರಿಗೆ ಎದುರಿನಿಂದ ಬಂದ ಲಾರಿ ಲ ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ಕಾರಿನಲ್ಲಿದ್ದ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.





































































