ಸೂಲಿಬೆಲೆ ಚಕ್ರವರ್ತಿ -ಸಂಸದ ತೇಜಸ್ವಿ ಸೂರ್ಯ ಕೊಲೆಯತ್ನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರ ಸ್ವಾಮಿ ಎಸ್‍ಡಿಪಿಐ ಪರ ಬ್ಯಾಟ್ ಬೀಸಿದ್ದಾರೆ.ತೇಜಸ್ವಿ ಸೂರ್ಯ- ಸೂಲಿಬೆಲೆ ನಮ್ಮ ರಾಜ್ಯಕ್ಕೆ ಏನು ಕೊಡುಗೇನು ಕೊಟ್ಟಿಲ್ಲ , ಅವರೆಲ್ಲ ಯುಗಪುರುಷರೇ ಅಂತ ಲೇವಡಿ ಮಾಡಿದ್ದಾರೆ.ಅವರೆಲ್ಲ ನೆನಪು ಉಳಿಯುವಂತಹ ಕೆಲಸ ಮಾಡಿಲ್ಲ ಅಂತ ಖಾರವಾಗಿ ನುಡಿದಿದ್ದಾರೆ.
ಮೂರನೇ ವ್ಯಕ್ತಿ ಮಾಡಿದ ತಪ್ಪಿಗೆ ಒಂದು ಸಮುದಾಯದ ಮೇಲೆ ತಪ್ಪು ಹೊರಿಸೋದು ಸರಿಯಲ್ಲ . ಇನ್ನು ಕೊಲೆಯಾದ ವರುಣ್ ಗೆ ನ್ಯಾಯ ಸಿಗಬೇಕು.ಯಾರೋ ಮಾಡಿದ ತಪ್ಪಿಗೆ ಧರ್ಮದ ಹೆಸರನ್ನು ಮುಂದೆ ತರೋದು ಸರಿಯಲ್ಲ.ಇದರಲ್ಲಿ ಸಂಘಟನೆಗಳ ಕೈವಾಡವಿದ್ದರೆ ತನಿಖೆ ನಡೆದು ಕ್ರಮ ಕೈಗೊಳ್ಳಲಿ ಅಂತ ತಿಳಿಸಿದ್ರು.
ಇನ್ನು ಮಾತು ಮುಂದುವರೆಸಿದ ಮಾಜಿ ಮುಖ್ಯಮಂತ್ರಿ ದೇಶದಲ್ಲಿ ಬಿಜೆಪಿ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳೋದರ ಮೂಲಕ ಎಡವುತ್ತಿದೆ.ಮಂಗಳೂರು ಗಲಭೆಗೆ ಸರ್ಕಾರವೇ ಕಾರಣ. ಮಂಗಳೂರು ಗಲಭೆ ಕುರಿತು ಈಗಾಗಲೇ ವಿಡಿಯೋ ಬಿಡುಗಡೆಗೊಳಿಸಿದ್ದು ಈ ಬಗ್ಗೆ ಸದನದಲ್ಲಿ ಅಧಿಕಾರಿಗಳನ್ನು ಅಮಾನತುಗೊಳಿಸಲು ಪಟ್ಟು ಹಿಡಿಯುತ್ತೇನೆ ಅಂದಿದ್ದಾರೆ.
ಡಿ.22ರಂದು ಸಿಎಎ ಪರ ಸಮಾವೇಶ ಜರುಗುತ್ತಿದ್ದು ,31 ವರ್ಷದ ವರುಣ್ ಎಂಬಾತನಿಗೆ 6 ಎಸ್‍ಡಿಪಿಐ ಕಾರ್ಯಕರ್ತರು ಚಾಕುವಿನಿಂದ ಇರಿದಿದ್ದು , 6 ಜನ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸಿದ್ದು; ತನಿಖೆ ಸಂದರ್ಭದಲ್ಲಿ ಸೂಲಿಬೆಲೆ, ತೇಜಸ್ವಿ ಸೂರ್ಯ ಕೊಲೆಗೆ ಸಂಚು ನಡೆಸಲಾಗಿದೆ ಅಂತ ತಿಳಿದು ಬಂದಿದ್ದು ,ಇದೀಗ ಇದರ ಬಗ್ಗೆ ಭಾರಿಚರ್ಚೆ ನಡೆಯುತ್ತಿದೆ.